ಮುದ್ದೇಬಿಹಾಳ : ತಾಲ್ಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿ ಉಪ ಚುನಾವಣೆಯಲ್ಲಿ ಒಂದು ಸ್ಥಾನಕ್ಕೆ ಆಯ್ಕೆ ಬಯಸಿ ಸಲ್ಲಿಕೆಯಾಗಿದ್ದ ಎರಡು ನಾಮಪತ್ರಗಳಲ್ಲಿ ಒಂದು ನಾಮಪತ್ರ ತಿರಸ್ಕೃತಗೊಂಡಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ತಾಲ್ಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿಯಲ್ಲಿ ಮದ್ಯಾಹ್ನ 1 ಗಂಟೆಯಿಂದ ನಾಮಪತ್ರಗಳ ಪರಿಶೀಲನೆ ಕಾರ್ಯವನ್ನು ನಾಮಪತ್ರ ಸಲ್ಲಿಸಿದ್ದ ಶಾಂತಾ ಮದರಿ ಹಾಗೂ ಕವಿತಾ ಶಿರಗುಪ್ಪಿ ಅವರ ಸಮ್ಮುಖದಲ್ಲಿ ಚುನಾವಣಾಧಿಕಾರಿಗಳು ನಡೆಸಿದರು.ಈ ವೇಳೆ ಕವಿತಾ ಶಿರಗುಪ್ಪಿ ಅವರು ಸಲ್ಲಿಸಿದ್ದ ನಾಮಪತ್ರದ ಜೊತೆಗೆ ಮೀಸಲಾತಿ ಅಡಿ ಸ್ಪರ್ಧೆ ಮಾಡಿದ್ದರಿಂದ ಲಗತ್ತಿಸಬೇಕಾಗಿದ್ದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಲಗತ್ತಿಸದೇ ಇರುವುದರಿಂದ ಹಾಗೂ ಕೆಲವು ಕಡೆಗಳಲ್ಲಿ ಸಹಿ ಮಾಡದೇ ಇದ್ದುದ್ದರಿಂದ ಶಿರಗುಪ್ಪಿ ಅವರ ನಾಮಪತ್ರವನ್ನು ತಿರಸ್ಕಾರ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಎಸ್.ಕೆ.ಮಾಳಗೊಂಡ ತಿಳಿಸಿದರು.
ನಾಮಪತ್ರಗಳ ಪರಿಶೀಲನೆ ಕಾರ್ಯ ಮುಗಿದಿದ್ದು ನ.23ರವರೆಗೆ ನಾಮಪತ್ರಗಳ ಹಿಂದಕ್ಕೆ ಪಡೆಯುವುದಕ್ಕೆ ಅವಕಾಶ ಇದೆ.ನ.26ರಂದು ಫಲಿತಾಂಶ ಪ್ರಕಟಿಸಿ ಆಯ್ಕೆಯಾದವರಿಗೆ ಪ್ರಮಾಣ ಪತ್ರ ನೀಡುವುದಾಗಿ ತಿಳಿಸಿದರು.
ಕಣದಲ್ಲಿ ಶಾಂತಾ ಮದರಿ ಒಬ್ಬರೇ ಉಳಿದಿದ್ದು ಅವರ ಆಯ್ಕೆ ಆದಂತಾಗಿದೆ.ಅಧಿಕೃತವಾಗಿ ಘೋಷಣೆಯೊಂದೇ ಬಾಕಿ ಉಳಿದಿದೆ.
ಚುನಾವಣೆಗೆ ಸಹಾಯಕರಾಗಿ ಆಯ್.ಬಿ.ಹಿರೇಮಠ, ಪಿಡಿಒ ಪಿ.ಎಸ್.ನಾಯ್ಕೋಡಿ ಕಾರ್ಯನಿರ್ವಹಿಸಿದರು.ಪೊಲೀಸ್ ಇಲಾಖೆಯಿಂದ ಎಎಸ್ಐ ಎ.ಬಿ.ಟಕ್ಕಳಕಿ, ಶಾಂತಗೌಡ ಬನ್ನೆಟ್ಟಿ ಭದ್ರತೆ ಒದಗಿಸಿದ್ದರು.
ಹಿನ್ನಡೆ : ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಜಾತಿ ಪ್ರಮಾಣ ಪತ್ರವನ್ನು ನಿಗದಿತ ಅವಧಿಯೊಳಗಡೆ ನಾಮಪತ್ರದೊಂದಿಗೆ ಲಗತ್ತಿಸಲು ವಿಫಲರಾಗಿದ್ದಕ್ಕೆ ಕವಿತಾ ಶಿರಗುಪ್ಪಿ ಅವರು ಚುನಾವಣಾ ಕಣದಿಂದ ಹಿನ್ನಡೆ ಅನುಭವಿಸಬೇಕಾಯಿತು.
ಹಾಲಿ,ಮಾಜಿ ಶಾಸಕರಿಂದಲೂ ಮಾಹಿತಿ :
ನಾಮಪತ್ರದೊಂದಿಗೆ ಜಾತಿ ಪ್ರಮಾಣ ಪತ್ರ ಸಲ್ಲಿಕೆ ಸಮಯದಲ್ಲಿ ಉಂಟಾದ ಗೊಂದಲದ ಬಗ್ಗೆ ಹಾಲಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ, ಮಾಜಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರು ಚುನಾವಣಾಧಿಕಾರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ಮುದ್ದೇಬಿಹಾಳ : ಕುಂಟೋಜಿ ಗ್ರಾ.ಪಂ ಉಪ ಚುನಾವಣೆಈ ಕಾರಣಕ್ಕೆ ಅಭ್ಯರ್ಥಿ ನಾಮಪತ್ರ ರಿಜೆಕ್ಟ್…!
ಮುದ್ದೇಬಿಹಾಳ : ಕುಂಟೋಜಿ ಗ್ರಾ.ಪಂ ಉಪ ಚುನಾವಣೆಈ ಕಾರಣಕ್ಕೆ ಅಭ್ಯರ್ಥಿ ನಾಮಪತ್ರ ರಿಜೆಕ್ಟ್…!
Latest News
Gruhalakshmi Yojane: ಸಂಕ್ರಾಂತಿಗೆ ಸರ್ಕಾರದಿಂದ ಬಂಪರ್ ಆಫರ್
ಗೃಹಲಕ್ಷ್ಮಿ ಯೋಜನೆಯ (Gruhalakshmi Yojane) 16ನೇ ಕಂತಿನ ಹಣದ ಕುರಿತು ಮಾಹಿತಿ ಇಲ್ಲಿದೆ. ಪ್ರತಿ
Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!
Gold Rate: ನವದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ 10 ಗ್ರಾಂ ಚಿನ್ನದ ಧಾರಣೆಯು ಮತ್ತೆ
Adhar Card Loan: 50 ಸಾವಿರ ರೂಪಾಯಿವರೆಗೆ ಯಾವುದೇ ಶ್ಯೂರಿಟಿ ಇಲ್ಲದೆ ಪಡೆಯಲು ಅವಕಾಶ!
Adhar Card Loan: ನಿಮಗೆ ತಕ್ಷಣ ಹಣದ ಅವಶ್ಯಕತೆ ಇದೆಯಾ? ಶ್ಯೂರಿಟಿ ಇಲ್ಲದೆ ಸಾಲ
ಸಿ.ಎಲ್.ಬಿರಾದಾರ ಅಧ್ಯಕ್ಷ, ಜಿ.ಬಿ.ಪಾಟೀಲ್ ಉಪಾಧ್ಯಕ್ಷ; ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ಗೆ ಹೊಸಬರ ಆಯ್ಕೆ
ಮುದ್ದೇಬಿಹಾಳ : ಅನಿರೀಕ್ಷಿತ ಫಲಿತಾಂಶವನ್ನು ಇಲ್ಲಿನ ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ನ ನೂತನ
Prize Money Scholarship: ವಿದ್ಯಾರ್ಥಿಗಳ ಖಾತೆಗೆ 35 ಸಾವಿರ ಜಮಾ!
Prize Money Scholarship 2025: ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್ ನೀಡಿದೆ. 2024 ಮತ್ತು 2025 ನೇ ಸಾಲಿನ ಮೆಟ್ರಿಕ್ ನಂತರ ವಿದ್ಯಾರ್ಥಿಗಳು ಹಾಗೂ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಅರ್ಜಿಯನ್ನು ಕರೆಯಲಾಗಿದೆ. Join Our Telegram: https://t.me/dcgkannada ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಶಿಕ್ಷಣ ಅನುಕೂಲಕ್ಕಾಗಿ ಸಾಕಷ್ಟು ಯೋಜನೆ ಮತ್ತು ಸ್ಕಾಲರ್ಶಿಪ್ ಗಳನ್ನು ಜಾರಿಗೆ ತರುತ್ತಿದೆ ಮತ್ತು ಅವರ ಪರೀಕ್ಷೆ ಉತ್ತಮವಾಗಿ ಪಾಸಾಗಿದ್ದರೆ ಸಾಕು.
Jio: ಕೇವಲ ₹601 ವರ್ಷಪೂರ್ತಿ free 5G ಯೋಜನೆ
Jio: ₹601 5G ರೀಚಾರ್ಜ್ ಯೋಜನೆಯು Jio ಬಳಕೆದಾರರಿಗೆ, ವಿಶೇಷವಾಗಿ ಇಡೀ ವರ್ಷಕ್ಕೆ ಅನಿಯಮಿತ 5G ಡೇಟಾವನ್ನು ಬಯಸುವವರಿಗೆ ಆಕರ್ಷಕ ಕೊಡುಗೆಯಾಗಿದೆ. Jio ₹601 5G ರೀಚಾರ್ಜ್ ಯೋಜನೆ ಮುಖ್ಯಾಂಶಗಳು ವೆಚ್ಚ : ಒಂದು ವರ್ಷಕ್ಕೆ ₹601.ಪ್ರಯೋಜನಗಳು : 12 ತಿಂಗಳವರೆಗೆ ಅನಿಯಮಿತ 5G ಡೇಟಾ.ಅರ್ಹತೆ : Jio 5G ಸಿಮ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ.ವಿನಾಯಿತಿಗಳು : 4G ಸಿಮ್ ಬಳಕೆದಾರರಿಗೆ ಅನ್ವಯಿಸುವುದಿಲ್ಲ. Join Our Telegram: https://t.me/dcgkannada ಈ