ಮುದ್ದೇಬಿಹಾಳ : ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ವಾರ್ಷಿಕ ಪ್ರಶಸ್ತಿಗೆ ಮುದ್ದೇಬಿಹಾಳ ತಾಲ್ಲೂಕಿನ ಡೈಲಿ ಸಾಲಾರ ಪತ್ರಿಕೆಯ ವರದಿಗಾರ ಶೇಖಲಾಡ್ಲೇಮಶ್ಯಾಕ ಅಬ್ದುಲ ಗಣಿ(ನದಾಫ), ಢವಳಗಿಯ ವಿಜಯವಾಣಿ ವರದಿಗಾರ ಮುತ್ತು ಬೀರಗೊಂಡ ಅವರಿಗೆ ಭಾನುವಾರ ವಿಜಯಪುರದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಚಿವ ಎಂ.ಬಿ.ಪಾಟೀಲ್, ಸಿಎಂ ಮಾಧ್ಯಮ ಕಾರ್ಯದರ್ಶಿ ಕೆ.ವಿ.ಪ್ರಭಾಕರ, ಕಾನಿಪ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು, ಕಾನಿಪ ಜಿಲ್ಲಾ ಅಧ್ಯಕ್ಷ ಸಂಗಮೇಶ ಚೂರಿ ಇದ್ದರು.