ಹುನಗುಂದ: ನೂಲಿ ಚಂದಯ್ಯನವರು 12ನೇ ಶತಮಾನದ ದಾರ್ಶನಿಕ, ಬಸವಾದಿ ಶರಣರ ಸಮೂಹದ ವಚನಕಾರರಾಗಿದ್ದು, ತಮ್ಮ ವಚನದ ಮೂಲಕ ಸಮಾಜ ಸುಧಾರಣೆಗೆ ಅತ್ಯುನ್ನತ ಕೊಡುಗೆ ನೀಡಿದ್ದಾರೆ ಎಂದು ತಹಶೀಲ್ದಾರ್ ನಿಂಗಪ್ಪ ಬಿರಾದರ ಹೇಳಿದರು.
ಇನ್ನಷ್ಟು ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನಲ್ ಗೆ ಸೇರಿ.. https://t.me/dcgkannada
ಪಟ್ಟಣದ ತಹಶೀಲ್ದಾರ್ ಸಭಾಭವನದಲ್ಲಿ ಸೋಮವಾರ ತಾಲೂಕಾಡಳಿತದಿಂದ 917 ನೇ ಕಾಯಕ ಯೋಗಿ ನೂಲಿಯ ಚಂದಯ್ಯ ಅವರ ಜಯಂತಿಯನ್ನು ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಟಾರ್ಪಣೆಯ ನೇರವೇರಿಸಿ ಮಾತನಾಡಿದರು.
ಬಸವಣ್ಣನವರ ಸಮಾಕಾಲೀನ ಶಿವಶರಣ, ಶ್ರೇಷ್ಠ ಕಾಯಕ ಜೀವಿ ಶಿವಶರಣ ನುಲಿಯ ಚಂದಯ್ಯನವರ ಜೀವನಾದರ್ಶಗಳನ್ನು ನಮ್ಮ ಜೀವನದಲ್ಲಿ ಪ್ರತಿಯೋಬ್ಬತು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಇದನ್ನೂ ಓದಿ: ಚಿಕ್ಕಆದಾಪೂರ ಗ್ರಾಮ ದೇವತೆ ಜಾತ್ರೆ ಅಂಗವಾಗಿ ಆ.27ಕ್ಕೆ ಟಗರಿನ ಕಾಳಗ ಆಯೋಜನೆ
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎಚ್.ಕಟ್ಟಿಮನಿ, ಕ್ಷೇತ್ರ ಸಮನ್ವಯಾಧಿಕಾರಿ ಸದಾಶಿವ ಗುಡಗುಂಡಿ, ಹಿಂದೂಳಿದ ಇಲಾಖೆಯ ಅಧಿಕಾರಿ ಸಂಗಮೇಶ ಗಡೇದ, ಸಿಡಿಪಿಒ ವಿ.ಎ,ಗಿರಿತಿಮ್ಮಣ್ಣನವರ, ಬಸ್ ಘಟಕ ವ್ಯವಸ್ಥಾಪಕ ಅರವಿಂದ ಭಜಂತ್ರಿ, ಶಿರಸ್ತೆದಾರರಾದ ಎಚ.ಎಂ.ಶಿವಣಗಿ, ಶ್ರವಣ ಮುಂಡೇವಾಡಿ, ಸಮಾಜದ ಮುಖಂಡರಾದ ರಾಮಣ್ಣ ಭಜಂತ್ರಿ, ಮಹಾಂತೇಶ ಭಜಂತ್ರಿ, ಮುತ್ತಪ್ಪ ಭಜಂತ್ರಿ, ಶಿಪುತ್ರಪ್ಪ ಭಜಂತ್ರಿ,ಶೇಕಪ್ಪ ಭಜಂತ್ರಿ, ಬಸವರಾಜ ಬೆಳಗಲ್ಲ, ಸಂಗಪ್ಪ ಭಜಂತ್ರಿ, ದುರ್ಗಪ್ಪ ಬೆಳಗಲ್ಲ ಸೇರಿದಂತೆ ಇತರರು ಇದ್ದರು.