ಮುದ್ದೇಬಿಹಾಳ : ಗಣೇಶೋತ್ಸವದ ಅಂಗವಾಗಿ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ವಿಭಿನ್ನ ಚಿತ್ರರೂಪಕಗಳನ್ನು ರಚಿಸಿ ಜನರ ಗಮನ ಸೆಳೆಯುವುದು ಸಾಮಾನ್ಯ.

ಪಟ್ಟಣದ ವಿದ್ಯಾನಗರದ ನಿವೃತ್ತ ಶಿಕ್ಷಕರಾದ ಎ.ಸಿ.ಹಿರೇಮಠ ಅವರ ಮನೆಯಲ್ಲಿ ಈ ಸಲದ ಗಣೇಶೋತ್ಸವವನ್ನು ವಿಶೇಷವಾಗಿ ಆಚರಿಸಲಾಗಿದೆ.

ಮನೆಯ ಹೊರ ಆವರಣದಲ್ಲಿ ತಮ್ಮ ಮಕ್ಕಳ ಜೊತೆಗೂಡಿ ಕರ್ನಾಟಕದ ಅತೀ ಎತ್ತರದ ಮುಳ್ಳಯ್ಯನಗಿರಿ ಬೆಟ್ಟವನ್ನು ರೂಪಿಸಿ ಗಮನ ಸೆಳೆದಿದ್ದಾರೆ.

ಪ್ರತಿ ವರ್ಷ ಒಂದಿಲ್ಲೊಂದು ವಿನೂತನ ದೃಶ್ಯರೂಪಕಗಳನ್ನು ಗಣೇಶೊತ್ಸವದಂದು ಹಿರೇಮಠ ಕುಟುಂಬ ನಡೆಸಿಕೊಂಡು ಬರುತ್ತಿದೆ.