ಪಂಚಾಯಿತಿ ಸಿಬ್ಬಂದಿ ತೀವ್ರ ತರಾಟೆ: ಜಮ್ಮಲದಿನ್ನಿಯಲ್ಲಿ ಜನರ ಆರೋಗ್ಯ ತಪಾಸಣೆಗೆ ಒಪಿಡಿ ಸೇವೆ

ಪಂಚಾಯಿತಿ ಸಿಬ್ಬಂದಿ ತೀವ್ರ ತರಾಟೆ: ಜಮ್ಮಲದಿನ್ನಿಯಲ್ಲಿ ಜನರ ಆರೋಗ್ಯ ತಪಾಸಣೆಗೆ ಒಪಿಡಿ ಸೇವೆ

ಮುದ್ದೇಬಿಹಾಳ : ತಾಲ್ಲೂಕಿನ ಜಮ್ಮಲದಿನ್ನಿ ಗ್ರಾಮಕ್ಕೆ ಕುಡಿವ ನೀರು ಪೂರೈಸುವ ವಾಲ್ವ್ವೊಂದರ ಚೇಂಬರ್‌ನಲ್ಲಿ ಸತ್ತ ನಾಯಿ ಕಳೆಬರ ಪತ್ತೆಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಗ್ರಾಮಕ್ಕೆ ಗುರುವಾರ ಸಂಜೆ ಹಾಗೂ ಶುಕ್ರವಾರ ದೌಡಾಯಿಸಿದ್ದಾರೆ.
ಆರೋಗ್ಯ ಇಲಾಖೆಯಿಂದ ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಒಪಿಡಿ ಸೇವೆ ಆರಂಭಿಸಲಾಗಿದ್ದು ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ತಾಲ್ಲೂಕು ವೈದ್ಯಾಧಿಕಾರಿ ಡಾ.ಸತೀಶ ತಿವಾರಿ, ಜಮ್ಮಲದಿನ್ನಿ ಗ್ರಾಮಕ್ಕೆ ನೀರು ಪೂರೈಕೆ ವಾಲ್ವ್ದ ಚೇಂಬರ್‌ನಲ್ಲಿ ನಾಯಿ ಸತ್ತು ಬಿದ್ದಿರುವುದರಿಂದ ನೀರು ವಿಷಮಯವಾಗಿರುತ್ತದೆ.ಅದನ್ನು ಸೇವನೆ ಮಾಡಿದರೆ ತೀವ್ರ ಗಂಭೀರ ಪರಿಣಾಮಗಳು ಉಂಟಾಗುತ್ತವೆ.ಸದ್ಯಕ್ಕೆ ಗ್ರಾಮದಲ್ಲಿ ಸಂಚರಿಸಿ ಮನೆ ಮನೆಗೆ ಸಮೀಕ್ಷೆ ನಡೆಸಿ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಅಲ್ಲದೇ ಈ ವಾಲ್ವ್ನಿಂದ ಪೂರೈಕೆಯಾಗಿರುವ ನೀರನ್ನು ಪರೀಕ್ಷೆಗೆಂದು ಲ್ಯಾಬ್‌ಗೆ ಕಳಿಸಿಕೊಡಲಾಗುವುದು. ನೀರು ಪೂರೈಕೆ ಮಾಡಬೇಕಾದರೆ ಪಂಚಾಯಿತಿಯವರು ಪೈಪ್‌ಲೈನ್ ಶುಚಿತ್ವಗೊಳಿಸಿ ಪೂರೈಕೆಗೆ ಕ್ರಮ ಜರುಗಿಸಿ ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.
ತಾಪಂ ಇಒ,ಆರ್‌ಡಬ್ಲೂö್ಯಎಸ್ ಎಇಇ ಭೇಟಿ: ವಾಲ್ವ್ನಲ್ಲಿ ನಾಯಿ ಸತ್ತು ಬಿದ್ದಿರುವ ವಿಷಯ ತಿಳಿಯುತ್ತಲೇ ಸ್ಥಳಕ್ಕೆ ತಾಪಂ ಇಒ ನಿಂಗಪ್ಪ ಮಸಳಿ, ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆ ಎಇಇ ಆರ್.ಎಸ್.ಹಿರೇಗೌಡ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಅಲ್ಲದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರು.

ಗ್ರಾಮಸ್ಥರ ತರಾಟೆ:

ಕುಡಿವ ನೀರು ಪೂರೈಕೆಯಲ್ಲಿ ದಿವ್ಯ ನಿರ್ಲಕ್ಷö್ಯ ವಹಿಸಿರುವ ಇಂಗಳಗೇರಿ ಪಂಚಾಯಿತಿ ಪಿಡಿಒ ವಿಜಯಮಹಾಂತೇಶ ಕೋರಿ, ಕಾರ್ಯದರ್ಶಿ ಬಸನಗೌಡ ಬಿರಾದಾರ ಅವರನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು.ವಾಲ್ವ್ದಲ್ಲಿ ಸತ್ತ ನಾಯಿ ಬಿದ್ದಿರುವುದನ್ನು ಗಮನಿಸದಂತೆ ನಿಮ್ಮ ಪಂಚಾಯಿತಿ ವಾಲ್ವ್ಮನಗಳು ಕೆಲಸ ಮಾಡುತ್ತಾರೆ ಎಂದರೆ ಕಲುಷಿತ ನೀರು ಕುಡಿದ ಗ್ರಾಮಸ್ಥರ ಆರೋಗ್ಯದಲ್ಲಿ ಏನಾದರೂ ಹೆಚ್ಚು ಕಡಿಮೆ ಆದಲ್ಲಿ ಯಾರು ಹೊಣೆಗಾರರು ಎಂದು ಪ್ರಶ್ನಿಸಿದರು.

ಇಂಗಳಗೇರಿ ಗ್ರಾಪಂನಿAದ ಸತ್ತು ಬಿದ್ದಿದ್ದ ನಾಯಿಯ ಕಳೆಬರವನ್ನು ವಿಲೇವಾರಿ ಮಾಡಿ ಅಲ್ಲಿ ರೋಗ ನಿರೋಧಕ ಪೌಡರ್‌ನ್ನು ಸಿಂಪಡಣೆ ಮಾಡಲಾಗಿದೆ.

Latest News

ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ ಕಲರವ

ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ ಕಲರವ

ನಾಲತವಾಡ: ಸಮೀಪದ ಲೊಟಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತಿಯ ಕಾಂತಿ ಮಕ್ಕಳ ಮೂಲಕ

ಮಹಿಳೆಯರಿಗೆ ಋತುಚಕ್ರ ರಜೆ :ಸರ್ಕಾರದಿಂದ ಮಾನವೀಯ ಸಂವೇದನೆಯ ಆದೇಶ-ಸಂಗೀತಾ ನಾಡಗೌಡ

ಮಹಿಳೆಯರಿಗೆ ಋತುಚಕ್ರ ರಜೆ :ಸರ್ಕಾರದಿಂದ ಮಾನವೀಯ ಸಂವೇದನೆಯ ಆದೇಶ-ಸಂಗೀತಾ ನಾಡಗೌಡ

ಮುದ್ದೇಬಿಹಾಳ : ರಾಜ್ಯ ಸರ್ಕಾರ ಎರಡು ದಿನಗಳ ಹಿಂದಷ್ಟೇ ರಾಜ್ಯದ ಸರ್ಕಾರಿ,ಖಾಸಗಿ.ಗುತ್ತಿಗೆ,ಹೊರಗುತ್ತಿಗೆ ಕ್ಷೇತ್ರದಲ್ಲಿ ಸೇವೆ

ನ.16 ರಂದು ವಿಜಯಪುರದಲ್ಲಿ ಪದಗ್ರಹಣ  :       ಮುದ್ದೇಬಿಹಾಳ A.I.B.S.S ಸಂಘಕ್ಕೆ ಬಹಾದ್ದೂರ ರಾಠೋಡ ಪುನರಾಯ್ಕೆ

ನ.16 ರಂದು ವಿಜಯಪುರದಲ್ಲಿ ಪದಗ್ರಹಣ : ಮುದ್ದೇಬಿಹಾಳ A.I.B.S.S ಸಂಘಕ್ಕೆ ಬಹಾದ್ದೂರ ರಾಠೋಡ ಪುನರಾಯ್ಕೆ

ಮುದ್ದೇಬಿಹಾಳ : ಬಂಜಾರಾ ಸಮಾಜದ ಸಂಘಟನೆಯನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟಲು, ಸಮಾಜದ ಮಕ್ಕಳು ಶೈಕ್ಷಣಿಕ,ಔದ್ಯೋಗಿಕ

ಅಸ್ಕಿ ಫೌಂಡೇಶನ್‌ದಿಂದ 50 ಸಾವಿರ ರೂ.ನೆರವು: ಕೆಬಿಜೆಎನ್‌ಎಲ್‌ದಿಂದ ರಕ್ಷಣಾಗೋಡೆ ನಿರ್ಮಾಣಕ್ಕೆ ಸಿ.ಬಿ.ಅಸ್ಕಿ ಒತ್ತಾಯ

ಅಸ್ಕಿ ಫೌಂಡೇಶನ್‌ದಿಂದ 50 ಸಾವಿರ ರೂ.ನೆರವು: ಕೆಬಿಜೆಎನ್‌ಎಲ್‌ದಿಂದ ರಕ್ಷಣಾಗೋಡೆ ನಿರ್ಮಾಣಕ್ಕೆ ಸಿ.ಬಿ.ಅಸ್ಕಿ ಒತ್ತಾಯ

ಮುದ್ದೇಬಿಹಾಳ : ತಂಗಡಗಿ ಇಳಿಜಾರಿನಿಂದ ಶಿರೋಳ ಗ್ರಾಮದ ಬಳಿ ಹಾಯ್ದು ಹೋಗಿರುವ ಕೆಬಿಜೆಎನ್‌ಎಲ್‌ನ ಎಡದಂಡೆ

MUDDEBIHAL :  ಕಾಲುವೆಯಲ್ಲಿ ಜಾರಿ ಬಿದ್ದು ಮೂವರು ಕಣ್ಮರೆ : ಮುಂದುವರೆದ ಶೋಧ ಕಾರ್ಯ

MUDDEBIHAL : ಕಾಲುವೆಯಲ್ಲಿ ಜಾರಿ ಬಿದ್ದು ಮೂವರು ಕಣ್ಮರೆ : ಮುಂದುವರೆದ ಶೋಧ ಕಾರ್ಯ

ಮುದ್ದೇಬಿಹಾಳ ತಾಲ್ಲೂಕಿನ ಶಿರೋಳ ಗ್ರಾಮದ ಸಮೀಪದಲ್ಲಿ ಕಾಲುವೆಯಲ್ಲಿ ಕಾಲು ಜಾರಿ ಮೂವರು ಬಿದ್ದಿರುವ ಘಟನೆ ಮಂಗಳವಾರ ಮದ್ಯಾಹ್ನ ನಡೆದಿದೆ. ಈ ಘಟನೆ ಹಿನ್ನೆಲೆಯಲ್ಲಿ ಅಗ್ನಿಶಾಮಕ ಠಾಣೆ ಹಾಗೂ ಪೊಲೀಸ್ ಇಲಾಖೆಯಿಂದ ಶೋಧ ಕಾರ್ಯ ಮುಂದುವರೆದಿದೆ. ಮಹೆಬೂಬ ನಗರದ ಪಕ್ಕದಲ್ಲಿರುವ ಆಶ್ರಯ ಕಾಲನಿಯಲ್ಲಿ ವಾಸವಿದ್ದ ಸುಡಗಾಡ ಸಿದ್ಧ ಜನಾಂಗದ ಇಬ್ಬರು ಯುವಕರು, ಓರ್ವ ಯುವತಿ ಕಾಲುವೆಯಲ್ಲಿ ಮುಳುಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರಿಂದ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ. ಬಸಮ್ಮ ಚೆನ್ನಪ್ಪ ಕೊಣ್ಣೂರ(21),

ಐದು ದಿನಗಳ ಹೋರಾಟ ಅಂತ್ಯ :                                       ಟನ್ ಕಬ್ಬಿಗೆ 3264 – ಬಾಲಾಜಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ  ಅಧಿಕೃತ ಘೋಷಣೆ

ಐದು ದಿನಗಳ ಹೋರಾಟ ಅಂತ್ಯ : ಟನ್ ಕಬ್ಬಿಗೆ 3264 – ಬಾಲಾಜಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಅಧಿಕೃತ ಘೋಷಣೆ

ಮುದ್ದೇಬಿಹಾಳ : ಕಬ್ಬಿನ ರಿಕವರಿ ಆಧಾರದ ಮೇಲೆ ಟನ್ ಕಬ್ಬಿಗೆ 3264 ರೂ.ನೀಡುವುದಾಗಿ ತಾಲ್ಲೂಕಿನ ಯರಗಲ್ ಮದರಿ ಬಾಲಾಜಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಶನಿವಾರ ಅಧಿಕೃತ ಘೋಷಣೆ ಮಾಡಿದ್ದು ಕಳೆದ ಐದು ದಿನಗಳಿಂದ ತಾಲ್ಲೂಕಿನ ಅಮರಗೋಳ ಕ್ರಾಸ್ ಬಳಿ ನಡೆಯುತ್ತಿದ್ದ ರೈತರ ಹೋರಾಟ ಅಂತ್ಯಗೊAಡಿದೆ. ತಾಲ್ಲೂಕಿನ ಅಮರಗೋಳ ಕ್ರಾಸ್ ಬಳಿ ಕಬ್ಬಿನ ವಾಹನಗಳನ್ನು ತಡೆದು ನಿಲ್ಲಿಸಿ ಕರ್ನಾಟಕ ರೈತ ಸಂಘ ಹಾಗೂ ರೈತಪರ ಸಂಘಟನೆಯ ಮುಖಂಡರು ಹೋರಾಟ ಆರಂಭಿಸಿದ್ದರು.ಇಲ್ಲಿನ