ಮುದ್ದೇಬಿಹಾಳ : ಕ್ರಿಕೇಟ್ ಪ್ರೀಮಿಯರ್ ಲೀಗ್-7 ಆವೃತ್ತಿಯ ಉದ್ಘಾಟನೆ ಜ.5 ರಂದು ಸಂಜೆ 5.30ಕ್ಕೆ ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.ಕುಂಟೋಜಿ ಹಿರೇಮಠದ ಚೆನ್ನವೀರ ಶಿವಾಚಾರ್ಯರು ,ತಾಳಿಕೋಟಿ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು, ಮೌಲಾನಾ ನಿಸಾರಹ್ಮದ ಜಾಮಯಿ ದಿವ್ಯ ಸಾನಿಧ್ಯ ವಹಿಸುವರು.
ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅಧ್ಯಕ್ಷತೆ ವಹಿಸುವರು. ಪ್ರಥಮ ಬಹುಮಾನದ ಪ್ರಾಯೋಜಕರಾದ ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಹಾಗೂ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸತ್ಯಜೀತ ಪಾಟೀಲ ಉದ್ಘಾಟಿಸುವರು.ಎರಡನೇ ಬಹುಮಾನದ ಪ್ರಾಯೋಜಕರಾದ ಸಮಾಜ ಸೇವಕ, ಟೆಂಟ್ ಹೌಸ್ ಸಂಘದ ಅಧ್ಯಕ್ಷ ಯಾಸೀನ ಸೋಠೆ ಪಂದ್ಯಾವಳಿ ಉದ್ಘಾಟಿಸುವರು.
ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ದೇವಿಕಾ ಸುಬ್ಬರಾವ ಫೌಂಡೇಶನ್ ಅಧ್ಯಕ್ಷೆ ಪಲ್ಲವಿ ನಾಡಗೌಡ, ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಮದರಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಅರವಿಂದ ಹೂಗಾರ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ, ಉದ್ದಿಮೆದಾರ ಮದನ್ ಪಟೇಲ್ , ಮುಖಂಡ ಶರಣು ಸಜ್ಜನ, ಯುವ ಕಾಂಗ್ರೆಸ್ ಮುಖಂಡ ರಾಹುಲ್ ನಾಡಗೌಡ ಸೇರಿದಂತೆ ಇತರರು ಆಗಮಿಸುವರು ಎಂದು ಪಂದ್ಯದ ಸಂಘಟಕರು ತಿಳಿಸಿದ್ದಾರೆ.