Over 500 deaths in road accidents in one year: SP Rishikesh Sonana

ರಸ್ತೆ ಅಪಘಾತದಲ್ಲಿ ಒಂದು ವರ್ಷದಲ್ಲಿ 500ಕ್ಕೂ ಅಧಿಕ ಸಾವು: ಎಸ್ಪಿ ಋಷಿಕೇಶ ಸೋನಾವಣೆ (ವಿಡಿಯೋ ನೋಡಿ)

ರಸ್ತೆ ಅಪಘಾತದಲ್ಲಿ ಒಂದು ವರ್ಷದಲ್ಲಿ 500ಕ್ಕೂ ಅಧಿಕ ಸಾವು: ಎಸ್ಪಿ ಋಷಿಕೇಶ ಸೋನಾವಣೆ (ವಿಡಿಯೋ ನೋಡಿ)

ಮುದ್ದೇಬಿಹಾಳ : ವಿಜಯಪುರ ಜಿಲ್ಲೆಯಲ್ಲಿ 2023 ರಲ್ಲಿ 443 ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ ಸುಮಾರು 500ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಎಂದು ವಿಜಯಪುರ ಎಸ್ಪಿ ಋಷಿಕೇಶ ಸೋನಾವಣೆ ಹೇಳಿದರು.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕುಂಟೋಜಿ ಜಾತ್ರೆಗೆ ಬಂದಿದ್ದ ಯುವಕರು ರಸ್ತೆ ಬದಿ ಇಳಿದಿದ್ದಾಗ ವೇಗವಾಗಿ ಬಂದಿರುವ ಬೈಕ್ ಅವರಿಗೆ ಅಪ್ಪಳಿಸಿ ದುರ್ಘಟನೆ ಸಂಭವಿಸಿದೆ. ರಾಜ್ಯ ಹೆದ್ದಾರಿಗಳ ಮೇಲೆ ಸಂಚರಿಸುವ ವೇಳೆ ಬೈಕ್ ಸವಾರರು ಕನಿಷ್ಠ ಹೆಲ್ಮೆಟ್ ಧರಿಸಿ ಪ್ರಯಾಣ ಮಾಡಬೇಕು. ಇಲ್ಲದಿದ್ದಲ್ಲಿ ಅಪಘಾತಗಳಿಗೆ ಸಿಲುಕಿ ಅಮೂಲ್ಯ ಜೀವ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿ ನಿಮ್ಮನ್ನು ನಂಬಿದವರ ಕುಟುಂಬಗಳಿಗೆ ನೋವು ಕೊಡುವ ಕೆಲಸ ಮಾಡಬೇಡಿ ಎಂದು ಹೇಳಿದರು.

ಮುದ್ದೇಬಿಹಾಳ ತಾಲ್ಲೂಕಿನ ಕುಂಟೋಜಿ ಗ್ರಾಮದ ಬಳಿ ಸಂಭವಿಸಿರುವ ಅಪಘಾತ ಈಚೇಗಿನ ದಿನಗಳಲ್ಲಿ ದೊಡ್ಡ ಘಟನೆಯಾಗಿದೆ. ಬಿಸಿಲಿನ ನೆಪ ಮಾಡಿಯೋ ಇನ್ನಾವುದೇ ಕಾರಣದಿಂದಲೋ ಹೆಲ್ಮೆಟ್ ಧರಿಸದೇ ಇರುವುದು ಈ ರೀತಿ ಜೀವಕ್ಕೆ ಆಪತ್ತು ತರುವ ಘಟನೆಗಳಾಗಲು ಕಾರಣವಾಗುತ್ತದೆ ಎಂದರು.

ರಸ್ತೆ ಬದಿ ನಡೆದುಕೊಂಡು ಹೋಗುವವರು ಮುನ್ನೆಚ್ಚರಿಕೆ ವಹಿಸಬೇಕು. ಕನಿಷ್ಠ ಮೊಬೈಲ್ ಟಾರ್ಚ್ನ್ನಾದರೂ ಹಚ್ಚಿಕೊಂಡು ತಿರುಗಾಡಬೇಕು. ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕಾದರೆ ಪೊಲೀಸರೊಂದಿಗೆ ಸಾರ್ವಜನಿಕರ ಸಹಭಾಗಿತ್ವ ಬಹುಮುಖ್ಯವಾಗುತ್ತದೆ ಎಂದು ಹೇಳಿದರು.

18 ವರ್ಷ ವಯಸ್ಸಿನ ಒಳಗಿನವರಿಗೆ ಬೈಕ್ ಓಡಿಸಲು ಕೊಟ್ಟರೆ ಅವರ ತಂದೆ ತಾಯಿ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ಟಂಟಂ, ಗೂಡ್ಸ್ ವಾಹನಗಳ ವಾಹನ ಚಾಲಕರಿಗೂ ರಸ್ತೆ ನಿಯಮಗಳ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಂದ ಹಾಗೂ ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಾಗಿ ಸೂಚನೆಗಳನ್ನು ನೀಡಿರುತ್ತೇವೆ. ಬೈಕ್ ಸವಾರರು ಹೆಲ್ಮೆಟ್ ಧರಿಸಬೇಕು, ಗೂಡ್ಸ್ ಚಾಲಕರು ಸಾರಿಗೆ ನಿಯಮಗಳಂತೆ ವಾಹನಗಳನ್ನು ಓಡಿಸಬೇಕು. ಅಪಘಾತಗಳಾಗದಂತೆ ಮುನ್ನೆಚ್ಚರಿಕೆ ವಹಿಸಿ ಅಮಾಯಕರ ಜೀವ ಹಾನಿ ತಪ್ಪಿಸಬೇಕು ಎಂದು ಎಸ್ಪಿ ತಿಳಿಸಿದರು.

ಅಪಘಾತದ ಸ್ಥಳಕ್ಕೆ ಎಸ್ಪಿ ಭೇಟಿ:

ಕುಂಟೋಜಿ ಸಮೀಪದಲ್ಲಿ ಗುರುವಾರ ರಾತ್ರಿ ಸಂಭವಿಸಿದ ಬೈಕ್ ಅಪಘಾತದ ಸ್ಥಳಕ್ಕೆ ಎಸ್ಪಿ ಋಷಿಕೇಶ ಸೋನಾವಣೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಅಲ್ಲದೇ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಇದನ್ನೂ ಓದಿ: ಗಂಗಾ ಕಲ್ಯಾಣ ಸೇರಿ ವಿವಿಧ ಯೋಜನೆಯಡಿ ಅರ್ಜಿ‌ ಸಲ್ಲಿಸಿ: ಕಾಶಪ್ಪನವರ ಕರೆ (ವಿಡಿಯೋ ನೋಡಿ)

ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ ತಿಪರೆಡ್ಡಿ ಇದ್ದರು.

Latest News

BREAKING: ಭೀಕರ ಅಪಘಾತ.. ಐವರು ಸಾವು

BREAKING: ಭೀಕರ ಅಪಘಾತ.. ಐವರು ಸಾವು

ಯಾದಗಿರಿ: ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಬೈಕ್‌'ಗೆ ಸಾರಿಗೆ ಬಸ್‌ ಡಿಕ್ಕಿಯಾಗಿ ಐವರು

Budget Breaking : ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೇಂದ್ರ ಸರ್ಕಾರ

Budget Breaking : ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೇಂದ್ರ ಸರ್ಕಾರ

ದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ

Gruhalakshmi Yojane: ಸಂಕ್ರಾಂತಿಗೆ ಸರ್ಕಾರದಿಂದ ಬಂಪರ್ ಆಫರ್

Gruhalakshmi Yojane: ಸಂಕ್ರಾಂತಿಗೆ ಸರ್ಕಾರದಿಂದ ಬಂಪರ್ ಆಫರ್

ಗೃಹಲಕ್ಷ್ಮಿ ಯೋಜನೆಯ (Gruhalakshmi Yojane) 16ನೇ ಕಂತಿನ ಹಣದ ಕುರಿತು ಮಾಹಿತಿ ಇಲ್ಲಿದೆ. ಪ್ರತಿ

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ನವದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ 10 ಗ್ರಾಂ ಚಿನ್ನದ ಧಾರಣೆಯು ಮತ್ತೆ

Adhaar Card New Rules: 5 ಹೊಸ ನಿಮಯ ಜಾರಿ.. ದಂಡ ಫಿಕ್ಸ್.!

Adhaar Card New Rules: 5 ಹೊಸ ನಿಮಯ ಜಾರಿ.. ದಂಡ ಫಿಕ್ಸ್.!

Adhaar Card New Rules: ಸರ್ಕಾರದಿಂದ ಆಧಾರ್ ಕಾರ್ಡ್ ಹೊಂದಿದವರಿಗೆ 5 ಹೊಸ ರೂಲ್ಸ್ ಜಾರಿ ಮಾಡಿದೆ. ಈ ಐದೂ ನಿಮಯ ಪಾಲಿಸದಿದ್ದರೆ ದಂಡ ಗ್ಯಾರಂಟಿ! ಆಧಾರ್ ಕಾರ್ಡ್ ಅನ್ನು ಪ್ರತಿಯೊಬ್ಬ ನಾಗರಿಕನ ಅಗತ್ಯ ದಾಖಲೆಯಾಗಿ ಗುರುತಿಸಲಾಗಿದೆ. ಇದು ನಮ್ಮ ಗುರುತಿನ ಕಡ್ಡಾಯ ದಾಖಲೆಯಾಗಿದೆ. ಎಲ್ಲಾ ಸರ್ಕಾರಿ ಯೋಜನೆಗಳು ಮತ್ತು ಹಣಕಾಸು ಸೇವೆಗಳು ನಮ್ಮನ್ನು ತಲುಪಲು ಆಧಾರ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಅಗತ್ಯವಿರುತ್ತದೆ. Join Our Telegram: https://t.me/dcgkannada

Virat Kohli Retirement Plan: ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಕ್ಲಾರಿಟಿ

Virat Kohli Retirement Plan: ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಕ್ಲಾರಿಟಿ

Virat Kohli Retirement Plan ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ವಿರಾಟ್ ಕಳಪೆ ಫಾರ್ಮ್ ನಿಂದ ನಿವೃತ್ತಿ ಕುರಿತು ಚರ್ಚೆ ಶುರುವಾಗಿದೆ. ಈ ಸರಣಿಯಲ್ಲಿ 9 ಇನಿಂಗ್ಸ್ ಆಡಿದ್ದ ವಿರಾಟ್ ಕೊಹ್ಲಿ 23.75 ರ ಕಳಪೆ ಸರಾಸರಿಯೊಂದಿಗೆ 190 ರನ್ ಮಾತ್ರ ಕಲೆಹಾಕಿದ್ದಾರೆ. ಈ ಕಳಪೆ ಪ್ರದರ್ಶನದ ಬೆನ್ನಲ್ಲೇ ಕೊಹ್ಲಿ ನಿವೃತ್ತರಾಗುವುದು ಉತ್ತಮ ಎಂಬ ಕೂಗುಗಳು ಕೇಳಿಬಂದಿದ್ದವು. ಆದರೀಗ ವಿರಾಟ್ ಕೊಹ್ಲಿ ತಾವು ಯಾವಾಗ ನಿವೃತ್ತಿ ಆಗುತ್ತೇನೆ ಎಂಬುದರ