ಮುದ್ದೇಬಿಹಾಳ : ತಾಲ್ಲೂಕಿನ ಗ್ರಾಹಕರ ಆಶಯದಂತೆ ನಾವು ಕರ್ತವ್ಯ ನಿರ್ವಹಿಸಿದ್ದೇವೆ ಎಂಬ ತೃಪ್ತಿಯಿದೆ.ಊರಿನ ಹಿರಿಯರು ಸೇರಿ ಕೈಗೊಳ್ಳುವ ತೀರ್ಮಾನದಂತೆ ನಾವು ಚುನಾವಣೆಗೆ ಸ್ಪರ್ಧೆ ಮಾಡುತ್ತೇವೆ.ಹಿರಿಯರು ಬ್ಯಾಂಕಿಗೆ ಎಂತಹ ಸದಸ್ಯರು ಬೇಕು ಎಂದು ನಿರ್ಣಯಿಸಿ ಮಾಡುವ ಪೆನಲ್ ಆಯ್ಕೆಗೆ ನಾವು ಶ್ರಮಿಸುತ್ತೇವೆ ಎಂದು ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸತೀಶಕುಮಾರ ಓಸ್ವಾಲ ಹೇಳಿದರು.
ಪಟ್ಟಣದ ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಬ್ಯಾಂಕ್‌ನ್ನು ಕಟ್ಟಿ ಬೆಳೆಸುವಲ್ಲಿ ಹಲವು ಹಿರಿಯರ ಪರಿಶ್ರಮವಿದೆ.ಈ ಊರಿನ ವ್ಯಾಪಾರಸ್ಥರಿಗೆ, ಗ್ರಾಹಕರಿಗೆ, ಅನುಕೂಲವಾಗುವ ಸೇವೆಯನ್ನು ಬ್ಯಾಂಕಿನಿAದ ನೀಡಿದ್ದೇವೆ ಎಂಬ ತೃಪ್ತಿಯಿದೆ.ಎ.ಟಿ.ಎಂ ಸ್ಥಾಪನೆ ಕೆಲಸ ಪೂರ್ಣಗೊಳಿಸುವ ಪ್ರಕ್ರಿಯೆ ಬಾಕಿ ಉಳಿಯಿತು. ಜನರ ಪ್ರೀತಿ, ವಿಶ್ವಾಸ ನಂಬಿಕೆಯಿAದ ಬ್ಯಾಂಕ್‌ನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದೇವೆ ಎಂದು ಹೇಳಿದರು.
ಈ ಸಲದ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸುವೀರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಊರಿನ ಹಿರಿಯರು, ಬ್ಯಾಂಕಿನ ಹಿತೈಷಿಗಳು ರಚಿಸುವ ಪೆನಲ್‌ನಲ್ಲಿ ಅವಕಾಶ ಕಲ್ಪಿಸುವವರಿಗೆ ನಮ್ಮ ಸ್ಪರ್ಧೆಯ ನಿರ್ಧಾರ ಇದೆ ಎಂದು ಹೇಳಿದರು.
ನಿರ್ದೇಶಕರಾದ ವೆಂಕನಗೌಡ ಪಾಟೀಲ್, ಶಶಿಕಾಂತ ಮಾಲಗತ್ತಿ ಮಾತನಾಡಿ,
ಕರ್ನಾಟಕ ಬ್ಯಾಂಕ್‌ನ್ನು ಕಟ್ಟಿ ಬೆಳೆಸಿದ ಹಿರಿಯರ ನಂಬಿಕೆಗೆ ಪಾತ್ರವಾಗುವಂತೆ ಆಡಳಿತ ನಡೆಸಿದ್ದೇವೆ.ನಮ್ಮ ಅವಧಿಯಲ್ಲಿ ಹೂವಿನ ಹಿಪ್ಪರಗಿಯಲ್ಲಿ ಹೊಸ ಶಾಖೆ, ಮುದ್ದೇಬಿಹಾಳದಲ್ಲಿ ಜನರಿಗೆ ಉಪಯುಕ್ತವಾಗುವಂತಹ ಸಭಾಭವನ ನಿರ್ಮಾಣಕ್ಕೆ ಶ್ರಮಿಸಿದ್ದೇವೆ ಎಂದರು.
ಸಭೆಯಲ್ಲಿ ನಿರ್ದೇಶಕರಾದ ನಾಗಭೂಷಣ ನಾವದಗಿ, ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿದರಕುಂದಿ, ಗುರುಲಿಂಗಪ್ಪಗೌಡ ಪಾಟೀಲ್ ಮಾತನಾಡಿದರು. ಬ್ಯಾಂಕಿನ ಉಪಾಧ್ಯಕ್ಷ ಸಿ.ಎಲ್.ಬಿರಾದಾರ, ನಿರ್ದೇಶಕರಾದ ರವಿ ಕಮತ, ರಾಜಶೇಖರ ಕರಡ್ಡಿ, ಪ್ರಭುರಾಜ ಕಲ್ಬುರ್ಗಿ, ಸುನೀಲ ಇಲ್ಲೂರ, ಮುತ್ತಣ್ಣ ಕಡಿ ಮೊದಲಾದವರು ಇದ್ದರು.
ಇದೇ ವೇಳೆ ಮಾಜಿ ಸಿಎಂ ಎಸ್.ಎಂ.ಕೃಷ್ಣಾ ಅವರ ನಿಧನಕ್ಕೆ ಬ್ಯಾಂಕಿನ ಪರವಾಗಿ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.