ಮುಧೋಳ : ಬೇಡರ ದಂಗೆಯಿಂದ ಸ್ವಾತಂತ್ರ್ಯ ಸಂಗ್ರಾಮದ ಕಿಡಿ ಹೊತ್ತಿಸಿದ ತಾಲೂಕಿನ ಹಲಗಲಿ ಗ್ರಾಮದಲ್ಲಿ ಆ.14ರ ಮಧ್ಯರಾತ್ರಿ ಧ್ವಜಾರೋಹಣ ನೆರವೇರಿಸಲಾಯಿತು.
ಗ್ರಾಮದ ಬಸ್ ನಿಲ್ದಾಣದಲ್ಲಿರು ಸ್ವಾಂತಂತ್ರ್ಯ ಹೋರಾಟಗಾರರಾದ ವೀರ ಜಡಗಣ್ಣ-ಬಾಲಣ್ಣ ಪುತ್ಥಳಿ ಸನ್ನಿಧಾನದಲ್ಲಿ ಗ್ರಾಮಸ್ಥರೆಲ್ಲ ಒಂದಾಗಿ ಧ್ಜಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸುಬೇದಾರ್ ಶಿವಾನಂದ ಚನ್ನಬಸಪ್ಪ ಪೂಜೇರಿ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿದರು.
Join Our Telegram: https://t.me/dcgkannada
ಗ್ರಾಮದ ಮುಖಂಡರು, ಯುವಕರು ಧ್ವಜಾರೋಹ ಕಾರ್ಯಕ್ರಮದಲ್ಲಿ ವೀರಣ್ಣ ವಾಬನ್ನವರ, ರಾಘವೇಂದ್ರ ಮುಚಕನ್ನವರ, ಹನುಮಂತ ಜಡಗನ್ನವರ, ಈರಪ್ಪ ಹಿರಕನ್ನವರ, ಶೇಖರ್ ಬಾರಕೇರ, ಪ್ರಕಾಶ ಜಮಖಂಡಿ, ವಿಠ್ಠಲ ಯ ಕೊಳ್ಳನ್ನವರ ಹಾಗೂ ಇತರರು ಪಾಲ್ಗೊಂಡಿದ್ದರು..