ನವದೆಹಲಿ: ಆಕಾಶದಲ್ಲಿ ಹಾರುತ್ತಿದ್ದ ವಿಮಾನದ ಭಾಗಗಳು ಭೂಮಿಗೆ ಬಿದ್ದಿವೆ!
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada
ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ವಿಮಾನವೊಂದು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆದ ಬಳಿಕ ಅದರ ಲೋಹದ ಕೆಲ ಭಾಗಗಳು ಮನೆಗಳ ಛಾವಣಿ ಮೇಲೆ ಬಿದ್ದ ಘಟನೆ ಸೆಪ್ಟೆಂಬರ್ 2 ರ ರಾತ್ರಿ 9:30 ರ ಸುಮಾರಿಗೆ ನಡೆದಿದೆ.
ನೈಋತ್ಯ ದೆಹಲಿಯ ವಸಂತ್ ಕುಂಜ್‌ನ ಶಂಕರ್ ವಿಹಾರ್ ಪ್ರದೇಶದ ಮನೆಯೊಂದರ ಮೇಲ್ಬಾವಣಿಯ ಮೇಲೆ ಲೋಹದ ತುಣುಕುಗಳು ಬಿದ್ದಿವೆ ಎಂದು ವರದಿಗಳು ತಿಳಿಸಿದೆ.
ತಕ್ಷಣವೇ ಮನೆಯ ಮಾಲೀಕರು ದೆಹಲಿ ಪೊಲೀಸ್ ನಿಯಂತ್ರಣ ಕೊಠಡಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ವಿಚಾರ ತಿಳಿದ ತಕ್ಷಣ ಏರ್ ಟ್ರಾಫಿಕ್ ಕಂಟ್ರೋಲ್ (ATC) ಸುತ್ತಮುತ್ತಲಿನ ಎಲ್ಲಾ ವಿಮಾನಗಳ ಪೈಲಟ್‌ಗಳಿಗೆ ಸೂಚನೆ ನೀಡಿದೆ. ಮನೆ ಛಾವಣಿ ಮೇಲೆ ಬಿದ್ದ ಲೋಹದ ತುಂಡು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಸಂಖ್ಯೆ IX-145 ರದ್ದು ಎಂದು ತಿಳಿದು ಬಂದ ತಕ್ಷಣ ಅದನ್ನು ತುರ್ತು ಭೂಸ್ಪರ್ಷ ಮಾಡುವಂತೆ ಕೇಳಲಾಗಿದೆ.
ವಿಮಾನ ಟೇಕಾಫ್ ಆದ ಕೆಲವೇ ಸಮಯದಲ್ಲಿ ಇಂಜಿನ್ ಸಮಸ್ಯೆ ಉಂಟಾಗಿದೆ. ವಿಮಾನಕ್ಕೆ ಹಿಂತಿರುಗಲು ಮತ್ತು ಐಜಿಐ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯುವಂತೆ ಸೂಚಿಸಲಾಗಿತ್ತು.
ಇದನ್ನೂ ಓದಿ: ‘ನಿನ್ನ ಫೋಟೋ ನೋಡಿಕೊಂಡೇ ನಾನು ಹಸ್ತಮೈಥುನ ಮಾಡಿಕೊಂಡೆ ಕಣೆ’
ಸದ್ಯ, ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ವಿಮಾ ಲೋಹದ ತುಂಡು ಬಿದ್ದಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ.