ಮುದ್ದೇಬಿಹಾಳ : ಸರ್ಕಾರದ ಸೇವೆಯಲ್ಲಿರುವ ಸಮಯದಲ್ಲಿ ಸಾರ್ವಜನಿಕರಿಂದ ಟೀಕೆ, ಟಿಪ್ಪಣಿಗಳು ಬರುವುದು ಸಹಜ. ಆದರೆ ಅವುಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ನಾವು ಜನರಿಗೆ ಸೇವೆ ನೀಡಬೇಕು ಎಂದು ಹೆಸ್ಕಾಂ ಹಿರಿಯ ಶಾಖಾಧಿಕಾರಿ ಎಸ್.ಎಸ್.ಪಾಟೀಲ್ ಹೇಳಿದರು.
ಬೇರೆಡೆ ವರ್ಗಾವಣೆಗೊಂಡ ಪ್ರಯುಕ್ತ ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.
Join Our Telegram: https://t.me/dcgkannada
ಮುದ್ದೇಬಿಹಾಳ ನಗರದಲ್ಲಿ ಸೇವೆ ಸಲ್ಲಿಸುವ ಸಮಯದಲ್ಲಿ ಜನರು ನೀಡಿದ ಸಹಕಾರ,ನಮ್ಮ ಇಲಾಖೆಯ ಸಿಬ್ಬಂದಿ ನೀಡಿದ ಗೌರವ ಎಂದಿಗೂ ಮರೆಯಲಾರೆ ಎಂದರು.
ಹೆಸ್ಕಾಂ ಎಇಇ ರಾಜಶೇಖರ ಹಾದಿಮನಿ, ಲೆಕ್ಕಾಧಿಕಾರಿ ಬಿ.ಎ.ಮಡಿವಾಳರ ಮಾತನಾಡಿ, ಪಾಟೀಲರು ಸೇವೆಯಲ್ಲಿದ್ದಾರೆಂದರೆ ಅಲ್ಲಿ ಸಮಸ್ಯೆಗಳಿಗೆ ಆಸ್ಪದವೇ ಇರುತ್ತಿರಲಿಲ್ಲ. ಎಲ್ಲರೊಂದಿಗೆ ನಗುಮೊಗದಿಂದ ಸೌಜನ್ಯದಿಂದ ಸೇವೆ ಸಲ್ಲಿಸುತ್ತಿದ್ದರು ಎಂದರು.
ಇದನ್ನೂ ಓದಿ: Murder case: ಶೆಡ್‌ನಲ್ಲಿ ನಡೀತು ಮತ್ತೊಂದು ಭೀಕರ ಹತ್ಯೆ..! ಇಲ್ಲಿ ಸ್ನೇಹಿತನೇ ಕೊಲೆಗಾರ
ತಂಗಡಗಿ ಶಾಖಾಧಿಕಾರಿ ಎಂ.ಎಸ್.ತೆಗ್ಗಿನಮಠ, ಆರ್.ಎಂ.ನಾಯ್ಕಮಕ್ಕಳ, ರಾಹುಲ್ ಪಾದಗಟ್ಟಿ ಮಾತನಾಡಿದರು.
ಸೆಕ್ಷನ್ ಅಧಿಕಾರಿಗಳಾದ ಸಂತೋಷ ನಡಗೇರಿ, ಸೋಮು ಗಸ್ತಿಗಾರ, ಆರ್.ಬಿ.ಹಿರೇಮಠ,ಸಚಿನ್ ಮೇಲ್ಮನಿ,ಅಣ್ಣಯ್ಯ ಸರಗಣಾಚಾರಿ, ಬಿ.ಸಿ.ಹಿರೇಮಠಮಲ್ಲಣ್ಣ ಮಡಿಕೇಶ್ವರ ಸೇರಿದಂತೆ ಹಲವರು ಇದ್ದರು.

ವಿದ್ಯುತ್ ಗುತ್ತಿಗೆದಾರರು, ಸಿಬ್ಬಂದಿ, ಲೈನಮನ್‌ಗಳು,ಹೊರಗುತ್ತಿಗೆ ಸಿಬ್ಬಂದಿ ವರ್ಗಾವಣೆಗೊಂಡ ಪಾಟೀಲ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.