ಮುದ್ದೇಬಿಹಾಳ : ಕಾರ್ಗಿಲ್ ವೀರಯೋಧ ಸ್ಮಾರಕ ಸಮಿತಿಯ ನೂತನ ಪದಾಧಿಕಾರಿಗಳನ್ನು ಸೋಮವಾರ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರನ್ನಾಗಿ ಚಂದ್ರಶೇಖರ ಕಲಾಲ, ಅಧ್ಯಕ್ಷರನ್ನಾಗಿ ಶ್ರೀಕಾಂತ ಹಿರೇಮಠ, ಉಪಾಧ್ಯಕ್ಷರನ್ನಾಗಿ ಶೇಖರ ಢವಳಗಿ, ಪ್ರಧಾನ ಕಾರ್ಯದರ್ಶಿಯನ್ನಾಗಿ ರಾಜಶೇಖರ ಮ್ಯಾಗೇರಿ, ಖಜಾಂಚಿಯನ್ನಾಗಿ ಉದಯ ರಾಯಚೂರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ಸಮಯದಲ್ಲಿ ಸದಸ್ಯರಾದ ರಾಜು ಬಳ್ಳೊಳ್ಳಿ, ಮಹಾಂತೇಶ ಬೂದಿಹಾಳಮಠ, ರವೀಂದ್ರ ಬಿರಾದಾರ, ರಾಜಶೇಖರ ಹೊಳಿ, ಸೋಮನಗೌಡ ಬಿರಾದಾರ, ಕಾಶಿನಾಥ ಹುಗ್ಗಿ, ಪುನೀತ ಹಿಪ್ಪರಗಿ, ಸಂಜು ಬಾಗೇವಾಡಿ, ನಬಿಸಾಬ ಕಂಬಾರ, ಮಂಜುನಾಥ ಹಿರೇಮಠ, ಸಂತೋಷ ಬಾದರಬಂಡಿ, ವಕೀಲ ರವಿ ನಾಲತವಾಡ, ಹಣಮಂತ ನಲವಡೆ ಮೊದಲಾದವರು ಇದ್ದರು.