Mutsadi Kashappan, a born and active political activist, passed away

ಹುಟ್ಟು ಹೋರಾಟಗಾರ ರಾಜಕೀಯ ಮುತ್ಸದಿ ಕಾಶಪ್ಪನವರ ಅಗಲಿಕೆ ಎರಡು ದಶಕಗಳು

ಹುಟ್ಟು ಹೋರಾಟಗಾರ ರಾಜಕೀಯ ಮುತ್ಸದಿ ಕಾಶಪ್ಪನವರ ಅಗಲಿಕೆ ಎರಡು ದಶಕಗಳು

ಹುನಗುಂದ-ಅಖಂಡ ವಿಜಯಪುರ ಮತ್ತು ಬಾಗಲಕೋಟಿ ಜಿಲ್ಲೆಯ ಹುನಗುಂದ ತಾಲೂಕಿನ ಕೃಷ್ಣ ನದಿಯ ದಡದಲ್ಲಿರುವ ಒಂದು ಪುಟ್ಟ ಗ್ರಾಮವಾದ ಹಾವರಗಿಯಲ್ಲಿ ಜನಿಸಿದ ಲಿಂ, ಎಸ್.ಆರ್.ಕಾಶಪ್ಪನವರ ಮೊದಲು ತಾಲೂಕ ಅಭಿವೃದ್ದಿ ಮಂಡಳಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ತಮ್ಮ ರಾಜಕೀಯ ಜರ್ನಿ ಆರಂಭಿಸುವ ಮೂಲಕ ರಾಜ್ಯ ಸರ್ಕಾರದ ಕ್ಯಾಬಿನೆಟ್ ದರ್ಜೆಯ ಮಂತ್ರಿ ಸ್ಥಾನದವರಿಗೂ ಸಾಗಿದರು. ಹಮ್ಮು ಬಿಮ್ಮಿಲ್ಲದ ಸರಳ ವ್ಯಕ್ತಿತ್ವದ ರಾಜಕಾರಣಿಯಾಗಿದ್ದರು. ಜಿಗಿಟುತನ ಹಾಗೂ ಜವಾರಿ ಭಾಷೆ ಮತ್ತು ಸ್ವಭಾವ ಅವರನ್ನು ಅಲ್ಲಿಯತನಕ ಕರೆದುಕೊಂಡು ಹೋಗಿದ್ದಲ್ಲದೇ ಇವರು ಇಂದಿಗೂ ಜನರ ಮನಸಿನಲ್ಲಿ ಸದಾ ಜನಾನುರಾಗಿ ಮತ್ತು ಮುತ್ಸದ್ದಿ ನಾಯಕ ಎನ್ನಿಸಿಕೊಂಡಿದ್ದರು.

೧೯೪೯ ಫೆಬ್ರವರಿ ೨೬ ರಂದು ಹಾವರಗಿಯಲ್ಲಿ ಜನಸಿದ ಲಿಂ, ಎಸ್. ಆರ್. ಕಾಶಪ್ಪನವರ ೨೦೦೩ ಜೂನ್ ೨೭ ರಂದು ಆಕಸ್ಮಿಕ ಅಫಘಾತದಲ್ಲಿ ನಿಧನರಾದರು. ಬದುಕಿದ್ದರೇ ರಾಜ್ಯದ ಲಿಂಗಾಯತ ಅಗ್ರಗಣ್ಯ ನಾಯಕರಾಗುತ್ತಿದ್ದರೆಂದು ಅವರಲ್ಲಿದ್ದ ಮುತ್ಸದ್ದಿ ನಾಯಕತ್ವ ಕಂಡಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಹೇಳುವ ಮೂಲಕ ಕಾಂಗ್ರೆಸ್‌ಗೆ ಕಾಶಪ್ಪನವರ ಅನಿವಾರ್ಯ ಆಗಿದ್ದರೆಂದು ಹೇಳಿದ ಮಾತು ಮರೆಯಲಾಗುವುದು.

ಹಾವರಗಿಯಂತಹ ಸಣ್ಣ ಹಳ್ಳಿಯಿಂದ ತಮ್ಮ ರಾಜಕೀಯವನ್ನು ಆರಂಭಿಸಿ ಇವರು ಮೊದಲ ಬಾರಿಗೆ ತಾಲೂಕ ಅಭಿವೃದ್ಧಿ ಮಂಡಳಿ(ಟಿಡಿಬಿ) ಸದಸ್ಯರಾಗಿ ಮತ್ತು ಅಧ್ಯಕ್ಷರಾದರು. ೧೯೮೫ ರಲ್ಲಿ ವಿಧಾನಸಭೆ ಸ್ಪರ್ಧಿಸಿ ಅಲ್ಪ ಮತಗಳಿಂದ ಸೋಲನ್ನು ಕಂಡರೂ. ಛಲ ಬಿಡದೇ ಪಕ್ಷ ಸಂಘಟಿಸಿ ೧೯೮೯ ರಲ್ಲಿ ತಮ್ಮನ್ನು ಸೋಲಿಸಿದ ಲಿಂ,ಎಸ್.ಎಸ್.ಕಡಪಟ್ಟಿ ಅವರ ವಿರುದ್ದವೇ ಅತ್ಯಧಿಕ ಮತಗಳಿಂದ ಅವರನ್ನು ಸೋಲಿಸಿ ಮೊದಲು ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದರು. ನಂತರ ಸತತ ಮೂರು ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಸೋಲಿಲ್ಲದ ಸರದಾರರಾಗಿದ್ದರು. ಮುಂದಿನ ರಾಜಕೀಯ ನಡೆ ಬೆರಗು ಹುಟ್ಟಿಸಿತ್ತು. ರಾಜಕೀಯ ಹೆಜ್ಜೆ ಮತ್ತು ಅವರ ದಿಟ್ಟ ನಿಲುವುಗಳು, ಪ್ರಾಮಾಣಿಕ ಜನಸೇವೆ, ಅವರಲ್ಲಿನ ಜಿಗುಟುತನ, ಜವಾರಿ ಸ್ವಭಾವ ಅವರನ್ನು ರಾಜ್ಯದ ಕ್ಯಾಬಿನೆಟ್ ಮಂತ್ರಿಯ ಹುದ್ದೆಯವರಗೂ ಕರೆದ್ಯೋಯಿತು.

ಸದಾ ರೈತಪರ ಚಿಂತಕರು-ಸದಾ ರೈತಪರ ಕಾಳಜಿಯುಳ್ಳ ಅವರು ಭೀಮಾನದಿ ಗೇಟ್ ಕಿತ್ತಿದ್ದು ಇಂದಿಗೂ ಕೂಡಾ ರೈತರು ಮರೆತ್ತಿಲ್ಲ. ಇಂತಹ ಎಂಟೆದೆಯ ರಾಜಕಾರಣಿ ಕಂಡಿದ್ದು ಅಪರೂಪ ಇಂದಿಗೂ ಅವರ ಬಗ್ಗೆ ಮಾತನಾಡುತ್ತಾರೆ. ತಮ್ಮ ಹತ್ತಿರದವರಿಗಿಂತ ವೈರಿಗಳನ್ನು ಮಾತಾಡಿಸುವ ಮತ್ತು ಅವರ ಮನಸ್ಸು ಬದಲಾಯಿಸುವ ಚಾಣಕ್ಯ. ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡುತ್ತಿದ್ದರೂ ಗೆದ್ದ ನಂತರ ಕ್ಷೇತ್ರದ ಜನತೆಯನ್ನು ಪ್ರೀತಿ ವಿಶ್ವಾಸದಿಂದ ಕಾಣುವ ಮೂಲಕ ಒಂದು ರೀತಿಯ ಅಜಾತಶತ್ರುವೇ ಸರಿ.

ವಿಶಿಷ್ಠ ಉಡುಪು ಧಾರಣೆ-ಖಾದಿ ದೋತರ,ನೆಹರು ಶರ್ಟ್,ಉಣ್ಣೆಯ ಟೋಪಿ ಅವರ ಆಕರ್ಷಕ ಉಡುಪುಗಳಾಗಿದ್ದವು. ಜವಾರಿ ಮಾತು, ಒಂದಷ್ಟು ಒರಟುತನ, ಕ್ಷಣದಲ್ಲೇ ಮಗುವಿನಂತೆ ಮೃದುವಾಗುವ ಅವರ ಗುಣ ಒಮ್ಮೊಮ್ಮೆ ವರ್ಣರಂಜಿತ ವ್ಯಕ್ತತ್ವ. ತಾವು ಆಡಿದ್ದೇ ನಡೆಯಬೇಕೆಂಬ ಹಠದ ಸ್ವಭಾವ ಅವರದು.

ಪಂಚಮಸಾಲಿ ಸಮಾಜ ಅಗ್ರಗಣ್ಯ ನಾಯಕರು-ಕಾಶಪ್ಪನವರ ಪಂಚಮಸಾಲಿ ಸಮಾಜ ಸಂಘಟನೆಯಲ್ಲಿ ಅವರ ಕೊಡುಗೆ ಅಪಾರ. ಅದರ ರಾಜ್ಯಾಧ್ಯಕ್ಷರಾಗಿ ಗಮನಾರ್ಹ ಸೇವೆ ಮಾಡಿದ್ದರು. ರಾಜ್ಯದ ವಿವಿಧ ಕಡೆ ಸಮಾಜದ ಮುಖಂಡರು ಬೆಳೆಸಿ ರಾಜಕಾರಣದಲ್ಲಿ ಮಿಂಚಿ ಮರೆಯಾದ ಮಾಣಿಕ್ಯ. ಇಂತಹ ಮೇರು ನಾಯಕ ಮರೆಯಾಗಿ ಇಂದಿಗೆ ಎರಡು ಸಂಧಿವೆ. ಅಂತಹ ನಾಯಕರು ಮರಳಿ ಹುಟ್ಟಲಿ ಎನ್ನುವುದೇ ಅವರ ಅಭಿಮಾನಿಗಳ ಆಸೆವಾಗಿದೆ.
ಅಭಿವೃದ್ದಿಯ ಹರಿಕಾರರು-ತಮ್ಮ ೧೪ ವರ್ಷದ ಸುದೀರ್ಘ ಅಧಿಕಾರ ಅವಧಿಯಲ್ಲಿ ತಾಲೂಕಿನ ಕೋಟ್ಯಾಂತರ ರೂಪಾಯಿ ಅನುದಾನವನ್ನು ತಂದು ಮರೋಳ ಏತನೀರಾವರಿ, ಕೂಡಲಸಂಗಮ ಅಭಿವೃದ್ಧಿ, ಅಲ್ಲಿನ ಜಿಟಿಟಿಸಿ ಕಾಲೇಜು ಸ್ಥಾಪನೆ, ಶಾಲಾ ಕಾಲೇಜುಗಳ ಮಂಜೂರಿ ಮತ್ತು ನಿರ್ಮಾಣ, ಪಶು ಆಸ್ಪತ್ರೆ, ಸರ್ಕಾರಿ ಆಸ್ಪತ್ರೆ, ರಸ್ತೆ ಅಭಿವೃದ್ಧಿ, ಡಾಂಬರೀಕರಣ, ಅಡಿಹಾಳ ಸೇತುವೆ ನಿರ್ಮಾಣಕ್ಕೆ ಕನಸ್ಸು ಕಂಡವರು. ಮುಳಗಡೆ ಗ್ರಾಮಗಳ ಸ್ಥಳಾಂತರ, ವಿವಿಧ ಯೋಜನೆಯಲ್ಲಿ ಸಾವಿರಾರು ಮನೆಗಳ ನಿರ್ಮಾಣ, ಹುನಗುಂದದಲ್ಲಿ ತಾಲೂಕ ಕ್ರೀಡಾಂಗಣ, ಇಳಕಲ್ ಡೈಟ್ ಆರಂಭ ಸೇರಿದಂತೆ ನೂರಾರು ಕೋಟಿ ಅನುದಾನ ತಂದು ಇಡೀ ಮತಕ್ಷೇತ್ರದ ಅಭಿವೃದ್ಧಿಗೆ ಅವಿರತ ಶ್ರಮಿಸಿದ್ದರು.

ಬಾಕ್ಸ್ ಸುದ್ದಿ-ಸದಾ ರೈತಪರ ಕಾಳಜಿಯುಳ್ಳ ಅವರು ರೈತರಿಗಾಗಿ ಭೀಮಾನದಿ ಗೇಟ್ ಕಿತ್ತಿದ್ದನ್ನು ಇಂದಿಗೂ ಕೂಡಾ ರೈತರು ಮರೆತ್ತಿಲ್ಲ. ಜನಸಾಮಾನ್ಯರ ಮಧ್ಯದಲ್ಲಿ ಬೆಳೆದು ಬಂದ ಎಸ್‌ಆರ್‌ಕೆ ಸರ್ವ ಸಮಾಜ ಮತ್ತು ಸಮುದಾಯಗಳ ದೀಮಂತ ನಾಯಕರಾಗಿದ್ದರು. ಸದಾ ತಾವಂದು ಕೊಂಡಂತೆ ನಡೆಬೇಕು ಎನ್ನುವ ಹಠವಾದಿಗಳಾಗಿದ್ದರು. ಹೋರಾಟದಲ್ಲಿ ಒಂದು ಹೆಜ್ಜೆ ಮುಂದಿದ್ದರು. ಪಂಚಮಸಾಲಿ ಸಮಾಜದ ಅಗ್ರಗಣ್ಯ ನಾಯಕರಾಗಿ ಸಮಾಜ ಸಂಘಟನೆಯಲ್ಲಿ ಅವರ ಕೊಡುಗೆ ಅಪಾರವಾಗಿತ್ತು. ಇಂತಹ ಜನಾನುರಾಗಿ, ಮುತ್ಸದ್ದಿ ನಾಯಕರು ಮರೆಯಾಗಿ ಇಂದಿಗೆ ಎರಡು ದಶಕಗಳು.

Latest News

ಟಿಎಪಿಸಿಎಂಎಸ್‌ನ 69ನೇ ವಾರ್ಷಿಕ ಮಹಾಸಭೆ : ಮುದ್ದೇಬಿಹಾಳ ಟಿಎಪಿಸಿಎಂಎಸ್‌ಗೆ 20.34 ಲಕ್ಷ ರೂ.ಲಾಭ-ಎಂ.ಎಸ್.ಮೇಟಿ

ಟಿಎಪಿಸಿಎಂಎಸ್‌ನ 69ನೇ ವಾರ್ಷಿಕ ಮಹಾಸಭೆ : ಮುದ್ದೇಬಿಹಾಳ ಟಿಎಪಿಸಿಎಂಎಸ್‌ಗೆ 20.34 ಲಕ್ಷ ರೂ.ಲಾಭ-ಎಂ.ಎಸ್.ಮೇಟಿ

ಮುದ್ದೇಬಿಹಾಳ : ರೈತರ ಸಹಕಾರದಿಂದ ಸನ್ 2025-26ನೇ ಸಾಲಿನ ಮಾರ್ಚ ಅಂತ್ಯಕ್ಕೆ ನಮ್ಮ ಸಂಘವು

ಕ್ರೀಡಾಸ್ಫೂರ್ತಿಯಿಂದ ಆಟಗಳಲ್ಲಿ ಪಾಲ್ಗೊಳ್ಳಿ-ಎಂ.ಎಸ್.ಬಡದಾನಿ

ಕ್ರೀಡಾಸ್ಫೂರ್ತಿಯಿಂದ ಆಟಗಳಲ್ಲಿ ಪಾಲ್ಗೊಳ್ಳಿ-ಎಂ.ಎಸ್.ಬಡದಾನಿ

ಮುದ್ದೇಬಿಹಾಳ : ಆಟಗಳಲ್ಲಿ ಸೋಲು ಗೆಲುವು ಸಾಮಾನ್ಯ ಸಂಗತಿ.ಆದರೆ ಕ್ರೀಡಾಪಟುಗಳು ಕ್ರೀಡಾಸ್ಪೂರ್ತಿಯಿಂದ ಪಾಲ್ಗೊಳ್ಳುವ ಕಾರ್ಯ

ಬರಪರಿಸ್ಥಿತಿ ಸರ್ವೆ ವರದಿ ಬಹಿರಂಗಪಡಿಸಿ-ನಡಹಳ್ಳಿ ಸವಾಲು

ಬರಪರಿಸ್ಥಿತಿ ಸರ್ವೆ ವರದಿ ಬಹಿರಂಗಪಡಿಸಿ-ನಡಹಳ್ಳಿ ಸವಾಲು

ಮುದ್ದೇಬಿಹಾಳ : ಮತಕ್ಷೇತ್ರದ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕು ಘೋಷಣೆಗೆ ಆಗ್ರಹಿಸಿ

ಕೆಎಸ್‌ಡಿಎಲ್ ನಿಗಮಕ್ಕೆ ರಾಜೀನಾಮೆ ಕೊಟ್ಟಿದ್ದೇನೆ-ಸಿ.ಎಸ್.ನಾಡಗೌಡ

ಕೆಎಸ್‌ಡಿಎಲ್ ನಿಗಮಕ್ಕೆ ರಾಜೀನಾಮೆ ಕೊಟ್ಟಿದ್ದೇನೆ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ನನ್ನ ಹಾಗೂ ಎಂ.ಬಿ.ಪಾಟೀಲರ ಮಧ್ಯೆ ತಾತ್ವಿಕವಾದ ಸಂಘರ್ಷಗಳಿದ್ದವು.ಅವರು ಯಾಕೆ ವಯಕ್ತಿಕವಾಗಿ ನನ್ನ

ರೈತರನ್ನು ಸಾಲಗಾರರನ್ನಾಗಿ ಮಾಡುವುದು ನಮ್ಮ ಉದ್ದೇಶವಲ್ಲ: ಶಾಸಕ ಶಿವಾನಂದ ಪಾಟೀಲ

ರೈತರನ್ನು ಸಾಲಗಾರರನ್ನಾಗಿ ಮಾಡುವುದು ನಮ್ಮ ಉದ್ದೇಶವಲ್ಲ: ಶಾಸಕ ಶಿವಾನಂದ ಪಾಟೀಲ

ಮುದ್ದೇಬಿಹಾಳ : ರೈತರಿಗೆ ಸಾಲ ನೀಡುವುದು ಅವರನ್ನು ಸಾಲಗಾರರನ್ನಾಗಿ ಮಾಡುವ ಉದ್ದೇಶದಿಂದಲ್ಲ, ಬದಲಾಗಿ ಕೃಷಿ ಚಟುವಟಿಕೆಗಳನ್ನು ಬಲಪಡಿಸಿ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಎಂದು ವಿಜಯಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಹೇಳಿದರು. ತಾಲ್ಲೂಕಿನ ಹಿರೇಮುರಾಳದ ಸಂಗಮೇಶ್ವರ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ನೂತನ ಕಟ್ಟಡವನ್ನು ಅಂಕಲಿಮಠದ ವೀರಭದ್ರ ಸ್ವಾಮೀಜಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ರೈತರು ತಮ್ಮ ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು.

ಶಾಸಕ ನಾಡಗೌಡರ ವಿರುದ್ಧ ಹರಿಹಾಯ್ದ ನಡಹಳ್ಳಿ;     ಶಾಸಕರೇ ಸಿಎಂ ಮನೆ ಮುಂದೆ ಧರಣಿ ಮಾಡಿ- ನಡಹಳ್ಳಿ ಹೇಳಿಕೆ

ಶಾಸಕ ನಾಡಗೌಡರ ವಿರುದ್ಧ ಹರಿಹಾಯ್ದ ನಡಹಳ್ಳಿ; ಶಾಸಕರೇ ಸಿಎಂ ಮನೆ ಮುಂದೆ ಧರಣಿ ಮಾಡಿ- ನಡಹಳ್ಳಿ ಹೇಳಿಕೆ

ಮುದ್ದೇಬಿಹಾಳ : ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಆದಷ್ಟು ಬೇಗ ಸರ್ಕಾರ ಈ ಕುರಿತು ತೀರ್ಮಾನ ಕೈಗೊಂಡು ರೈತರಿಗೆ ಪರಿಹಾರ ನೀಡಬೇಕು. ಇಲ್ಲವಾದರೆ ರೈತರನ್ನು ಪಕ್ಷಾತೀತವಾಗಿ ಒಗ್ಗೂಡಿಸಿ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಎಚ್ಚರಿಸಿದರು. ಮುದ್ದೇಬಿಹಾಳದಲ್ಲಿ ಬರ ಘೋಷಣೆಗೆ ಆಗ್ರಹಿಸಿ ತಹಶೀಲ್ದಾರ್ ಕಚೇರಿ ಮುಂದೆ ಸೋಮವಾರದಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಮಗ್ಗಲ ಮುಳ್ಳಾಗಿ