ಬೆಂಗಳೂರು: ಮುಂದಿನ ಮೂರು ದಿನಗಳ ಕಾಲ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ (Rain report) ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆಯ ವರದಿ ಉಲ್ಲೇಖಿಸಿದೆ
ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ ಕೋಲಾರ,ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರದಲ್ಲಿ ಸಾಧಾರಣ ಮಳೆಯಾಗಲಿದೆ (Rain report) ಎಂದು ತಿಳಿಸಿದೆ.
ವಾಯುಭಾರ ಕುಸಿತದಿಂದ ಕೆಲ ದಿನಗಳಿಂದ ವರುಣನ ಆರ್ಭಟ ಶುರುವಾಗಿದೆ. ಉಡುಪಿ, ಕಾರ್ಕಳ, ಶಾಹಪುರ, ಕಮ್ಮರಡಿ, ಕೊಪ್ಪ, ಎನ್‌ಆರ್ ಪುರ, ಗೋಕರ್ಣ, ಹೊನ್ನಾವರ, ಧಾರವಾಡ, ಕುಂದಗೋಳ, ಕುರ್ಡಿ, ಕೂಡಲಸಂಗಮ, ಹುಬ್ಬಳ್ಳಿ, ಮಾನ್ವಿ, ಕೂಡಲಸಂಗಮ, ಜಯಪುರ, ಕೊಟ್ಟಿಗೆಹಾರ, ಕಳಸದಲ್ಲಿ ಮಳೆಯಾಗಿದೆ.
ಇದನ್ನೂ ಓದಿ: ಸಿಎಂಗೆ ಪತ್ರ ಬರೆದು ಕ್ಷಮೆ ಕೋರಿದ BJP MLA..! ಮೆಚ್ಚು ವ್ಯಕ್ತಪಡಿಸಿದ CM Siddaramaiah..!
ಕ್ಯಾಸಲ್‌ರಾಕ್, ಬೀದರ್, ಭಾಲ್ಕಿ ಆಗುಂಬೆ, ಗಟ್ಟೂರು, ರಾಯಚೂರು, ಶೋರಾಪುರ, ಗೇರುಸೊಪ್ಪ ಲೋಂಡಾ, ಮುನ್ನಳ್ಳಿ, ಸಿದ್ದಾಪುರ, ಧರ್ಮಸ್ಥಳ, ಕಲಘಟಗಿ, ಕವಡಿಮಟ್ಟಿ, ದೇವದುರ್ಗ, ದೇವರಹಿಪ್ಪರಗಿ, ಔರಾದ್, ಸಿಂಧನೂರು, ಶೃಂಗೇರಿ, ಮಂಕಿ, ಕದ್ರಾ, ಬೆಳ್ತಂಗಡಿ, ಹಳಿಯಾಳದಲ್ಲಿ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ಹೇಳಿದೆ.