One police constable is enough to arrest Kumaraswamy.. CM hits back at HDK

News chanel: ಕನ್ನಡ ನ್ಯೂಸ್ ಚಾನೆಲ್ ಗಳಿಗೆ ಕಾಂಗ್ರೆಸ್ ನಿಂದ BIG SHOCK!

News chanel: ಕನ್ನಡ ನ್ಯೂಸ್ ಚಾನೆಲ್ ಗಳಿಗೆ ಕಾಂಗ್ರೆಸ್ ನಿಂದ BIG SHOCK!

ಬೆಂಗಳೂರು: ಬಹುತೇಕ ನ್ಯೂಸ್ ಚಾನೆಲ್‌ಗಳು (News chanel) ಕಾಂಗ್ರೆಸ್ ವಿರುದ್ಧ ಉದ್ದೇಶ ಇಟ್ಟುಕೊಂಡೇ ಸುದ್ದಿ ಮಾಡುತ್ತಿವೆ ಎಂಬ ಆರೋಪ ಕಾಂಗ್ರೆಸ್ ನಾಯಕರದ್ದಾಗಿದ್ದು, ಕನ್ನಡ ನ್ಯೂಸ್ ಚಾನೆಲ್ ಗಳಿಗೆ ಕಾಂಗ್ರೆಸ್ ಪೆಟ್ಟುಕೊಡಲು ಸಿದ್ಧತೆ ನಡೆಸಿದೆ.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada

ಹೌದು, ಟಿವಿ ಚಾನೆಲ್‌ಗಳ ವಿರುದ್ಧ ಕಾಂಗ್ರೆಸ್ ಹೊಸ ಬ್ರಹ್ಮಾಸ್ತ್ರ ಸಿದ್ಧಪಡಿಸಿದೆಯಂತೆ. ಅಂದಹಾಗೆ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷ ಪೂರೈಸಿದ್ದು, ಇದೀಗ 2ನೇ ವರ್ಷ ಪೂರೈಸುವತ್ತ ಮುನ್ನಡೆದಿದೆ. ಹೀಗಿದ್ದಾಗಲೇ, ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ & ಜೆಡಿಎಸ್ ನಾಯಕರು ಸಾಲು ಸಾಲು ಗಂಭೀರ ಆರೋಪಗಳನ್ನ ಮಾಡುತ್ತಿದ್ದಾರೆ.

ಅದರಲ್ಲೂ ‘ಮುಡಾ’ ಸೈಟ್ ಹಗರಣ ಮುಂದೆ ಇಟ್ಟುಕೊಂಡು ವಿರೋಧ ಪಕ್ಷಗಳ ನಾಯಕರು ಸಿಎಂ ಸಿದ್ದರಾಮಯ್ಯ & ಕಾಂಗ್ರೆಸ್ ಸರ್ಕಾರದ ಪ್ರಮುಖರ ವಿರುದ್ಧವಾಗಿ ದೊಡ್ಡ ಮಟ್ಟದಲ್ಲಿ ಹೋರಾಟ ಸಂಘಟಿಸಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ಮಾಧ್ಯಮಗಳು ಕೂಡ ಮುಖ್ಯವಾಗಿ ಕನ್ನಡ ನಾಡಿನ ಟಿವಿ ನ್ಯೂಸ್ ಚಾನೆಲ್‌ಗಳು ಕಾಂಗ್ರೆಸ್ ಸರ್ಕಾರದ ವಿರುದ್ಧವಾಗಿ, ಉದ್ದೇಶ ಇಟ್ಟುಕೊಂಡೇ ಸುದ್ದಿ ಮಾಡುತ್ತಿವೆ ಎಂಬ ಆರೋಪ ಕಾಂಗ್ರೆಸ್ ನಾಯಕರದ್ದಾಗಿದೆ.

ಚಾನೆಲ್‌ಗಳಿಗೆ ಆಘಾತ!

15 ವರ್ಷಗಳ ಹಿಂದೆ ಕನ್ನಡದಲ್ಲಿ ನ್ಯೂಸ್ ಚಾನೆಲ್ ಗಳನ್ನು ಭೂತ ಕನ್ನಡಿ ಹಿಡಿದು ಟಿವಿ ಸ್ಕ್ರೀನ್ ನೋಡಿ ಹುಡಕಾಡಬೇಕಾಗಿತ್ತು. ಆದರೆ, ಈಗಿನ ಪರಿಸ್ಥಿತಿ ಹೇಗಾಗಿದೆ ಅಂದ್ರೆ, ಕನ್ನಡದಲ್ಲಿ ನೂರಾರು ನ್ಯೂಸ್ ಚಾನೆಲ್ ಇವೆ. ಹೀಗಿದ್ದರೂ ಬಹುತೇಕ ಕನ್ನಡದ ನ್ಯೂಸ್ ಚಾನೆಲ್‌ಗಳು ಕಾಂಗ್ರೆಸ್ ವಿರೋಧಿ ಸುದ್ದಿ ಪ್ರಕಟ ಮಾಡುತ್ತಿವೆ ಎಂಬುದು ಕಾಂಗ್ರೆಸ್ ಆರೋಪವಾಗಿದೆ.

ಹೀಗಾಗಿ, ಹೊಸ ಪ್ಲಾನ್ ಮಾಡಿದೆ ಕರ್ನಾಟಕ ಕಾಂಗ್ರೆಸ್. ಕರ್ನಾಟಕ ಕಾಂಗ್ರೆಸ್ ಈಗ ಮಾಡಿಕೊಂಡ ಪ್ಲಾನ್ ಪ್ರಕಾರ, ಶೀಘ್ರದಲ್ಲೇ ಕಾಂಗ್ರೆಸ್ ನೇತೃತ್ವದಲ್ಲಿ ಹೊಸ ನ್ಯೂಸ್ ಚಾನೆಲ್ ಕನ್ನಡದಲ್ಲಿ ಆರಂಭ ಮಾಡಲು ಚಿಂತನೆ ನಡೆದಿದೆ. ಹಾಗೇ, ಇಂಗ್ಲಿಷ್ ಭಾಷೆಯಲ್ಲೂ ಚಾನೆಲ್ ತೆರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಮತ್ತೊಂದು ಕಡೆ ನ್ಯೂಸ್ ಪೇಪರ್ ಒಂದನ್ನು ಕರ್ನಾಟಕ ಕಾಂಗ್ರೆಸ್ ವತಿಯಿಂದ ಆರಂಭ ಮಾಡೋದಕ್ಕೆ ಚರ್ಚೆಗಳು ನಡೆದಿವೆಯಂತೆ. ಹೀಗೆ ಕರ್ನಾಟಕ ಕಾಂಗ್ರೆಸ್ ವತಿಯಿಂದ ಸ್ವಂತ ನ್ಯೂಸ್ ಚಾನೆಲ್ ಅಥವಾ ಮಾಧ್ಯಮ ಸಂಸ್ಥೆ ಆರಂಭ ಮಾಡುವ ಬಗ್ಗೆ ನಡೆದಿರುವ ಚಿಂತನೆ ಕುರಿತು ಇದೀಗ, ಕರ್ನಾಟಕ ಕಾಂಗ್ರೆಸ್ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಮಾಹಿತಿ ನಿಡಿದ್ದಾರೆ.

ಪ್ಲಾನ್ ಜಾರಿ ಆಗುತ್ತಾ?

ಕನ್ನಡ ನ್ಯೂಸ್ ಚಾನೆಲ್‌ಗಳು ತಮ್ಮ ವಿರುದ್ಧ ಬೇಕು ಅಂತಲೇ ಸುದ್ದಿಯನ್ನ ಮಾಡುತ್ತಿವೆ. ಇದರ ಹಿಂದೆ ಖುದ್ದು ಬಿಜೆಪಿ ನಾಯಕರ & ಜೆಡಿಎಸ್ ನಾಯಕರ ಕುತಂತ್ರವು ಅಡಗಿದೆ ಎಂಬ ಆರೋಪವು ಕರ್ನಾಟಕ ಕಾಂಗ್ರೆಸ್ ನಾಯಕರದ್ದು.

ಇದನ್ನೂ ಓದಿ: ವಿಜಯಪುರ ಪಾಲಿಕೆಯಲ್ಲಿ ಮಧ್ಯರಾತ್ರಿ ಗಣೇಶ ಪ್ರತಿಷ್ಠಾಪನೆ, ಸ್ಥಳಕ್ಕೆ ಪೊಲೀಸರು ದೌಡು

ಪರಿಸ್ಥಿತಿ ಹೀಗಿದ್ದಾಗಲೇ ಸ್ವಂತ ಮಾಧ್ಯಮ ಸಂಸ್ಥೆ ಆರಂಭ ಮಾಡಿ ಬಿಜೆಪಿ & ಜೆಡಿಎಸ್ ನಾಯಕರ ವಿರುದ್ಧ ತೊಡೆ ತಟ್ಟುವ ಐಡಿಯಾ ಕರ್ನಾಟಕ ಕಾಂಗ್ರೆಸ್ ನಾಯಕರದ್ದಾಗಿದೆ. ಆದರೆ, ಈ ಪ್ಲಾನ್ ಯಾವಾಗ ಜಾರಿ ಆಗುತ್ತೆ? ಅಥವಾ ಜಾರಿ ಆಗುವ ಮೊದಲೇ ಐಡಿಯಾ ಮುಗಿದು ಹೋಗುತ್ತಾ? ಎಂಬುದು ಕುತೂಹಲ ಮೂಡಿಸಿದೆ.

Latest News

BREAKING: ಭೀಕರ ಅಪಘಾತ.. ಐವರು ಸಾವು

BREAKING: ಭೀಕರ ಅಪಘಾತ.. ಐವರು ಸಾವು

ಯಾದಗಿರಿ: ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಬೈಕ್‌'ಗೆ ಸಾರಿಗೆ ಬಸ್‌ ಡಿಕ್ಕಿಯಾಗಿ ಐವರು

Budget Breaking : ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೇಂದ್ರ ಸರ್ಕಾರ

Budget Breaking : ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೇಂದ್ರ ಸರ್ಕಾರ

ದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ

Gruhalakshmi Yojane: ಸಂಕ್ರಾಂತಿಗೆ ಸರ್ಕಾರದಿಂದ ಬಂಪರ್ ಆಫರ್

Gruhalakshmi Yojane: ಸಂಕ್ರಾಂತಿಗೆ ಸರ್ಕಾರದಿಂದ ಬಂಪರ್ ಆಫರ್

ಗೃಹಲಕ್ಷ್ಮಿ ಯೋಜನೆಯ (Gruhalakshmi Yojane) 16ನೇ ಕಂತಿನ ಹಣದ ಕುರಿತು ಮಾಹಿತಿ ಇಲ್ಲಿದೆ. ಪ್ರತಿ

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ನವದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ 10 ಗ್ರಾಂ ಚಿನ್ನದ ಧಾರಣೆಯು ಮತ್ತೆ

Adhaar Card New Rules: 5 ಹೊಸ ನಿಮಯ ಜಾರಿ.. ದಂಡ ಫಿಕ್ಸ್.!

Adhaar Card New Rules: 5 ಹೊಸ ನಿಮಯ ಜಾರಿ.. ದಂಡ ಫಿಕ್ಸ್.!

Adhaar Card New Rules: ಸರ್ಕಾರದಿಂದ ಆಧಾರ್ ಕಾರ್ಡ್ ಹೊಂದಿದವರಿಗೆ 5 ಹೊಸ ರೂಲ್ಸ್ ಜಾರಿ ಮಾಡಿದೆ. ಈ ಐದೂ ನಿಮಯ ಪಾಲಿಸದಿದ್ದರೆ ದಂಡ ಗ್ಯಾರಂಟಿ! ಆಧಾರ್ ಕಾರ್ಡ್ ಅನ್ನು ಪ್ರತಿಯೊಬ್ಬ ನಾಗರಿಕನ ಅಗತ್ಯ ದಾಖಲೆಯಾಗಿ ಗುರುತಿಸಲಾಗಿದೆ. ಇದು ನಮ್ಮ ಗುರುತಿನ ಕಡ್ಡಾಯ ದಾಖಲೆಯಾಗಿದೆ. ಎಲ್ಲಾ ಸರ್ಕಾರಿ ಯೋಜನೆಗಳು ಮತ್ತು ಹಣಕಾಸು ಸೇವೆಗಳು ನಮ್ಮನ್ನು ತಲುಪಲು ಆಧಾರ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಅಗತ್ಯವಿರುತ್ತದೆ. Join Our Telegram: https://t.me/dcgkannada

Virat Kohli Retirement Plan: ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಕ್ಲಾರಿಟಿ

Virat Kohli Retirement Plan: ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಕ್ಲಾರಿಟಿ

Virat Kohli Retirement Plan ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ವಿರಾಟ್ ಕಳಪೆ ಫಾರ್ಮ್ ನಿಂದ ನಿವೃತ್ತಿ ಕುರಿತು ಚರ್ಚೆ ಶುರುವಾಗಿದೆ. ಈ ಸರಣಿಯಲ್ಲಿ 9 ಇನಿಂಗ್ಸ್ ಆಡಿದ್ದ ವಿರಾಟ್ ಕೊಹ್ಲಿ 23.75 ರ ಕಳಪೆ ಸರಾಸರಿಯೊಂದಿಗೆ 190 ರನ್ ಮಾತ್ರ ಕಲೆಹಾಕಿದ್ದಾರೆ. ಈ ಕಳಪೆ ಪ್ರದರ್ಶನದ ಬೆನ್ನಲ್ಲೇ ಕೊಹ್ಲಿ ನಿವೃತ್ತರಾಗುವುದು ಉತ್ತಮ ಎಂಬ ಕೂಗುಗಳು ಕೇಳಿಬಂದಿದ್ದವು. ಆದರೀಗ ವಿರಾಟ್ ಕೊಹ್ಲಿ ತಾವು ಯಾವಾಗ ನಿವೃತ್ತಿ ಆಗುತ್ತೇನೆ ಎಂಬುದರ