Salumada Thimmakka National Greenery Award won by Kuvara of Ededore.

ಎಡೆದೊರೆ ನಾಡಿನ ಕುವರನಿಗೆ ಒಲಿದು ಬಂದ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್

ಎಡೆದೊರೆ ನಾಡಿನ ಕುವರನಿಗೆ ಒಲಿದು ಬಂದ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್

ರಾಯಚೂರು: ದುರ್ಗದ ಸಿರಿ ದಶರಥ ಸಾವೂರ್‌ಗೆ ರಾಷ್ಟ್ರೀಯ ಗ್ರೀನರಿ ಅವಾರ್ಡ್ ಹಳ್ಳಿಯಿಂದ ಬಂದು ಟಿವಿ-5 ಅಸೋಸಿಯೆಟ್ ಎಡಿಟರ್ ಆದ ಸಾಧಕನಿಗೆ ಪುರಸ್ಕಾರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದ ತಾಲೂಕು ದೇವದುರ್ಗದ ಪ್ರತಿಭೆ ದಶರಥ ಸಾವೂರ್‌ಗೆ ರಾಷ್ಟ್ರ ಮಟ್ಟದ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್ ಒಲಿದು ಬಂದಿದೆ.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada

ರಾಜ್ಯದ ವಿವಿಧ ವಿಭಾಗದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಗ್ರೀನರಿ ಅವಾರ್ಡ್ ನೀಡಲಾಗುತ್ತಿದೆ. ಪ್ರತಿಷ್ಠಿತ ಪ್ರಶಸ್ತಿ ರಾಯಚೂರು ಜಿಲ್ಲೆಯ ದೇವದುರ್ಗಕ್ಕೆ ಒಲಿದು ಬಂದಿದ್ದು ಸಾಧಕನ ಸಾಧನೆಗೆ ಕನ್ನಡಿ ಹಿಡಿದಂತಾಗಿದೆ.

ದೇವದುರ್ಗ ತಾಲೂಕಿನ ಪುಟ್ಟ ಗ್ರಾಮ ಯರಮಸಾಳದಲ್ಲಿ ಬೆಳೆದ ದಶರಥ ಸಾವೂರ್ ಹಳ್ಳಿಯಲ್ಲಿ ಕಲಿತು ಇಂದು ಪ್ರತಿಷ್ಠಿತ ಟಿವಿ-5 ಚಾನೆಲ್‌ನ ಅಸೋಸಿಯೆಟ್ ಎಡಿಟರ್ ఆగి ಕಾರ್ಯನಿರ್ವಹಿಸುತ್ತಿದ್ದಾರೆ.

‘ದಶರಥ ಸಾವೂರ್’ 2010 ರಲ್ಲಿ ಸಮಯ ಟಿವಿ ಮೂಲಕ ಮಾಧ್ಯಮ ರಂಗಕ್ಕೆ ಧುಮುಕಿದ್ದರು. ಅಂದಿನಿಂದ ಹಿಂದುರುಗಿಯೇ ನೋಡಿಲಿಲ್ಲಾ.

ಸಮಯ ಟಿವಿ ರಾಯಚೂರು ವರದಿಗಾರನಾಗಿ ನಂತರ ಜಿಲ್ಲಾ ಬಾಗಲಕೋಟೆ ಹಾಗೂ ಹಾಸನ ಜಿಲ್ಲೆಯ ಟಿವಿ-9 ಜಿಲ್ಲಾ ವರದಿಗಾರ ರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ನಂತರ ರಾಜ್ಯದ ನಂಬರ್ 1 ವಿಜಯವಾಣಿಯ ಪತ್ರಿಕೆ ರಾಜಕೀಯ ವಿಶ್ಲೇಷಕರಾಗಿ ನ್ಯೂಜ್ 18 ಚಾನೆಲ್ ವರದಿಗಾರರಾಗಿ, ಬಳಿಕ ಟಿವಿ 5 ನಿರೂಪಕರಾಗಿ ಸದ್ಯ ಟಿವಿ-5 ಅಸೋಸಿಯೆಟ್ ಎಡಿಟರ್‌ ಆಗಿ ಸೇವೆ ಸಲ್ಲಿಸಿದ್ದಾರೆ. ಮಾಧ್ಯಮ ರಂಗದಲ್ಲಿ ಸುಮಾರು ಸೇವೆ ಸಲ್ಲಿಸುತ್ತಿದ್ದಾರೆ.

ಇವರ ಸಾಧನೆಗೆ 14 ವರ್ಷಗಳಿಂದ ಸಾಧನೆಯ ಹಾದಿ 2010 ರಲ್ಲಿ ಸಮಯ ಟಿವಿಯಲ್ಲಿ ಇನ್ಸುಟ್‌ನಲ್ಲಿ ಕಾರ್ಯಾರಂಭ, ಸಮಯ ಟಿವಿಯ ರಾಯಚೂರು ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿ, ಅಲ್ಲಿಂದ ಹೈದರಾಬಾದನ ವರದಿಗಾರನಾಗಿ ಮುಂದುವರಿಕೆ.

2012 ರಲ್ಲಿ ಟಿವಿ9 ಹುಬ್ಬಳ್ಳಿ ವರದಿಗಾರರಾಗಿ, ನಂತರದಲ್ಲಿ ಬಾಗಲಕೋಟೆ ಜಿಲ್ಲೆಯ ಟಿವಿ9 ವರದಿಗಾರರಾಗಿ ಸೇವೆ. 2014 ರಲ್ಲಿ ಹಾಸನ ಜಿಲ್ಲೆಯ ಟಿವಿ9 ವರದಿಗಾರರಾಗಿ ಪ್ರಖ್ಯಾತಿ ಪಡೆದಿದ್ದಾರೆ. ಹಾಸನದಲ್ಲಿ ವರದಿಗಾರರಾಗಿದ್ದ ವೇಳೆ ಇಡೀ ರಾಜ್ಯವೇ ತಿರುಗಿ ನೋಡುವಂತೆ ಮಾಡಿದ್ದು ಇವರ ವರದಿಗಾರಿಕೆ.

ಅರಸೀಕೆರೆ ತಾಲೂಕು ಕಾವಲುಗಾರರ ಗೊಲ್ಲರ ಹಟ್ಟಿಗಳು, ಮೌಡ್ಯ ಆಚರಣೆ
ಮಾಡುತ್ತಿದ್ದ ಬಗ್ಗೆ ಟಿವಿ9 ವಾಹಿನಿಯಲ್ಲಿ “ಹೆಣ್ಣಾಗಿದ್ದೇ ತಪ್ಪಾ” ಎಂಬ ಶೀರ್ಷಿಕೆ ಅಡಿಯಲ್ಲಿ ರಾಜ್ಯ ಸರ್ಕಾರದ ಕಣ್ಣು ತೆರೆಸಿದ್ದು ಮಾತ್ರವಲ್ಲ ಮೌಡ್ಯಗಳಿಂದ ಇದ್ದ ಗೊಲ್ಲರಹಟ್ಟಿಗಳಲ್ಲಿ ಜಾಗೃತಿ ಮೂಡಿಸಿ 43 ಗೊಲ್ಲರಹಟ್ಟಿಗಳನ್ನು ಬದಲಿಸಿದ ಮಹತ್ಕಾರ್ಯ ಮಾಡಿದ್ದಾರೆ.

ನಂತರ, ಟಿವಿ ಕನ್ನಡ ವಾಹಿನಿಯಲ್ಲಿ ಹಿರಿಯ ರಾಜಕೀಯ ವರದಿಗಾರರಾಗಿ ರಾಜಕೀಯದ ಒಳ ಹೊರಗೂ ವಿಶ್ಲೇಷಣೆಯ ವರದಿ ಮಾಡಿದ ಕೀರ್ತಿ ಇವರದ್ದು. ನ್ಯೂಸ್ 18 ಕನ್ನಡ ವಾಹಿನಿಯಲ್ಲಿ ಹಿರಿಯ ರಾಜಕೀಯ ವರದಿಗಾರರಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆ. ಟಿವಿ ವಾಹಿನಿಯಲ್ಲಿ ನ್ಯೂಸ್ ಆ್ಯಂಕರ್ ಆಗಿ ‘ಆರ್ ವಿ ಸ್ಪೂಪಿಡ್?’ ಎಂಬ ಜನಪ್ರಿಯ ಕಾರ್ಯಕ್ರಮದ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ.

ಹತ್ತು ಹಲವು ರಾಜ್ಯ ಮಟ್ಟದ ಪ್ರಶಸ್ತಿಗಳು ಒಲಿದು ಬಂದಿವೆ.

2023ರಲ್ಲಿ ದಾವಣಗೇರಾ ದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದಿಂದ ಆಯೋಜಿಸಿದ್ದ 38ನೇ ಪತ್ರಕರ್ತರ ಸಮ್ಮೇಳನದಲ್ಲಿ ರಾಜ್ಯ
ಮಟ್ಟದ ಪ್ರಶಸ್ತಿ ಮುಡುಗೇರಿತ್ತು.

ಇದನ್ನೂ ಓದಿ: Muddebihal: ಬಡವರ ಶೆಡ್ ತೆರವು, ಜಿಪಿಎಸ್‌ಗೆ ಪಿಡಿಒಯಿಂದ ಹಣಕ್ಕೆ ಬೇಡಿಕೆ- ಆರೋಪ

ಮಾಧ್ಯಮ ರಂಗದ ಗುರುತರ ಸೇವೆ ಗುರುತಿಸಿ ಈಗ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್ ಒಲಿದು ಬಂದಿದ್ದು ರಾಯಚೂರು ಜಿಲ್ಲೆಗೆ ಮತ್ತಷ್ಟು ಹಿರಿಮೆ ಹೆಚ್ಚಿದಂತಾಗಿದೆ.

Latest News

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

ಧಾರವಾಡ ಜುಲೈ.1: ರಾಜಕೀಯ ಬಿಟ್ಟು, ಸರಿಯಾಗಿ ಕೆಲಸ ಮಾಡಬೇಕು ಅಂದಾಗ ಶಾಲೆಗಳು ಉತ್ತಮ ಫಲಿತಾಂಶ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ

ಧಾರವಾಡ, ಜುಲೈ 1: ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಹಲವಾರು ಯೋಜನೆ,

ಆರ್.ಎಂ.ಎಸ್.ಎ ಶಾಲೆಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

ಆರ್.ಎಂ.ಎಸ್.ಎ ಶಾಲೆಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

ಮುದ್ದೇಬಿಹಾಳ : ತಾಲ್ಲೂಕಿನ ಬಿದರಕುಂದಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯ (ಆರ್.ಎಂ.ಎಸ್.ಎ) ಶಾಲೆಯ ಸನ್

ಜೆಡಿಎಸ್ ಪಕ್ಷದಿಂದ ಬೃಹತ್ ಪ್ರತಿಭಟನೆ : ಕಾಂಗ್ರೆಸ್ ಸರ್ಕಾರ ವಜಾಗೊಳಿಸಲು ರಾಜ್ಯಪಾಲರಿಗೆ ಮನವಿ

ಜೆಡಿಎಸ್ ಪಕ್ಷದಿಂದ ಬೃಹತ್ ಪ್ರತಿಭಟನೆ : ಕಾಂಗ್ರೆಸ್ ಸರ್ಕಾರ ವಜಾಗೊಳಿಸಲು ರಾಜ್ಯಪಾಲರಿಗೆ ಮನವಿ

ಮುದ್ದೇಬಿಹಾಳ : ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು ಕೂಡಲೇ ಸರ್ಕಾರವನ್ನು ರಾಜ್ಯಪಾಲರು ವಜಾಗೊಳಿಸಬೇಕೆಂದು ಆಗ್ರಹಿಸಿ

ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಆಯ್ಕೆ:ಪಿಂಜಾರ್ ಅಧ್ಯಕ್ಷ, ಕೊಣ್ಣೂರು ಉಪಾಧ್ಯಕ್ಷ

ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಆಯ್ಕೆ:ಪಿಂಜಾರ್ ಅಧ್ಯಕ್ಷ, ಕೊಣ್ಣೂರು ಉಪಾಧ್ಯಕ್ಷ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಎಂ.ಡಿ.ಮಾಗಿ(ಗೌರವ ಅಧ್ಯಕ್ಷ), ಎನ್.ಬಿ. ಪಿಂಜಾರ (ಅಧ್ಯಕ್ಷ), ಬಸವರಾಜ ಎಂ ಕಡಿ (ಪ್ರಧಾನ ಕಾರ್ಯದರ್ಶಿ),ಎಚ್. ಎಂ. ಕೊಣ್ಣೂರು (ಉಪಾಧ್ಯಕ್ಷ),ಬಸಯ್ಯ ಹಿರೇಮಠ (ರಾಜ್ಯ ಪರಿಷತ್ ಸದಸ್ಯ), ಎಲ್. ಎಸ್. ಸುಧಾಕರ(ಖಜಾಂಚಿ), ಆರ್. ಜಿ. ಗುಣಕಿ( ಸಹ ಕಾರ್ಯದರ್ಶಿ), ಬಿ. ಜಿ. ಬಿರಾದಾರ (ಸಂಘಟನಾ ಕಾರ್ಯದರ್ಶಿ), ದಯಾನಂದ ಪಾಟೀಲ, ಶಿವಾನಂದ ಮುತ್ತಗಿ, ಸಂಗಣ್ಣ ಹೂಗಾರ,

ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ

ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶ್ವಾಸಯೋಗ ಸಂಸ್ಥೆ ಹಾಗೂ ಸಂತೋಷ್ ಲಾಡ್ ಫೌಂಡೇಶನ್ ಸಹಯೋಗದಲ್ಲಿ ಇದೇ 29 ನೇ ಭಾನುವಾರ ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಅರಮನೆ ಮೈದಾನದ ದಿ ಗ್ರಾಂಡ್‌ ಕ್ಯಾಸಲ್‌, ಗೇಟ್‌ ಸಂಖ್ಯೆ 6 ರಲ್ಲಿ ಸಂಜೆ 5 ರಿಂದ ಈ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಯೋಗದಲ್ಲಿ ಉತ್ಕೃಷ್ಟ ಸಾಧನೆ ಮಾಡಿದ ವಿಶ್ವದ ಐವರು ಶ್ರೇಷ್ಠ ಯೋಗ ಸಾಧಕರಿಗೆ ಪ್ರಶಸ್ತಿ