ಮುದ್ದೇಬಿಹಾಳ : ಬ್ರಹ್ಮಶ್ರೀ ನಾರಾಯಣ ಗುರುವಿನ 170ನೇ ಜಯಂತೋತ್ಸವದ ಅಂಗವಾಗಿ ತಾಲ್ಲೂಕಿನ ರೂಢಗಿಯಲ್ಲಿ ರಾಜ್ಯಮಟ್ಟದ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
Join Our Telegram: https://t.me/dcgkannada
ಸ್ಪರ್ಧೆಯಲ್ಲಿ 40ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಪ್ರಥಮ ಸ್ಥಾನ ಮೈಲೇಶ್ವರದ ಬ್ರಿಲಿಯಂಟ್ ಶಾಲೆ,ದ್ವಿತೀಯ ಸ್ಥಾನ ಯರಝರಿ ಶಾಲೆ,ಮೂರನೇ ಸ್ಥಾನ ಅರಸನಾಳ ಶಾಲೆ ಮಕ್ಕಳು ಪಡೆದುಕೊಂಡರು.
ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಪಾಂಡು ಈಳಗೇರ ಮಾತನಾಡಿ, ಜಯಂತೋತ್ಸವ ಅಂದರೆ ಹಲವು ಯುವಕರಲ್ಲಿ ಮೊದಲು ಬರುವುದೆಂದರೆ ಡಿಜೆ ಹಚ್ಚಿ ಕುಣಿದು ಕುಪ್ಪಳಿಸುವುದೇ ಆಚರಣೆ ಎಂಬ ಭಾವನೆ ಇದೆ.ಅದರಲ್ಲಿ ವಿದ್ಯಾರ್ಥಿಗಳ ಜ್ಞಾನ ಬೆಳೆಸುವ ಕಾರ್ಯಕ್ರಮಗಳ ಸಂಘಟನೆ ಶ್ಲಾಘನೀಯ ಎಂದರು.
ರಸಪ್ರಶ್ನೆ ಕಾರ್ಯಕ್ರಮವನ್ನು ರೂಢಗಿ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕರಾದ ಬಿ.ಎಸ್. ಚಲವಾದಿ, ಶಿವಾನಂದ ಬೇಲಾಳ, ಟಿ.ಪಿ.ಮುತ್ತಿನ ಮತ್ತು ಶಿಕ್ಷಕ ವೃಂದದವರು ನಡೆಸಿಕೊಟ್ಟರು.
ಇದನ್ನೂ ಓದಿ: Viral video: ಹೆಂಗಸಿನ ಮೇಲೆ ವ್ಯಾಮೋಹವಿದ್ದರೆ ನಮ್ಮ ಬಳಿ ಬನ್ನಿ: ರೆಡ್ ಲೈಟ್ ಏರಿಯಾ ಮಹಿಳೆಯ ಆಕ್ರೋಶ..!
ಗ್ರಾಪಂ ಅಧ್ಯಕ್ಷರಾದ ಬಸವರಾಜ ಬೆಲ್ಲದ, ಎಸ್ಡಿಎಂಸಿ ಅಧ್ಯಕ್ಷರಾದ ಅಶೋಕ ಮೆಣಸಿನಕಾಯಿ, ಶ್ರೀಧರ್ ದೊಡಮನಿ, ನಾರಾಯಣ ಗುರು ಯುವಕ ಸಂಘದ ಅಧ್ಯಕ್ಷರಾದ ಮುಕುಂದ ಈಳಗೇರ, ಕಾರ್ಯದರ್ಶಿ ಪ್ರಕಾಶ ಕುಂದರಗಿ, ಶಿವಾನಂದ ಈಳಗೇರ, ಈಶ್ವರ ಈಳಗೇರ, ಅಶೋಕ ಕುಂದರಗಿ, ಬಸವರಾಜ ಕುಂದರಗಿ, ಬಸವರಾಜ ಈಳಗೇರ, ಯಮನೇಶ ಈಳಗೇರ, ಶಿವಾನಂದ ಕೋರಿ,ಸಂಗಮೇಶ ಹರಿವಾಳ,ಮುದಕಪ್ಪ ಕುಂದರಗಿ, ನಿಂಗು ಕೊಲ್ಕಾರ,ಸಂಜು ಚವ್ಹಾಣ, ದಸ್ತಗೀರ ಮಾಳುರ, ಎಸ್.ಪಿ.ಸೇವಾಲಾಲ್, ಶ್ರೀಶೈಲ ಈಳಗೇರ ಮೊದಲಾದವರು ಇದ್ದರು.