Muddebihal: TAPCMS administration again to Manohar Matei 'Kai'

TAPCMS ಆಡಳಿತ ಮತ್ತೆ ಮನೋಹರ ಮೇಟಿ ‘ಕೈ’ಗೆ

TAPCMS ಆಡಳಿತ ಮತ್ತೆ ಮನೋಹರ ಮೇಟಿ ‘ಕೈ’ಗೆ

ಮುದ್ದೇಬಿಹಾಳ : ಇಲ್ಲಿನ ಟಿ.ಎ.ಪಿ.ಸಿ.ಎಂ.ಎಸ್ ಆಡಳಿತ ಮತ್ತೆ ಎರಡನೇ ಬಾರಿಗೆ ಅಧ್ಯಕ್ಷರಾಗಿ ಮನೋಹರ ಮೇಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು ಟಿಎಪಿಸಿಎಂಎಸ್‌ನಲ್ಲಿ ತಮ್ಮ ಹಿಡಿತ ಸಡಿಲಗೊಂಡಿಲ್ಲ ಎಂಬ ಸಂದೇಶವನ್ನು ತಮ್ಮ ವಿರೋಧಿಗಳಿಗೆ ರವಾನಿಸಿದ್ದಾರೆ.

ಪಟ್ಟಣದ ಎಪಿಎಂಸಿಯಲ್ಲಿರುವ ಸಂಘದ ಕಚೇರಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಮನೋಹರ ಎಸ್.ಮೇಟಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚಿದಾನಂದ ಎಂ. ಸೀತಿಮನಿ ಎರಡು ಸ್ಥಾನಗಳಿಗೆ ತಲಾ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಆರ್.ಎನ್.ಆಳೂರ ಅವಿರೋಧ ಆಯ್ಕೆ ಘೋಷಣೆ ಮಾಡಿದರು.

ಅಧ್ಯಕ್ಷ ಸ್ಥಾನಕ್ಕೆ ಮುತ್ತಣ್ಣ ಮುತ್ತಣ್ಣವರ ಸೂಚಕರಾಗಿ, ನೀಲಕಂಠಗೌಡ ಗೌಡರ ಅನುಮೋದಕರಾಗಿ ಸಹಿ ಮಾಡಿದರು. ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜ ಬಗಲಿ ಸೂಚಕರಾಗಿ, ಗುರಣ್ಣ ಹತ್ತೂರ ಅನುಮೋದಕರಾಗಿ ಸಹಿ ಮಾಡಿದರು.

ನಿರ್ದೇಶಕರಾದ ಬಸವರಾಜ ಇಸ್ಲಾಂಪೂರ, ಸುರೇಶ ಹಳೇಮನಿ, ಮಲ್ಲನಗೌಡ ಬಿರಾದಾರ, ಗುರುಲಿಂಗಪ್ಪ ಹಡ್ಲಗೇರಿ, ವನಮಾಲಾ ಮೇಟಿ, ಮಲ್ಲಮ್ಮ ಪಾಟೀಲ ಇದ್ದರು.

ಚುನಾವಣಾ ಕಾರ್ಯಕ್ಕೆ ಸಹಾಯಕ ಚುನಾವಣಾಧಿಕಾರಿ ಸಹಕಾರ ಇಲಾಖೆಯ ಅಧಿಕಾರಿ ಸಂತೋಷ ಇಲಕಲ್, ವ್ಯವಸ್ಥಾಪಕ ವಿ.ಎಸ್.ಉತ್ನಾಳ, ಸಹಾಯಕ ವ್ಯವಸ್ಥಾಪಕ ಗುರುರಾಜ ಕೋನರೆಡ್ಡಿ, ಸಿಬ್ಬಂದಿ ಎಂ.ಎಂ.ಪಾಟೀಲ, ಎಸ್.ಬಿ.ಚಿನಿವಾರ, ಸವಿತಾ ಚೌಧರಿ ಕಾರ್ಯನಿರ್ವಹಿಸಿದರು.

ರಹಸ್ಯ ಬಿಟ್ಟುಕೊಡದ ನಾಡಗೌಡ : ಟಿಎಪಿಸಿಎಂಎಸ್‌ನಲ್ಲಿ ಅಧಿಕಾರ ಹಂಚಿಕೆ ಸೂತ್ರವೇನಾದರೂ ನಡೆದಿದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ನಾಡಗೌಡರು, ಸದ್ಯಕ್ಕೆ ಅಧ್ಯಕ್ಷರಾಗಿ ಮೇಟಿ,ಉಪಾಧ್ಯಕ್ಷರಾಗಿ ಸೀತಿಮನಿ ಆಯ್ಕೆಯಾಗಿದ್ದಾರೆ. ಇವರು ಮುಂದುವರೆಯಲಿದ್ದಾರೆ.ಇವರು ಹೇಗೆ ಕೆಲಸ ಮಾಡಲಿದ್ದಾರೆ ಎಂಬುದನ್ನು ಗಮನಿಸುತ್ತೇವೆ. ಇದು ರಾಜಕಾರಣ, ಇಲ್ಲಿ ಏನು ನಡೆಯುತ್ತದೆ ಎಂದು ಹೇಳಲಾಗದು.ಒಪ್ಪಂದ ಸೂತ್ರದ ಕುರಿತು ಚರ್ಚೆ ನಡೆಸಿದ್ದೇವೆ.ಈಗಲೇ ಏನೂ ಹೇಳಲಾಗದು ಎಂದು ಅಧಿಕಾರ ಹಂಚಿಕೆ ಸೂತ್ರದ ರಹಸ್ಯವನ್ನು ನಾಡಗೌಡರು ಬಿಟ್ಟುಕೊಡಲಿಲ್ಲ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ. ಕೆ. ಬಿರಾದಾರ, ಕಾಂಗ್ರೆಸ್ ಮುಖಂಡ ಸಿ. ಬಿ. ಅಸ್ಕಿ ಮಾತನಾಡಿ, ಟಿಎಪಿಸಿಎಂಎಸ್‌ನಲ್ಲಿ ಶಾಸಕರ ನಿರ್ದೇಶನದಂತೆ ಕಾಂಗ್ರೆಸ್ ಪಕ್ಷದ ಬೆಂಬಲಿತರ ಕೈಗೆ ಅಧಿಕಾರ ಸಿಕ್ಕಿದೆ. ಮುಂಬರುವ ದಿನಗಳಲ್ಲಿ ರೈತರಿಗೆ ಅನುಕೂಲ ಒದಗಿಸುವ ಕಾರ್ಯ ಮಾಡಲಿ ಎಂದು ತಿಳಿಸಿದರು. ವಿಜಯೋತ್ಸವದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಮೇಟಿ, ಸೀತಿಮನಿ ಅಭಿಮಾನಿಗಳು ಇದ್ದರು.

Latest News

ವಿದ್ಯಾಸ್ಪೂರ್ತಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ:      ಸ್ವಾತಂತ್ರ್ಯದ ಉಳಿವಿಗೆ ಶ್ರಮಿಸೋಣ-ರಾಜೇಶ್ವರಿ ಪಾಟೀಲ್

ವಿದ್ಯಾಸ್ಪೂರ್ತಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ: ಸ್ವಾತಂತ್ರ್ಯದ ಉಳಿವಿಗೆ ಶ್ರಮಿಸೋಣ-ರಾಜೇಶ್ವರಿ ಪಾಟೀಲ್

ಮುದ್ದೇಬಿಹಾಳ : ಲಕ್ಷಾಂತರ ಜನ ಹಿರಿಯರು,ಯುವಕರ ತ್ಯಾಗ,ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದು ಅದನ್ನು

ತಂಗಡಗಿಯಲ್ಲಿ ಧ್ವಜಾರೋಹಣ: ಪೊಲೀಸರಿಗೆ ಸನ್ಮಾನ

ತಂಗಡಗಿಯಲ್ಲಿ ಧ್ವಜಾರೋಹಣ: ಪೊಲೀಸರಿಗೆ ಸನ್ಮಾನ

ಮುದ್ದೇಬಿಹಾಳ : ತಾಲ್ಲೂಕಿನ ತಂಗಡಗಿ ಗ್ರಾಮದ ಸ್ನೇಹಸಿರಿ ಸೇವಾ ಸಂಘದಿಂದ 80ನೇ ಸ್ವಾತಂತ್ರ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.

ಮುದ್ದೇಬಿಹಾಳದಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯೋತ್ಸವ; ಬರಗಾಲದ ಹೆಸರಿನಲ್ಲಿ ಜನರ ದಾರಿ ತಪ್ಪಿಸುವ ಹುನ್ನಾರ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳದಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯೋತ್ಸವ; ಬರಗಾಲದ ಹೆಸರಿನಲ್ಲಿ ಜನರ ದಾರಿ ತಪ್ಪಿಸುವ ಹುನ್ನಾರ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಈ ವರ್ಷ ಹಿಂದೆoದಿಗಿoತಲೂ ಅಧಿಕ ಪ್ರಮಾಣದಲ್ಲಿ ಬರಗಾಲ ಕಾಡುತ್ತಿದೆ.ಆದರೆ ಕೆಲವರು ಬರಗಾಲವನ್ನು

ಶೇರುದಾರರಿಗೆ ಶೇ.12 ರಷ್ಟು ಲಾಭಾಂಶ ಘೋಷಣೆ;              ಶರಣ ವೀರೇಶ್ವರ ಬ್ಯಾಂಕಿಗೆ 1.15 ಕೋಟಿ ರೂ.ಲಾಭ-ಎಂ.ಎಸ್.ಪಾಟೀಲ್

ಶೇರುದಾರರಿಗೆ ಶೇ.12 ರಷ್ಟು ಲಾಭಾಂಶ ಘೋಷಣೆ; ಶರಣ ವೀರೇಶ್ವರ ಬ್ಯಾಂಕಿಗೆ 1.15 ಕೋಟಿ ರೂ.ಲಾಭ-ಎಂ.ಎಸ್.ಪಾಟೀಲ್

ಮುದ್ದೇಬಿಹಾಳ / ನಾಲತವಾಡ : ಗ್ರಾಹಕರ ಉತ್ತಮ ಸಹಕಾರ ಹಾಗೂ ಶೇರುದಾರರ ಬೆಂಬಲ,ಆಡಳಿತ ಮಂಡಳಿಯ

ಆ.11,12 ರಂದು ಶಾಸಕ ನಾಡಗೌಡರಿಂದ ಬರ ಪರಿಸ್ಥಿತಿ ವೀಕ್ಷಣೆ

ಆ.11,12 ರಂದು ಶಾಸಕ ನಾಡಗೌಡರಿಂದ ಬರ ಪರಿಸ್ಥಿತಿ ವೀಕ್ಷಣೆ

ಮುದ್ದೇಬಿಹಾಳ : ಕೆಎಸ್‌ಡಿಎಲ್ ಅಧ್ಯಕ್ಷ,ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಬರ ಪರಿಸ್ಥಿತಿ ಕುರಿತು ಆ.11,12 ರಂದು ಅವಲೋಕನ ನಡೆಸಿ ಬೆಳೆ ವೀಕ್ಷಣೆ ಮಾಡಲಿದ್ದಾರೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ. ಆ.11 ರದು ಬೆಳಗ್ಗೆ 11.30ಕ್ಕೆ ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಬರ ಪರಿಸ್ಥಿತಿ ಕುರಿತು ಚರ್ಚೆ, ಮದ್ಯಾಹ್ನ 2.30ಕ್ಕೆ ಬರಪೀಡಿತ ಪ್ರದೇಶಗಳಾದ ಹರಿಂದ್ರಾಳ,ಹಡಲಗೇರಿ ಗ್ರಾಮಗಳಲ್ಲಿ ಹತ್ತಿ,ತೊಗರಿ,ಸಜ್ಜೆ ಬೆಳೆಗಳ ವೀಕ್ಷಣೆ,ಸಂಜೆ 4ಕ್ಕೆ ಢವಳಗಿ ಹೋಬಳಿಯ ಹತ್ತಿ ತೊಗರಿ ಬೆಳೆಗಳ ವೀಕ್ಷಣೆ

ಸದಾ ಮುಖ ಗಂಟು ಹಾಕಿಕೊಂಡು ಇರಬೇಡಿ-ಜಯಸಿದ್ದೇಶ್ವರ ಶ್ರೀ

ಸದಾ ಮುಖ ಗಂಟು ಹಾಕಿಕೊಂಡು ಇರಬೇಡಿ-ಜಯಸಿದ್ದೇಶ್ವರ ಶ್ರೀ

ಮುದ್ದೇಬಿಹಾಳ : ಹಣ, ಆಸ್ತಿ, ಅಂತಸ್ತು, ಐಶ್ವರ್ಯ, ಉದ್ಯೋಗ ಮುಂತಾದವುಗಳ ಕೊರತೆಯಿಂದ ಮನುಷ್ಯ ಬಡವನಾಗುವುದಿಲ್ಲ ಬದಲಿಗೆ ಪರಸ್ಪರ ಮಾತನಾಡದಿರುವುದರಿಂದ, ಮುಖ ಗಂಟು ಹಾಕಿರುವುದರಿಂದ ಬಡವನಾಗಿ ಕಾಣುತ್ತಾನೆ. ಮನುಷ್ಯ ಬದುಕಿನಲ್ಲಿ ನೂರು ಕಾಲ ಬದುಕಿರುವಷ್ಟು ನಗು ಸಂಗ್ರಹಿಸಬೇಕು. ಗೆಳೆಯರ ನಡುವೆ ಸರಿ, ತಪ್ಪುಗಳ ಆರೋಗ್ಯಕರ ಚರ್ಚೆ ನಡೆಯಬೇಕು ಎಂದು ಹಿರೂರು ಜಯಸಿದ್ದೇಶ್ವರ ಸ್ವಾಮೀಜಿ ಹೇಳಿದರು. ಪಟ್ಟಣದ ಹಡಲಗೇರಿ ರಸ್ತೆ ಪಕ್ಕದಲ್ಲಿರುವ ಶ್ರೀ ಪದ್ಮಾವತಿ ದೇವಸ್ಥಾನದ ಸಮುದಾಯ ಭವನದಲ್ಲಿ ವಿಬಿಸಿ ಪ್ರೌಢಶಾಲೆಯ 1985-86ನೇ