—
ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಚುನಾವಣಾಧಿಕಾರಿ ಎಸ್.ಆರ್.ಕಟ್ಟಿಮನಿ ಸೋಮವಾರ ಸಂಜೆ ಪ್ರಕಟಿಸಿದ್ದು 29 ಅವಿರೋಧ, ಒಂದು ಸ್ಥಾನಕ್ಕೆ ನಡೆದ ಚುನಾವಣೆ ಫಲಿತಾಂಶವೂ ಸೇರಿ ಒಟ್ಟು 30 ಪದಾಧಿಕಾರಿಗಳ ಹೆಸರು ಘೋಷಿಸಲಾಗಿದೆ.
ಆಯ್ಕೆಯಾದವರ ವಿವರ ಇಂತಿದೆ. ಕೃಷಿ ಇಲಾಖೆಯಿಂದ ಎ.ಬಿ.ಹೂಗಾರ,ಎಂ.ಎಚ್.ಬೀಳಗಿ, ಪಶು ಪಾಲನಾ ಇಲಾಖೆಯಿಂದ ಎಂ.ಎಸ್.ಹಿರೇಮಠ, ಕಂದಾಯ ಇಲಾಖೆಯಿಂದ ವಿ.ವಿ.ಅಂಬಿಗೇರ, ಎನ್.ಬಿ.ಮಾವಿನಮಟ್ಟಿ,
ಪಿಡಬ್ಲೂಡಿಯಿಂದ ವಿನೋದಕುಮಾರ ಬಿ.ಬಿರಾದಾರ, ಪಿ.ಆರ್.ಇ.ಡಿ(ಝಡ್.ಪಿ)ಯಿಂದ ರಾಜು ನಾಗೂರಕರ್, ಪ್ರಾಥಮಿಕ ಶಾಲೆ ವಿಭಾಗದಿಂದ ಬಿ.ಎಸ್.ಹೊಳಿ, ಬಿ.ಎಚ್.ಮುದ್ನೂರ, ಬನ್ನೆಪ್ಪ ಶೇಖಣ್ಣವರ,ಶಂಕರಗೌಡ ಬಿ.ಬಿರಾದಾರ,ಸರಕಾರಿ ಪ್ರೌಢಶಾಲೆಗಳ ವಿಭಾಗದಿಂದ ಎಂ.ಬಿ.ಪಾಟೀಲ್, ಬಿ.ಎಸ್.ಶಾಂತಪ್ಪನವರ, ಸಾರ್ವಜನಿಕ ಶಿಕ್ಷಣ ಇಲಾಖೆ ಆಡಳಿತ ಕಚೇರಿಯಿಂದ ಎಸ್.ಸಿ.ಹಿರೇಮಠ, ಸರಕಾರಿ ಪದವಿ ಪೂರ್ವ ಮತ್ತು ಪದವಿ ಕಾಲೇಜು ವಿಭಾಗದಿಂದ ಎಸ್.ಜಿ.ಲೊಟಗೇರಿ, ಸಮಾಜ ಕಲ್ಯಾಣದಿಂದ ಎಸ್.ಜಿ.ವಾಲೀಕಾರ, ಅರಣ್ಯ ಇಲಾಖೆಯಿಂದ ಬಿ.ಎಸ್.ಕೊಣ್ಣೂರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸತೀಶ ಕುಲಕರ್ಣಿ, ಎ.ಎನ್.ಬಿರಾದಾರ, ವಿಠ್ಠಲ ಕಿಲಾರಹಟ್ಟಿ,ವಾಯ್.ಎಂ.ಚಲವಾದಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯಿಂದ ರಾಘವೇಂದ್ರ ದೇಶಪಾಂಡೆ, ಖಜಾನೆ ಇಲಾಖೆಯಿಂದ ಎಸ್.ಸಿ.ಬಿರಾದಾರ, ಭೂದಾಖಲೆಗಳ ಇಲಾಖೆ ಎನ್.ಎಚ್.ಮೇಟಿ,ನ್ಯಾಯಾಂಗ ಇಲಾಖೆ ಬಸವರಾಜ ಹುಣಶ್ಯಾಳ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಿಂದ ವಿ.ಜಿ.ಹೂಗಾರ, ಡಿ.ಬಿ.ಅಂಜುಟಗಿ,ಬಿ.ಎಮ್.ಸಾಗರ, ಸಿಡಿಪಿಒ ಇಲಾಖೆಯಿಂದ ಸುಮಿತ್ರಾ ಹಗರಗುಂಡ, ಆಹಾರ ಇಲಾಖೆಯಿಂದ ಎಸ್.ಎ.ಗುಮತಿಮಠ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.