ಮುದ್ದೇಬಿಹಾಳ : ಪಟ್ಟಣದ ನಾಲತವಾಡ ರಸ್ತೆಯಲ್ಲಿ ಡಿ.28 ರಂದು ಬೆಳಗ್ಗೆ 11.15ಕ್ಕೆ ಬಾಲಾಜಿ ಇಂಡಸ್ಟಿçÃಜ್‌ನ ದಾಲ್ ಉತ್ಪಾದಕ ಘಟಕ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಅಂಕಲಿಮಠದ ವೀರಭದ್ರ ಸ್ವಾಮೀಜಿ, ಚಿತ್ರದುರ್ಗ ಗಾಣಿಗ ಗುರುಪೀಠದ ಜಯಬಸವ ಕುಮಾರ ಸ್ವಾಮೀಜಿ, ಬೈಲೂರ ತೋಂಟದಾರ್ಯಮಠದ ನಿಜಗುಣ ತೋಂಟದಾರ್ಯ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಸಮಾಜದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಕುಂಟೋಜಿ ಭಾವೈಕ್ಯತೆ ಹಿರೇಮಠದ ಚೆನ್ನವೀರ ಶಿವಾಚಾರ್ಯರು, ವಡವಡಗಿ ನಂದಿಮಠದ ಗುರುಶಿದ್ಧ ಸ್ವಾಮೀಜಿ, ತಾಳಿಕೋಟಿ ಖಾಸ್ಗತೇಶ್ವರಮಠದ ಸಿದ್ಧಲಿಂಗ ದೇವರು ದಿವ್ಯ ಸಾನಿಧ್ಯ ವಹಿಸುವರು.
ಮುಖ್ಯಅತಿಥಿಗಳಾಗಿ ಸಕ್ಕರೆ ಸಚಿವ ಶಿವಾನಂದ ಪಾಟೀಲ್, ಕೆಎಸ್‌ಡಿ ನಿಗಮದ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಸಿಂದಗಿ ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ, ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕೂಚಬಾಳ ಆಗಮಿಸುವರು ಎಂದು ಉದ್ಯಮಿಗಳಾದ ಶರಣು ಸಜ್ಜನ,ಸಂಗಮೇಶ ಕಡಿ, ಪ್ರಕಾಶ ಸಜ್ಜನ, ರುದ್ರಪ್ಪ ಕಡಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.