ಕುಳಗೇರಿ ಕ್ರಾಸ್: ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೋಮನಕೊಪ್ಪದಲ್ಲಿ ಸನ್ 2025-26ನೇ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 1 ನೇ ತರಗತಿಗೆ ದಾಖಲಾಗುವ ಪ್ರತಿ ವಿದ್ಯಾರ್ಥಿಗಳಿಗೂ ಮುಖ್ಯಗುರುಮಾತೆಯವರಾದ ಶ್ರೀಮತಿ ಜಿ. ಆರ್. ಕಣ್ಣಿರವರು ವೈಯಕ್ತಿಕವಾಗಿ 1000ರೂ ಗಳ ಎಫ್.ಡಿ ಯನ್ನು ಬ್ಯಾಂಕಿನಲ್ಲಿ ಇಡಲಾಗುವುದು ಎಂದು ತಿಳಸಿದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸರಕಾರದಿಂದ ಪೂರೈಕೆಯಾದಂತಹ ಉಚಿತ ಪಠ್ಯಪುಸ್ತಕಗಳನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ. ಸುರೇಶ ಹಲಗಲಿ, ಪಿ.ಕೆ.ಪಿ.ಎಸ್ ನಿರ್ದೇಶಕರಾದ ಶ್ರೀ ಶಿವಾನಂದ ಚೊಳನ್ನವರ, ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಶ್ರೀಮತಿ ಶ್ರೀದೇವಿ ಬಿಡಗೇರ, ಮುಖ್ಯಗುರುಮಾತೆಯವರಾದ ಶ್ರೀಮತಿ ಜಿ.ಆರ್.ಕಣ್ಣಿ, ಎಚ್.ಎಂ.ಯತ್ನಟ್ಟಿ, ಶಕುಂತಲಾ ಟಿ.ಎಂ, ಶ್ರೀಮತಿ ಆರ್ ಎ ನದಾಫ್, ಎನ್.ಕೆ ದೊಡಮನಿ, ಕುಮಾರಿ ಆರ್.ಜಿ ನದಾಫ್, ಶೋಭಾ ಹೊಸಕೋಟಿ ಶಿಕ್ಷಕರು, ಎಸ್.ಡಿ.ಎಂ.ಸಿ ಸದಸ್ಯರು ಮತ್ತು ಗ್ರಾಮದ ಹಿರಿಯರು ಉಪಸ್ಥಿತರಿದ್ದರು.