ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಜನವರಿ ತಿಂಗಳ ಬಳಿಕ ಅತಿ ಕನಿಷ್ಠಕ್ಕೆ ತಲುಪಿದೆ. ಹೀಗಾಗಿ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ (Petrol price) ಇಳಿಯುವ ಸಾಧ್ಯತೆ ಇದೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada
ಕಚ್ಚಾತೈಲದ ಬೆಲೆಪ್ರತಿಬ್ಯಾರೆಲ್‌ಗೆ ಬುಧವಾರ 6181.19 ರೂಪಾಯಿ (73.6 ಡಾಲರ್) ಕುಸಿದಿದೆ. ಇದು 9 ತಿಂಗಳ ಕನಿಷ್ಠ. ಇದು ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.
ದೇಶದಲ್ಲಿನ ಪೆಟ್ರೋಲ್, ಡೀಸೆಲ್ ಬೆಲೆಯೂ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಲಿಬಿಯಾ ದೇಶದ ಇಂಧನ ಉತ್ಪಾದಕರು ಮರಳಿ ಮಾರುಕಟ್ಟೆಗೆ ಬಂದಿರುವುದು, ರಷ್ಯಾ ಸೇರಿದಂತೆ ಇತರೆ ದೇಶಗಳು ಹೆಚ್ಚೆಚ್ಚುತೈ ಲೋತ್ಪಾದನೆಯಲ್ಲಿ ತೊಡಗಿರುವುದು ಇಳಿಕೆಗೆ ಕಾರಣ.
ಆಪ್ ಆಡಳಿತದ ಪಂಜಾಬಲ್ಲಿ ಪೆಟ್ರೋಲ್, ಡೀಸೆಲ್, ವಿದ್ಯುತ್ ದರ ದಿಢೀರ್ ಏರಿಕೆ:
ಚಂಡೀಗಢ: ಆಪ್ ಆಡಳಿತದಪಂಜಾಬಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಹೆಚ್ಚಿಸಲಾಗಿದೆ.
ಇದೇ ವೇಳೆ ವಿದ್ಯುತ್ ಮೇಲಿನ ಸಬ್ಸಿಡಿ ತೆಗೆದು ಹಾಕ ಲಾಗಿದೆ. ಹೀಗಾಗಿ ಇವುಗಳ ದರ ಏರಿಕೆ ಆಗಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ (ವ್ಯಾಟ್) ಅನ್ನು ಲೀಟರ್‌ಗೆ61 ಪೈಸೆ ಮತ್ತು 92 ಪೈಸೆ ಹೆಚ್ಚಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ಎರಡು ಬೈಕ್‌ಗಳ ನಡುವೆ ಡಿಕ್ಕಿ: ಉಪನ್ಯಾಸಕಿ ಸೇರಿ ಮೂವರ ದುರ್ಮರಣ
ಜತೆಗೆ, ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 3 ರೂಪಾಯಿ ವಿದ್ಯುತ್ ಸಬ್ಸಿಡಿಯನ್ನು ಹಿಂದಿನ ಕಾಂಗ್ರೆಸ್ ಸರ್ಕಾರ ಇದ್ದಾಗಿಂದ ನೀಡುತ್ತಿತ್ತು. ಅದನ್ನು ಈಗ ತೆಗೆದುಹಾಕಲಾಗಿದೆ. (Petrol price)