ಮುದ್ದೇಬಿಹಾಳ : ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರ ಅವಧಿಯಲ್ಲಿ ಮತಕ್ಷೇತ್ರಕ್ಕೆ ಬಿಡುಗಡೆಯಾದ ಅನುದಾನದ ಸಂಕ್ಷಿಪ್ತ ಮಾಹಿತಿಯನ್ನು ಮಾಧ್ಯಮದವರಿಗೆ ಶಾಸಕರ ಖಾಸಗಿ ಆಪ್ತ ಸಹಾಯಕ ನಾಗರಾಜ ತಂಗಡಗಿ ಅವರು ಕಳಿಸಿಕೊಟ್ಟಿದ್ದು ಅದರಲ್ಲಿ ಕ್ಷೇತ್ರಕ್ಕೆ ಬಿಡುಗಡೆಯಾದ ಅನುದಾನ ಲೆಕ್ಕ ಹಾಕಿದರೆ 394.47 ಕೋಟಿ ರೂ.ಮೊತ್ತವಾಗುತ್ತಿದೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada
ಆದರೆ, ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಠಿಯಲ್ಲಿ ಹೇಳುವಾಗ ಒಬ್ಬರು 350 ಕೋಟಿ,ಇನ್ನೊಬ್ಬರು 250 ಕೋಟಿ ಹಣ ಬಿಡುಗಡೆ ಆಗಿದೆ ಎಂದು ಹೇಳಿದ್ದು ಗೊಂದಲ ಮೂಡಿಸಿತ್ತು. ಇದೀಗ ಶಾಸಕರ ಆಪ್ತ ಸಹಾಯಕರು ಕೊಟ್ಟಿರುವ ಚೀಟಿಯಲ್ಲಿ ಅನುದಾನದ ಲೆಕ್ಕ ಹಾಕಿದಾಗ ಒಟ್ಟು 394.47 ಕೋಟಿ ರೂ.ಮೊತ್ತದ ಯೋಜನೆಗಳು ಶಾಸಕ ನಾಡಗೌಡರ ಅವಧಿಯಲ್ಲಿ ಅನುದಾನ ಬಂದಿರುವುದಾಗಿ ಹೇಳಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಶಾಸಕರ ಆಪ್ತ ಸಹಾಯಕರು ಕೊಟ್ಟಿರುವ ಚೀಟಿಯಲ್ಲಿರುವ ಅನುದಾನ ಮಾಹಿತಿ:
ಲೋಕೋಪಯೋಗಿ ಇಲಾಖೆಗೆ 115.8 ಕೋಟಿ ರೂ., ಸಣ್ಣ ನೀರಾವರಿಗೆ 15.75 ಕೋಟಿ.ರೂ,
ಮುದ್ದೇಬಿಹಾಳ, ನಾಲತವಾಡ ಹಾಗೂ ತಾಳಿಕೋಟಿ ಪಟ್ಟಣಗಳ ಯುಜಿಡಿಗಾಗಿ ಅಮೃತ 2.0 ಯೋಜನೆಗಾಗಿ 132.8ಕೋಟಿ ರೂ., ಮುದ್ದೇಬಿಹಾಳ ಮತಕ್ಷೇತ್ರದ ಪ್ರೌಢಶಾಲೆಗಳಿಗಾಗಿ 1 ಕೋಟಿ ರೂ., ಮುಖ್ಯಮಂತ್ರಿ ವಿಶೇಷ ಅನುದಾನ ಯೋಜನೆಯಡಿ 25 ಕೋಟಿ ರೂ., ರಾಜೀವ ಗಾಂಧಿ ವಸತಿ ಯೋಜನೆ ಅಡಿ 49 ಕೋಟಿ ರೂ., ತಾಳಿಕೋಟಿ ಹಾಗೂ ನಾಲತವಾಡದಲ್ಲಿ ರೈತಸಂಪರ್ಕ ಕೇಂದ್ರಕ್ಕೆ 4 ಕೋಟಿ ರೂ., ರಸ್ತೆಗಾಗಿ ಸಿಎಂ ವಿಶೇಷ ಅನುದಾನ 50 ಕೋಟಿ ರೂ.,
ಸಣ್ಣ ನೀರಾವರಿ ಇಲಾಖೆಯಿಂದ 1.12 ಕೋಟಿ ರೂಪಾಯಿ.
ಇದನ್ನೂ ಓದಿ: Muddebihal: ಮಾಜಿ ಶಾಸಕ ನಡಹಳ್ಳಿ ಆರೋಪಕ್ಕೆ ಕೈ ಮುಖಂಡರ ಪ್ರತ್ಯುತ್ತರ…! ಸುದ್ದಿಗೋಷ್ಠಿಯಲ್ಲಿ ಅಂಕಿ ಅಂಶ ನೀಡುವಾಗ ಗೊಂದಲ
