Viral video: Come to us if you are infatuated with a woman

Viral video: ಹೆಂಗಸಿನ ಮೇಲೆ ವ್ಯಾಮೋಹವಿದ್ದರೆ ನಮ್ಮ ಬಳಿ ಬನ್ನಿ: ರೆಡ್ ಲೈಟ್ ಏರಿಯಾ ಮಹಿಳೆಯ ಆಕ್ರೋಶ..!

Viral video: ಹೆಂಗಸಿನ ಮೇಲೆ ವ್ಯಾಮೋಹವಿದ್ದರೆ ನಮ್ಮ ಬಳಿ ಬನ್ನಿ: ರೆಡ್ ಲೈಟ್ ಏರಿಯಾ ಮಹಿಳೆಯ ಆಕ್ರೋಶ..!

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ತರಬೇತಿ ನಿರತ ವೈದ್ಯೆಯ ಅತ್ಯಾಚಾರ ಮಾಡಿ ಕೊಲೆಗೈದಿರುವ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಮಹಿಳೆಯೊಬ್ಬರು ನೀಡಿರುವ ಪ್ರತಿಕ್ರಿಯೆ ಭಾರಿ‌ ಸಂಚಲನ ಸೃಷ್ಟಿಸಿದೆ. (Viral video)

Join Our Telegram: https://t.me/dcgkannada

ಹೌದು, ಈ ಕುರಿತು ಕೋಲ್ಕತಾದ ಸೋನಾಗಾಚಿ ರೆಡ್ ಲೈಟ್ ಪ್ರದೇಶದ ಮಹಿಳೆಯೊಬ್ಬರ ಸಂವೇದನಾಶೀಲ ಹೇಳಿಕೆಯು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral video) ಆಗಿದ್ದು, ಹಲ್ ಚಲ್ ಸೃಷ್ಟಿಸಿದೆ.

‘ನಿಮಿಷಗಳ ಕಾಮಕ್ಕಾಗಿ ಮಹಿಳೆಯರನ್ನು ಅತ್ಯಾಚಾರ ಮಾಡಿ ಕೊಲ್ಲುವ ಬದಲು ರೆಡ್ ಲೈಟ್ ಏರಿಯಾಗೆ ಬನ್ನಿ’ ಎಂದು ಪುರುಷರಿಗೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: News update: ಪವಿತ್ರ ಗೌಡಗೆ ಶಾಕಿಂಗ್ ನ್ಯೂಸ್!

‘ನಿಮಗೆ ಹೆಂಗಸಿನ ಮೇಲೆ ಅಷ್ಟೊಂದು ವ್ಯಾಮೋಹವಿದ್ದರೆ ನಮ್ಮ ಬಳಿಗೆ ಬನ್ನಿ. ದಯವಿಟ್ಟು ಕೆಲಸಕ್ಕೆ ಹೋಗುವ ಮಹಿಳೆಯರ ಜೀವನವನ್ನು ಹಾಳು ಮಾಡಬೇಡಿ. ಅತ್ಯಾಚಾರವನ್ನು ಮಾಡುವ ಮೂಲಕ ಅವರ ಜೀವನವನ್ನು ನಾಶಪಡಿಸಬೇಡಿ’ ಎಂದು ಹೇಳಿದ್ದಾರೆ.

‘ನಾವು ಇಲ್ಲಿ ರೆಡ್ ಲೈಟ್ ಏರಿಯಾದಲ್ಲಿ ಇದ್ದೇವೆ, ನೀವು ಇಲ್ಲಿಗೆ ಬರಬಹುದು. ಇಲ್ಲಿ 20-50 ರೂಪಾಯಿಗೆ ಕೆಲಸ ಮಾಡುವ ಹುಡುಗಿಯರು ಇದ್ದಾರೆ. ಆದ್ದರಿಂದ, ದಯವಿಟ್ಟು ಕೆಲಸಕ್ಕೆ ಹೋಗುವ ಮಹಿಳೆಯರನ್ನು ಗುರಿಯಾಗಿಸಬೇಡಿ. ನಾವು ನಮ್ಮ ಮನಸ್ಥಿತಿಯನ್ನು ಬದಲಾಯಿಸಬೇಕಾಗಿದೆ’ ಎಂದು ಹೇಯ ಕೃತ್ಯವನ್ನು ಖಂಡಿಸಿದ್ದಾರೆ.

ಈ ಹೇಳಿಕೆ ನೀಡಿರುವ ಮಹಿಳೆಯನ್ನು ನೆಟ್ಟಿಗರು ಹೀರೋ ಎಂದು ಕರೆದಿದ್ದಾರೆ. RESPECT ಎಂಬ ಒಕ್ಕಣೆಯೊಂದಿಗೆ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

Latest News

ಬನಶಂಕರಿ ಪತ್ತಿನ ಸಹಕಾರಿ ಸಂಘಕ್ಕೆ 14.56 ಲಕ್ಷ ರೂ.ಲಾಭ :                                      ‘ನೇಕಾರರ ಸಂಕಷ್ಟಕ್ಕೆ ಸರ್ಕಾರ ನೆರವು ಒದಗಿಸಲಿ’

ಬನಶಂಕರಿ ಪತ್ತಿನ ಸಹಕಾರಿ ಸಂಘಕ್ಕೆ 14.56 ಲಕ್ಷ ರೂ.ಲಾಭ : ‘ನೇಕಾರರ ಸಂಕಷ್ಟಕ್ಕೆ ಸರ್ಕಾರ ನೆರವು ಒದಗಿಸಲಿ’

ಮುದ್ದೇಬಿಹಾಳ : ಭೀಕರ ಬರಗಾಲದ ಸಮಯದಲ್ಲಿ ನೇಕಾರರಿಗೂ ಸಮರ್ಪಕ ಕಚ್ಚಾನೂಲು,ಬೀಮ್ ಪೂರೈಕೆ ಆಗುತ್ತಿಲ್ಲ.ಕೈಮಗ್ಗ ಹಾಗೂ

ಕಲಾಂ ಮೈನಾರಿಟಿ ಪತ್ತಿನ ಸಹಕಾರಿ ಸಂಘದಿoದ 3ಕೋಟಿ ಗೂ ಅಧಿಕ ರೂ.ಸಾಲ ಹಂಚಿಕೆ

ಕಲಾಂ ಮೈನಾರಿಟಿ ಪತ್ತಿನ ಸಹಕಾರಿ ಸಂಘದಿoದ 3ಕೋಟಿ ಗೂ ಅಧಿಕ ರೂ.ಸಾಲ ಹಂಚಿಕೆ

ಮುದ್ದೇಬಿಹಾಳ : ತಾಲೂಕಿನ ಹಿರೇಮುರಾಳದ ಕಲಾಂ ಅಲ್ಪಸಂಖ್ಯಾತ ಪತ್ತಿನ ಸಹಕಾರ ಸಂಘ ನಿಯಮಿತ 9

ಉದ್ಯಮಿ ಶರಣು ಸಜ್ಜನರಿಗೆ ಅಭಿನಂದನೆ:                                       ‘ನಿನ್ನ ನೋಡಿಕೊಳ್ತೀನಿ ಅನ್ನೋರು ಯಾರೂ ಉಳಿದಿಲ್ಲ’-ಕೂಚಬಾಳ

ಉದ್ಯಮಿ ಶರಣು ಸಜ್ಜನರಿಗೆ ಅಭಿನಂದನೆ: ‘ನಿನ್ನ ನೋಡಿಕೊಳ್ತೀನಿ ಅನ್ನೋರು ಯಾರೂ ಉಳಿದಿಲ್ಲ’-ಕೂಚಬಾಳ

ಮುದ್ದೇಬಿಹಾಳ : ಸಮಾಜದಲ್ಲಿ ನಿನ್ನ ನೋಡಿಕೊಳ್ತೀನಿ ಎಂದವರು ಯಾರೂ ಉಳಿದಿಲ್ಲ. ಬಾಗಿದ್ದು ಮಾತ್ರ ಬಹಳ

9.49 ಲಕ್ಷ ರೂ.ಲಾಭ :                                                           ಹಡಲಗೇರಿ ಪಿಕೆಪಿಎಸ್‌ನಿಂದ 4.47 ಕೋಟಿ ರೂ.ಸಾಲ ಹಂಚಿಕೆ

9.49 ಲಕ್ಷ ರೂ.ಲಾಭ : ಹಡಲಗೇರಿ ಪಿಕೆಪಿಎಸ್‌ನಿಂದ 4.47 ಕೋಟಿ ರೂ.ಸಾಲ ಹಂಚಿಕೆ

ಮುದ್ದೇಬಿಹಾಳ : ಈ ಆರ್ಥಿಕ ವರ್ಷದಲ್ಲಿ ಒಟ್ಟು 4.47 ಕೋಟಿ ರೂ.ಸಾಲ ರೈತರಿಗೆ ಹಂಚಿಕೆ

ನಾಗರಬೆಟ್ಟ ಏತ ನೀರಾವರಿ ಯೋಜನೆ:                                ಅ.5ರೊಳಗೆ ಬಾಕಿ ಕೆಲಸ ಪೂರ್ಣಗೊಳಿಸದಿದ್ದರೆ ಉಗ್ರ ಹೋರಾಟ-ಶಾಂತಗೌಡ ಪಾಟೀಲ್

ನಾಗರಬೆಟ್ಟ ಏತ ನೀರಾವರಿ ಯೋಜನೆ: ಅ.5ರೊಳಗೆ ಬಾಕಿ ಕೆಲಸ ಪೂರ್ಣಗೊಳಿಸದಿದ್ದರೆ ಉಗ್ರ ಹೋರಾಟ-ಶಾಂತಗೌಡ ಪಾಟೀಲ್

ಮುದ್ದೇಬಿಹಾಳ : ನಾಗರಬೆಟ್ಟ ಏತ ನೀರಾವರಿ ಯೋಜನೆಗೆ 2018ರಲ್ಲಿಯೇ ಟೆಂಡರ್ ಆಗಿದ್ದು ಕಳೆದ ಎಂಟು ವರ್ಷಗಳಿಂದ ರೈತರ ಜಮೀನಿಗೆ ಅತ್ತ ಹನಿ ನೀರೂ ಹರಿದಿಲ್ಲ,ಇತ್ತ ಪರಿಹಾರವೂ ಸಿಕ್ಕಿಲ್ಲ.ಅ.5ರವರೆಗೆ ಬಾಕಿ ಕೆಲಸ ಪೂರ್ಣಗೊಳಿಸದಿದ್ದರೆ ನಾಗರಬೆಟ್ಟದಲ್ಲಿ ರೈತರೊಂದಿಗೆ ಹೋರಾಟ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು. ಪಟ್ಟಣದ ಪಲ್ಲವಿ ಹೊಟೇಲ್ ಸಭಾಂಗಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 14 ಹಳ್ಳಿಗಳ

ಸೆ.20 ರಂದು ಕರಾಟೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ

ಸೆ.20 ರಂದು ಕರಾಟೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ

ಮುದ್ದೇಬಿಹಾಳ : ರಾಜ್ಯ ಕರಾಟೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಸ್ಕೇಟಿಂಗ್ ಪಂದ್ಯಾವಳಿಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಏಕಲವ್ಯ ರೋಲರ್ ಸ್ಕೇಟಿಂಗ್ ಅಕಾಡೆಮಿಯ ವಿದ್ಯಾರ್ಥಿಗಳ ಸನ್ಮಾನ ಸಮಾರಂಭವನ್ನು ಸೆ.20ರಂದು ಬೆಳಗ್ಗೆ 10.30ಕ್ಕೆ ಪಟ್ಟಣದ ವಿದ್ಯಾನಗರದಲ್ಲಿರುವ ಓಸ್ವಾಲ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರಾಟೆ ಶಿಕ್ಷಕರ ಸಂಘದ ವಕ್ತಾರ ಶಿವಕುಮಾರ ಶಾರದಳ್ಳಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯ