ಮುದ್ದೇಬಿಹಾಳ : ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಲ್ಲಿ ಸರಳತೆಯು ಅವರನ್ನು ಬಹುದೊಡ್ಡ ಮಟ್ಟಕ್ಕೆ ಕೊಂಡೊಯ್ಯುತ್ತದೆ.ಸೇವೆಯಲ್ಲಿ ಪ್ರಾಮಾಣಿಕತೆ,ದಕ್ಷತೆಯಿಂದ ಎನ್.ಎ.ಬಿರಾಜದಾರ ಅವರು ಜನಮನ್ನಣೆ ಗಳಿಸಿದ್ದಾರೆ ಎಂದು ಢವಳಗಿ ಸನಾತನ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.
ತಾಲೂಕಿನ ಢವಳಗಿ ಗ್ರಾಮದ ಸ್ವತಂತ್ರö್ಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎನ್.ಎ.ಬಿರಾಜದಾರ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.ಎಲ್ಲರಿಗೂ ಬೇಕಾಗಿ ಕೆಲಸ ಮಾಡುವವರು ವಿರಳ.ಆದರೆ ಬಿರಾಜದಾರ ಗುರುಗಳ ವಿಷಯದಲ್ಲಿ ಹಾಗಲ್ಲ.ಅವರು ಎಲ್ಲರನ್ನು ಸ್ನೇಹಭಾವದಿಂದ ಕಂಡು ಪ್ರೀತಿಯಿಂದಲೇ ಸೇವೆ ಸಲ್ಲಿಸಿದವರು ಎಂದು ಹೇಳಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಢವಳಗಿ ಸ್ವತಂತ್ರö್ಯ ಪಪೂ ಕಾಲೇಜು ನಿವೃತ್ತ ಪ್ರಾಚಾರ್ಯ ಎನ್.ಎ.ಬಿರಾಜದಾರ ಅವರು, ವಿದ್ಯಾರ್ಥಿಗಳು ತೋರುತ್ತಿದ್ದ ಪ್ರೀತಿ,ಸಹದ್ಯೋಗಿಗಳೊಂದಿಗೆ ಹೊಂದಿದ ಒಡನಾಟವೇ ಎಲ್ಲರ ಪ್ರೀತಿಗೆ ಪಾತ್ರವಾಗಿದೆ.ನಾವು ಕೆಲಸ ಮಾಡುವ ಸ್ಥಳದಲ್ಲಿ ನಾವು ಒಳ್ಳೆಯತನದಿಂದ ಇದ್ದರೆ ಸಾಕು ಅಲ್ಲಿನ ವಾತಾವರಣವೇ ಒಳ್ಳೆಯದನ್ನಾಗಿ ರೂಪಗೊಳ್ಳಲು ಸಾಧ್ಯವಿದೆ.ಢವಳಗಿಯ ಜನ ಹೃದಯವಂತರು ಎಂದು ತಮ್ಮ ಸೇವಾ ಅನುಭವವನ್ನು ಹಂಚಿಕೊAಡರು.
ಢವಳಗಿ ಗದ್ದುಗೆ ಮಠದ ಮಡಿವಾಳೇಶ್ವರ ಸ್ವಾಮೀಜಿ ಮಾತನಾಡಿ, ಅತ್ಯಂತ ಕಷ್ಟ ಕಾಲದಲ್ಲಿ ಢವಳಗಿ ಸ್ವತಂತ್ರö್ಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ಜವಾಬ್ದಾರಿ ವಹಿಸಿಕೊಂಡ ಬಿರಾಜದಾರ ಅವರು ತಮ್ಮ ಅವಧಿಯಲ್ಲಿ ಕಾಲೇಜಿಗೆ ಉತ್ತಮ ಹೆಸರು ತರುವುದಕ್ಕೆ ಶ್ರಮಿಸಿದ್ದಾರೆ.ಸನಾತನ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯವರು ಕಾಲೇಜಿನ ಬೆಳವಣಿಗೆಗೆ ಆದ್ಯತೆ ನೀಡುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ನಿಡಗುಂದಿ ಗ್ರಾಮೀಣ ವಿದ್ಯಾವರ್ಧಕ ಸಂಘದ ನಿವೃತ್ತ ಪ್ರಾಚಾರ್ಯ ಎಸ್.ಎಸ್.ಹೊಸಮನಿ,ಬಸರಕೋಡ ಪವಾಡ ಬಸವೇಶ್ವರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆ.ವಾಯ್.ಬಿರಾದಾರ,ಪ್ರಗತಿಪರ ರೈತ ವೆಂಕಪ್ಪಗೌಡ ಕೊಣ್ಣೂರ,ಎಂ.ಬಿ.ಬಿ.ಎಸ್ ಅಧ್ಯಯನ ಮಾಡುತ್ತಿರುವ ಅಕ್ಷಯ ಬಿರಾಜದಾರ ಸೇರಿದಂತೆ ಹಲವರು ಬಿರಾಜದಾರ ಗುರುಗಳ ಸೇವೆಯ ಕುರಿತು ಮಾತನಾಡಿದರು.
ನಿವೃತ್ತ ಪ್ರಾಚಾರ್ಯ ಎಸ್.ಎನ್.ಬಿರಾದಾರ,ಸರಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಎಸ್.ಎಸ್.ಅಂಗಡಿ, ಬಸರಕೋಡ ಕಾಲೇಜಿನ ಪ್ರಾಚಾರ್ಯ ಎಸ್.ಎಂ.ಕಮತರ, ಎಸ್.ವಿ.ವಿ.ಎಸ್ ಸಂಘದ ಮಾಜಿ ಕಾರ್ಯದರ್ಶಿ ಬಾಪುಗೌಡ ಪೀರಾಪೂರ, ಗಣ್ಯರಾದ ಬಸವಂತರಾಯ ಬಿರಾದಾರ,ಎಂ.ಜಿ.ಬಿರಾದಾರ,ಆಕ್ಸಫರ್ಡ್ ಪಾಟೀಲ್ ಸಮೂಹ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವಿಜಯಕುಮಾರ ಪಾಟೀಲ ಮೊದಲಾದವರು ಇದ್ದರು.ಮಲ್ಲನಗೌಡ ಕಡಕಲ್ಲ ನಿರೂಪಿಸಿದರು.ವಿ.ಕೆ.ಮಾಲಗತ್ತಿ ಸ್ವಾಗತಿಸಿದರು.







