ಶ್ರದ್ಧೆಯಿಂದ ಹಬ್ಬದಾಚರಣೆಗಳಲ್ಲಿ ತೊಡಗಿ-ಪೇಶ ಇಮಾಮ್

ಶ್ರದ್ಧೆಯಿಂದ ಹಬ್ಬದಾಚರಣೆಗಳಲ್ಲಿ ತೊಡಗಿ-ಪೇಶ ಇಮಾಮ್

ಮುದ್ದೇಬಿಹಾಳ : ಯಾರು ರಂಜಾನ್ ಮಾಸದಲ್ಲಿ ಶ್ರದ್ಧೆಯಿಂದ ನಮಾಜ್, ರೋಜಾ, ಕುರಾನ್ ತಿಲಾವತ್ ಹಾಗೂ ಜಕಾತ್‌ನಂತಹ ಧಾರ್ಮಿಕ ವಿಧಿಗಳನ್ನು ಪೂರೈಸಿರುತ್ತಾರೋ, ಬಡವರಿಗೆ ದಾನ ಧರ್ಮಗಳನ್ನು ಮಾಡಿರುತ್ತಾರೋ, ಅಂತಹವರಿಗೆ ಮಾತ್ರ ಈದ್ಗಾಗೆ ಪ್ರವೇಶಿಸುವ ಮತ್ತು ರಂಜಾನ್ ಹಬ್ಬವನ್ನು ಆಚರಿಸುವ ನೈತಿಕ ಹಕ್ಕಿದೆ ಎಂದು ಜಾಮಿಯಾ ಮಸೀದಿಯ ಪೇಶ ಇಮಾಮ್ ಪ್ರತಿಪಾದಿಸಿದರು.

ಪಟ್ಟಣದ ತಾಳಿಕೋಟಿ ರಸ್ತೆಯ ಪಕ್ಕದಲ್ಲಿರುವ ಈದ್ಗಾ ಮೈದಾನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಈದ್ ಅಲ್-ಫಿತರ್ ರಂಜಾನ್ ಸಾಮೂಹಿಕ ನಮಾಜಿನ ನಂತರ ನೆರೆದಿದ್ದ ಮುಸ್ಲಿಂ ಬಾಂಧವರನ್ನು ಉದ್ದೇಶಿಸಿ ಅವರು ಮಾತನಾಡಿದರು.

“ರಂಜಾನ್ ಕೇವಲ ಉಪವಾಸಕ್ಕೆ ಸೀಮಿತವಾಗಿಲ್ಲ. ಇದು ಆತ್ಮಾವಲೋಕನ ಮತ್ತು ದಾನದ ಮಾಸವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಹಸಿವನ್ನು ನೀಗಿಸುವ ‘ಜಕಾತ್’ ಪ್ರಕ್ರಿಯೆಯಲ್ಲಿ ಪಾಲ್ಗೊಂಡವರು ನಿಜವಾದ ಹಬ್ಬದ ಸಂಭ್ರಮಕ್ಕೆ ಅರ್ಹರು. ದೇವರ ಮೇಲಿನ ಭಕ್ತಿ ಹಾಗೂ ಬಡವರ ಮೇಲಿನ ಕರುಣೆ ಹೊಂದಿರುವವರು ಈ ಪವಿತ್ರ ಈದ್ಗಾದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬದ ಸಾರ್ಥಕತೆ ಪಡೆಯುತ್ತಾರೆ” ಎಂದು ಅವರು ತಿಳಿಸಿದರು.

ನಗರದ ಎಲ್ಲಾ ಮಸೀದಿಗಳಿಂದ ಕಿಲ್ಲಾಗಲ್ಲಿಯ ಜುಮ್ಮಾ ಮಸೀದಿಯಲ್ಲಿ ಕೂಡಿದ ಜಮಾತಗಳನ್ನು ಸಾಮೂಹಿಕವಾಗಿ ತಕಬೀರ್ ಹೇಳುತ್ತಾ ಈದ್ಗಾ ಮೈದಾನಕ್ಕೆ ಆಗಮಿಸಿದರು.
ತಾಳಿಕೋಟಿ ರಸ್ತೆಯ ಈದ್ಗಾದಲ್ಲಿ ನಡೆದ ಈ ಸಾಮೂಹಿಕ ನಮಾಜಿನಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಪಾಲ್ಗೊಂಡು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.ಸಿಪಿಐ ಮೊಹ್ಮದ ಫಸಿವುದ್ದೀನ,ಪಿಎಸ್‌ಐ ಸಂಜಯ ತಿಪರೆಡ್ಡಿ ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸಿದ್ದರು.

Latest News

ಶಾಸಕ ನಾಡಗೌಡರ ಮನೆಗೆ ನನ್ನ ಚಪ್ಪಲಿಯೂ ಹೋಗಿಲ್ಲ-ಎ.ಎಸ್.ಪಾಟೀಲ ನಡಹಳ್ಳಿ

ಶಾಸಕ ನಾಡಗೌಡರ ಮನೆಗೆ ನನ್ನ ಚಪ್ಪಲಿಯೂ ಹೋಗಿಲ್ಲ-ಎ.ಎಸ್.ಪಾಟೀಲ ನಡಹಳ್ಳಿ

ಮುದ್ದೇಬಿಹಾಳ : ತಮಗೆ ಸಾಷ್ಟಾಂಗ ಹಾಕಿರುವುದಾಗಿ ಸುಳ್ಳು ಹೇಳಿಕೆ ಕೊಡುವುದನ್ನು ಮೊದಲು ಶಾಸಕ ನಾಡಗೌಡರು

ತಂಗಡಗಿಯಲ್ಲಿ 26 ಜೋಡಿ ನವಜೀವನಕ್ಕೆ ಪದಾರ್ಪಣೆ

ತಂಗಡಗಿಯಲ್ಲಿ 26 ಜೋಡಿ ನವಜೀವನಕ್ಕೆ ಪದಾರ್ಪಣೆ

ಮುದ್ದೇಬಿಹಾಳ : ಇಂದಿನ ರಾಜಕಾರಣಿಗಳು ತಮ್ಮ ಮಕ್ಕಳ ಮದುವೆಗಳನ್ನು ದುಂದುವೆಚ್ಚದಲ್ಲಿ ಮಾಡುವಬದಲು ಅದೇ ಖರ್ಚಿನಲ್ಲಿ

ಮಾಜಿ ಶಾಸಕರು ಐದು ವರ್ಷ ನಿದ್ದೆ ಮಾಡುತ್ತಿದ್ದರೇ ?-ಶಾಸಕ ನಾಡಗೌಡ ಪ್ರಶ್ನೆ

ಮಾಜಿ ಶಾಸಕರು ಐದು ವರ್ಷ ನಿದ್ದೆ ಮಾಡುತ್ತಿದ್ದರೇ ?-ಶಾಸಕ ನಾಡಗೌಡ ಪ್ರಶ್ನೆ

ಮುದ್ದೇಬಿಹಾಳ : ಮತಕ್ಷೇತ್ರದ ತಾಳಿಕೋಟಿ ತಾಲ್ಲೂಕಿನಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ತಮ್ಮ ಅವಧಿಯಲ್ಲಿ ಜಾಗೆ ಗುರುತಿಸುವುದನ್ನು

ಮಾ.20 ರಂದು ತಂಗಡಗಿಯಲ್ಲಿ ದುರ್ಗಾದೇವಿ ಜಾತ್ರೆ,ಸಾಮೂಹಿಕ ವಿವಾಹ

ಮಾ.20 ರಂದು ತಂಗಡಗಿಯಲ್ಲಿ ದುರ್ಗಾದೇವಿ ಜಾತ್ರೆ,ಸಾಮೂಹಿಕ ವಿವಾಹ

ಮುದ್ದೇಬಿಹಾಳ : ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.20 ರಂದು

ಮುದ್ದೇಬಿಹಾಳ : ಅಬ್ಬರದ ಆಲಿಕಲ್ಲು ಮಳೆಗೆ ನೆಲಕಚ್ಚಿದ ದ್ರಾಕ್ಷಿ,ಚಿಕ್ಕು,ತೆಂಗಿನ ಗಿಡ

ಮುದ್ದೇಬಿಹಾಳ : ಅಬ್ಬರದ ಆಲಿಕಲ್ಲು ಮಳೆಗೆ ನೆಲಕಚ್ಚಿದ ದ್ರಾಕ್ಷಿ,ಚಿಕ್ಕು,ತೆಂಗಿನ ಗಿಡ

ಮುದ್ದೇಬಿಹಾಳ : ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಮಂಗಳವಾರ ಕೆಲಕಾಲ ಸುರಿದ ಭಾರೀ ಬಿರುಗಾಳಿ,ಆಲಿಕಲ್ಲು ಮಳೆ ರೈತರಿಗೆ ನಷ್ಟವನ್ನುಂಟು ಮಾಡಿದ್ದು ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಬರಸಿಡಿಲು ಅಪ್ಪಳಿಸಿದಂತಾಗಿದೆ. ತಾಲ್ಲೂಕಿನ ಆಲೂರ ಗ್ರಾಮದಲ್ಲಿ ಬಿರುಗಾಳಿ,ಮಳೆಗೆ ಶಿವಪುತ್ರಪ್ಪ ಗೂಳಿ ಎಂಬುವರ ಹೊಲದಲ್ಲಿ ಬೆಳೆದಿದ್ದ ಐದು ಎಕರೆ ದ್ರಾಕ್ಷಿ ಬೆಳೆ ಹಾನಿಯಾಗಿದೆ.ಇನ್ನೆನ್ನು ವಾರದಲ್ಲಿ ದ್ರಾಕ್ಷಿ ಕಟಾವು ಮಾಡಬೇಕಿದ್ದ ರೈತನಿಗೆ ಈ ಬಿರುಗಾಳಿ,ಮಳೆ ಬರಸಿಡಿಲಿನಂತೆ ಬಂದೆರಗಿದ್ದು ದ್ರಾಕ್ಷಿ ಗೊನೆಗಳು,ಹಣ್ಣುಗಳು ಉದುರಿ ಬಿದ್ದಿವೆ.ಇದರೊಟ್ಟಿಗೆ ಚಿಕ್ಕು ಗಿಡಗಳಿಂದ

ಗ್ಯಾಸ್ ಸಿಗುತ್ತಿಲ್ಲವೇ ? ಈ ಹೆಲ್ಪಲೈನ್‌ಗೆ ಕರೆ ಮಾಡಿ…

ಗ್ಯಾಸ್ ಸಿಗುತ್ತಿಲ್ಲವೇ ? ಈ ಹೆಲ್ಪಲೈನ್‌ಗೆ ಕರೆ ಮಾಡಿ…

ಮುದ್ದೇಬಿಹಾಳ : ಕೊಲ್ಲಿ ರಾಷ್ಟ್ರಗಳ ಮಧ್ಯೆ ನಡೆದಿರುವ ಯುದ್ದದ ಸಂಘರ್ಷದಿAದ ತೈಲೋತ್ಪನ್ನಗಳ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದ್ದು ಏತನ್ಮದ್ಯೆ ವಿಜಯಪುರ ಜಿಲ್ಲಾಡಳಿತದಿಂದ ಗ್ರಾಹಕರ ಅನುಕೂಲಕ್ಕಾಗಿ ಹೆಲ್ಪಲೈನ್ ಆರಂಭಿಸಲಾಗಿದೆ. ಸಿಲಿಂಡರ್ ಬುಕ್ ಮಾಡಿದ ನಂತರ ಎದುರಾಗುವ ಸಮಸ್ಯೆಗಳಿಗೆ ಸಂಪರ್ಕಿಸುವAತೆ ವಿಜಯಪುರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ವಿನಯಕುಮಾರ ಪಾಟೀಲ್ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಸಿಲಿಂಡರ್ ಪೂರೈಕೆ,ವಿತರಣೆಯಲ್ಲಿ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ.ಗ್ರಾಹಕರು ಆತಂಕಗೊAಡು ಏಜೆನ್ಸಿಗಳ ಮುಂದೆ ಸರದಿಯಲ್ಲಿ ನಿಲ್ಲುವುದು ಬೇಡ