Muddebihal: Patil elected president, Ramodagi unopposed as vice president

Muddebihal: ಪಾಟೀಲ್ ಅಧ್ಯಕ್ಷ, ರಾಮೋಡಗಿ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ

Muddebihal: ಪಾಟೀಲ್ ಅಧ್ಯಕ್ಷ, ರಾಮೋಡಗಿ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ

ಮುದ್ದೇಬಿಹಾಳ : ತಾಲೂಕಿನ ಹಿರೇಮುರಾಳ ಗ್ರಾಮದ ಶ್ರೀ ಸಂಗಮೇಶ್ವರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಲ್ಲನಗೌಡ ಪಾಟೀಲ್, ಉಪಾಧ್ಯಕ್ಷರಾಗಿ ಚಂದ್ರಶೇಖರ ರಾಮೋಡಗಿ ಅವರು ಅವಿರೋಧ ಆಯ್ಕೆಯಾದರು.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada

ತಾಲ್ಲೂಕಿನ ಹಿರೇಮುರಾಳದಲ್ಲಿ ಸಂಘದ ಕಚೇರಿಯಲ್ಲಿ ಸೋಮುವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಮಲ್ಲನಗೌಡ ಪಾಟೀಲ್, ಉಪಾಧ್ಯಕ್ಷರಾಗಿ ಚಂದ್ರಶೇಖರ ರಾಮೋಡಗಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ ಉತ್ನಾಳ ಘೋಷಿಸಿದರು.

ನೂತನ ಅಧ್ಯಕ್ಷ ಮಲ್ಲನಗೌಡ ಬಿ ಪಾಟೀಲ್ ಮಾತನಾಡಿ,ಸಂಘದ ಸ್ವಂತ ಕಟ್ಟಡದ ಕಾಮಗಾರಿ ಚಾಲನೆಯಲ್ಲಿದ್ದು ಕೆಲವೇ ತಿಂಗಳಲ್ಲಿ ನೂತನ ಕಟ್ಟಡ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಅಮರೇಶ ಬಿ.ಬಾಗೇವಾಡಿ ಮತ್ತು ಸಿಬ್ಬಂದಿ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಸನ್ಮಾನಿಸಿದರು.

ಇದನ್ನೂ ಓದಿ: ‘ಶಾಸಕರೇ ಉತ್ತರ ಕೊಡಲಿ, ಅವರ ಬಾಲಂಗೋಚಿಗಳಲ್ಲ’-ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರ ವಾಗ್ದಾಳಿ

ಸಂಘದ ನಿರ್ದೇಶಕರು, ಮುಖಂಡರಾದ ಗಿರೀಶಗೌಡ ಪಾಟೀಲ್, ನಾಗರಾಜ ರಾಮೋಡಗಿ, ರಮೇಶ ವಗ್ಗರ, ಮಲ್ಲಣ್ಣ ರಕ್ಕಸಗಿ, ಬಿ.ಬಿ.ಪಾಟೀಲ್ ಮೊದಲಾದವರು ಇದ್ದರು.

Latest News

Il Fantasioso Giocatore di Pollo in MyStake Gioco

MyStake Chicken Gioco è un gioco dei slot che presenta una

Chicken Road od InOut

Slávte slovenskí hráči! V tejto recenzii sa vám priblížime k jednému

Chicken Road par InOut

La nouvelle production de InOut, un studio émergent dans le monde

La Lotería de Pólvora con el Gallo de MyStake

Presentación y Temática MyStake Chicken es un juego de ruleta estilo

ಸವಿತಾ ಮಹರ್ಷಿಗಳ ಆದರ್ಶ ಪಾಲನೆ ಮಾಡಿ-ತಹಶೀಲ್ದಾರ್ ಕೀರ್ತಿ ಚಾಲಕ್

ಸವಿತಾ ಮಹರ್ಷಿಗಳ ಆದರ್ಶ ಪಾಲನೆ ಮಾಡಿ-ತಹಶೀಲ್ದಾರ್ ಕೀರ್ತಿ ಚಾಲಕ್

ಮುದ್ದೇಬಿಹಾಳ : ಸವಿತ ಮಹರ್ಷಿಗಳ ಆದರ್ಶಗಳನ್ನು ಸಮಾಜದ ಬಾಂಧವರು ಅಳವಡಿಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಬರಬೇಕು ಎಂದು ತಹಶೀಲ್ದಾರ್ ಕೀರ್ತಿ ಚಾಲಕ್ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಭಾನುವಾರ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಸವಿತ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ದಿಕ್ಸೂಚಿ ಭಾಷಣ ಮಾಡಿದ ಸಂಶೋಧಕ ಮಹೇಶ ತೇಲಂಗಿ , "ಇಡೀ ಜಗತ್ತಿಗೆ ಅಜ್ಞಾನದ ಕತ್ತಲೆ ಕಳೆದು ಸುಜ್ಞಾನದ ದಾರಿ ತೋರಿಸಿದ ಉಪನಯನ ಸಂಸ್ಕಾರದ ಜನಕರು ಶ್ರೀ ಸವಿತ

ಅಂಗಡಿಯಾತನಿಗೆ ಗನ್ ತೋರಿಸಿ ಹಾಡಹಗಲೇ ಬಂಗಾರದ ಅಂಗಡಿ ದರೋಡೆ

ಅಂಗಡಿಯಾತನಿಗೆ ಗನ್ ತೋರಿಸಿ ಹಾಡಹಗಲೇ ಬಂಗಾರದ ಅಂಗಡಿ ದರೋಡೆ

ವಿಜಯಪುರ : ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದ ಭೂಮಿಕಾ ಜ್ಯುವೆಲ್ಲರಿ ಶಾಪ್‌ಗೆ ಇಬ್ಬರು ಅಪರಿಚಿತ ಮುಸುಕುಧಾರಿಗಳು ನುಗ್ಗಿ ಅಂಗಡಿ ಮಾಲೀಕನಿಗೆ ಗನ್ ತೋರಿಸಿ ಚಿನ್ನಾಭರಣ ದರೋಡೆ ನಡೆಸಿದ ಘಟನೆ ಹಾಡಹಗಲೇ ನಡೆದಿದ್ದು ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಹಲಸಂಗಿಯ ಮಹಾರುದ್ರ ಕಂಚಗಾರ ಎಂಬುವರಿಗೆ ಸೇರಿದ ಬಂಗಾರದ ಅಂಗಡಿ ಮೇಲೆ ಮುಸುಕುಧಾರಿ ವ್ಯಕ್ತಿಗಳು ಇಬ್ಬರೂ ಬೈಕ್ ಮೇಲೆ ಬಂದು ಅಂಗಡಿಯಲ್ಲಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ದೋಚಿ ಪರಾರಿಯಾಗಿದ್ದಾರೆ. ಘಟನೆ