ಮುದ್ದೇಬಿಹಾಳ : ಪಟ್ಟಣದ ಗ್ರಾಮದೇವತೆ ಜಾತ್ರೆಯ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಕೂಡು ಗಾಡಿ ಸ್ಪರ್ಧೆಯಲ್ಲಿ ಸೂಳೇಭಾವಿಯ ಪ್ರಕಾಶ ಕುರಿ ಅವರ ಎತ್ತಿನಬಂಡಿ ಪ್ರಥಮ ಸ್ಥಾನ ಪಡೆದುಕೊಂಡಿತು.
ಮುದ್ದೇಬಿಹಾಳದ ಬುಡ್ಡೇಸಾಬ ಮಕ್ಕಾಬಾಯಿ ಅವರ ಗಾಡಿ ದ್ವಿತೀಯ, ಬಮ್ಮಣಗಿಯ ಚಂದ್ರಶೇಖರ ಗೌಡರ ತೃತೀಯ ಹಾಗೂ ಗುಳೇದಗುಡ್ಡದ ಮೂಕೇಶ್ವರಿ ತಂಡದವರು ನಾಲ್ಕನೇ ಬಹುಮಾನ ಪಡೆದುಕೊಂಡರು.
ಕಮೀಟಿ ಸದಸ್ಯರಾದ ಕಾಮರಾಜ ಬಿರಾದಾರ, ಹುಲಗಪ್ಪ ನಾಯ್ಕಮಕ್ಕಳ,ಪರಶುರಾಮ ನಾಲತವಾಡ, ರಾಜು ಬಳ್ಳೊಳ್ಳಿ, ಸಂಗಣ್ಣ ಮೇಲಿನಮನಿ,ಬಬ್ಬು ಹುಣಚಗಿ,ಪುರಸಭೆ ಸದಸ್ಯ ಬಸಪ್ಪ ತಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.
ಪುಟ್ಟಿ ಗಾಡಿ ಸ್ಪರ್ಧೆ: ಹೊಲದಲ್ಲಿ ಪುಟ್ಟಿಗಾಡಿ ಸ್ಪರ್ಧೆಯಲ್ಲಿ ಬಿದರಕುಂದಿಯ ಸಂಗನಗೌಡ ಪಾಟೀಲ ಪ್ರಥಮ, ಯಲ್ಲಟ್ಟಿಯ ಅರಣ್ಯಸಿದ್ದೇಶ್ವರ ದ್ವಿತೀಯ, ಜಟ್ಟಗಿಯ ಬಾಳಪ್ಪ ಬಿರಾದಾರ ತೃತೀಯ, ಜಟ್ಟಗಿಯ ಸೂರ್ಯ ಡೇಂಜರ್ ತಂಡ ನಾಲ್ಕನೆ ಬಹುಮಾನ ಪಡೆದುಕೊಂಡವು ಎಂದು ಜಾತ್ರಾ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.