HDK vs Siddaramaiah: Union Minister HD Kumaraswamy arrested?

Siddaramaiah: ಸಿಎಂ ಬದಲಾವಣೆ.. ಸ್ಫೋಟಕ ಬಾಂಬ್ ಸಿಡಿಸಿದ ಸಿದ್ದು

Siddaramaiah: ಸಿಎಂ ಬದಲಾವಣೆ.. ಸ್ಫೋಟಕ ಬಾಂಬ್ ಸಿಡಿಸಿದ ಸಿದ್ದು

ಕೊಪ್ಪಳ: ರಾಜ್ಯದ ರಾಜಕಾರಣದಲ್ಲಿ ನವೆಂಬರರ್‌ನಲ್ಲಿ (November) ಕ್ರಾಂತಿ ನಡೆಯುತ್ತದೆ. ಆಗ ಸಿಎಂ ಸಿದ್ದರಾಮಯ್ಯ (Siddaramaiah) (Chief Minister) ಸ್ಥಾನದಿಂದ ಕೆಳಗೆ ಇಳಿಯುತ್ತಾರೆ ಎಂದು ವದಂತಿಗಳು ಜೋರಾಗಿರುವಾಗಲೇ ಸಿದ್ದರಾಮಯ್ಯ ಅವರು ಭಾರೀ ಸಂಚಲನ ಸೃಷ್ಟಿಸುವ ಹೇಳಿಕೆ ನೀಡಿದ್ದಾರೆ‌‌.

ಕೊಪ್ಪಳ ತಾಲೂಕಿನ ಬಸಾಪುರದಲ್ಲಿ ಅ.6ರಂದು ಸುದ್ದಿಗಾರರ ಜೊತೆಗೆ ಮಾತನಾಡುತ್ತಾ ಅವರು, ನವೆಂಬ‌ರ್ ಕ್ರಾಂತಿ ಉಹಾಪೋಹಗಳಿಗೆ ಬ್ರೇಕ್ ಹಾಕಿದರು. ರಾಜ್ಯದ ರಾಜಕಾರಣದಲ್ಲಿ ನವೆಂಬರ್‌ನಲ್ಲಿ ಯಾವ ಕ್ರಾಂತಿಯೂ ಇಲ್ಲ ಭ್ರಾಂತಿಯೂ ಇಲ್ಲ ಎಂದು ಹೇಳುವ ಮೂಲಕ ತಮ್ಮ ವಿರೋಧಿ ಬಣಕ್ಕೆ ಟಾಂಗ್ ಕೊಟ್ಟರು.

ಇನ್ನು ಇದೇ ವೇಳೆ ಜಿಲ್ಲಾ ಕೇಂದ್ರದ ಸಮೀಪದಲ್ಲಿ ಬಲ್ನೋಟಾ ಕಂಪನಿ ಕಾರ್ಖಾನೆ ವಿಸ್ತರಣೆ ಮಾಡುವ ಕುರಿತ ಪ್ರಶ್ನೆಗೆ ಉತ್ತರಿಸಿ, ಕಾರ್ಖಾನೆಗಾಗಿ ಜಮೀನು ಕಳೆದುಕೊಂಡವರಿಗೆ ಇನ್ನಷ್ಟು ಪರಿಹಾರ ಕೊಡಬೇಕು ಎನ್ನುವ ಬೇಡಿಕೆಯಿದೆ. ಈ ಪ್ರಕರಣ ನ್ಯಾಯಾಲಯದಲ್ಲಿದೆ ಎಂದರು.

ಈಗಾಗಲೇ 1.10 ಕೋಟಿ ಕುಟುಂಬಗಳ ಸಮೀಕ್ಷಾ ಕಾರ್ಯ ಮುಗಿದಿದ್ದನಿನ್ನೆವರೆಗೆ ಶೇ.63 ರಷ್ಟು ಸರ್ವೇ ಕಾರ್ಯ ಪ್ರಗತಿಯಾಗಿದೆ. ನಾಳೆ ಸಂಜೆವರೆಗೆ ಸಮೀಕ್ಷೆಯ ಪ್ರಗತಿಯನ್ನು ಪರಿಶೀಲಿಸಿ, ಸಮೀಕ್ಷೆ ಅವಧಿ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಕೊಪ್ಪಳ ಜಿಲ್ಲೆಯಲ್ಲಿ ಶೇ.97 ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಸಮಾಜದಲ್ಲಿ ಬದಲಾವಣೆಯನ್ನು ವಿರೋಧಿಸುವವರು ಸಮೀಕ್ಷೆಯ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಕೊಪ್ಪಳದಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ, ಕಡಿಮೆ ಅಂತರದಲ್ಲಿ ಸೋತಿದ್ದರೂ, ಕೊಪ್ಪಳದ ಜನ ತನ್ನನ್ನು ಆಶೀರ್ವದಿಸಿದ್ದರು ಎಂದು ಸ್ಮರಿಸಿ ಜನತೆಗೆ ಧನ್ಯವಾದಗಳನ್ನು ತಿಳಿಸಿದರು.

ಇನ್ನು ಲಿಂಗಾಯತ ಧರ್ಮವನ್ನು ಪ್ರತ್ಯೇಕ ಧರ್ಮ ಎನ್ನುವ ಬಗ್ಗೆ ಮಾತನಾಡಿದ ಅವರು, ಜನರು ಸ್ವಯಂಪ್ರೇರಣೆಯಿಂದ ತಮ್ಮ ಧರ್ಮವನ್ನು ತಿಳಿಸಿದಂತೆ, ಸಮೀಕ್ಷಾಗಾರರು ಧರ್ಮವನ್ನು ನಮೂದಿಸಿಕೊಳ್ಳುತ್ತಾರೆ. ಈ ಬಗ್ಗೆ ಜನರ ನಿಲುವೇ ನನ್ನ ನಿಲುವು. ಇದರಲ್ಲಿ ಯಾವುದೇ ಎರಡು ಮಾತಿಲ್ಲ ಎಂದು ಸಿಎಂ ತಿಳಿಸಿದರು.

Latest News

ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ ಕಲರವ

ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ ಕಲರವ

ನಾಲತವಾಡ: ಸಮೀಪದ ಲೊಟಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತಿಯ ಕಾಂತಿ ಮಕ್ಕಳ ಮೂಲಕ

ಮಹಿಳೆಯರಿಗೆ ಋತುಚಕ್ರ ರಜೆ :ಸರ್ಕಾರದಿಂದ ಮಾನವೀಯ ಸಂವೇದನೆಯ ಆದೇಶ-ಸಂಗೀತಾ ನಾಡಗೌಡ

ಮಹಿಳೆಯರಿಗೆ ಋತುಚಕ್ರ ರಜೆ :ಸರ್ಕಾರದಿಂದ ಮಾನವೀಯ ಸಂವೇದನೆಯ ಆದೇಶ-ಸಂಗೀತಾ ನಾಡಗೌಡ

ಮುದ್ದೇಬಿಹಾಳ : ರಾಜ್ಯ ಸರ್ಕಾರ ಎರಡು ದಿನಗಳ ಹಿಂದಷ್ಟೇ ರಾಜ್ಯದ ಸರ್ಕಾರಿ,ಖಾಸಗಿ.ಗುತ್ತಿಗೆ,ಹೊರಗುತ್ತಿಗೆ ಕ್ಷೇತ್ರದಲ್ಲಿ ಸೇವೆ

ನ.16 ರಂದು ವಿಜಯಪುರದಲ್ಲಿ ಪದಗ್ರಹಣ  :       ಮುದ್ದೇಬಿಹಾಳ A.I.B.S.S ಸಂಘಕ್ಕೆ ಬಹಾದ್ದೂರ ರಾಠೋಡ ಪುನರಾಯ್ಕೆ

ನ.16 ರಂದು ವಿಜಯಪುರದಲ್ಲಿ ಪದಗ್ರಹಣ : ಮುದ್ದೇಬಿಹಾಳ A.I.B.S.S ಸಂಘಕ್ಕೆ ಬಹಾದ್ದೂರ ರಾಠೋಡ ಪುನರಾಯ್ಕೆ

ಮುದ್ದೇಬಿಹಾಳ : ಬಂಜಾರಾ ಸಮಾಜದ ಸಂಘಟನೆಯನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟಲು, ಸಮಾಜದ ಮಕ್ಕಳು ಶೈಕ್ಷಣಿಕ,ಔದ್ಯೋಗಿಕ

ಅಸ್ಕಿ ಫೌಂಡೇಶನ್‌ದಿಂದ 50 ಸಾವಿರ ರೂ.ನೆರವು: ಕೆಬಿಜೆಎನ್‌ಎಲ್‌ದಿಂದ ರಕ್ಷಣಾಗೋಡೆ ನಿರ್ಮಾಣಕ್ಕೆ ಸಿ.ಬಿ.ಅಸ್ಕಿ ಒತ್ತಾಯ

ಅಸ್ಕಿ ಫೌಂಡೇಶನ್‌ದಿಂದ 50 ಸಾವಿರ ರೂ.ನೆರವು: ಕೆಬಿಜೆಎನ್‌ಎಲ್‌ದಿಂದ ರಕ್ಷಣಾಗೋಡೆ ನಿರ್ಮಾಣಕ್ಕೆ ಸಿ.ಬಿ.ಅಸ್ಕಿ ಒತ್ತಾಯ

ಮುದ್ದೇಬಿಹಾಳ : ತಂಗಡಗಿ ಇಳಿಜಾರಿನಿಂದ ಶಿರೋಳ ಗ್ರಾಮದ ಬಳಿ ಹಾಯ್ದು ಹೋಗಿರುವ ಕೆಬಿಜೆಎನ್‌ಎಲ್‌ನ ಎಡದಂಡೆ

MUDDEBIHAL :  ಕಾಲುವೆಯಲ್ಲಿ ಜಾರಿ ಬಿದ್ದು ಮೂವರು ಕಣ್ಮರೆ : ಮುಂದುವರೆದ ಶೋಧ ಕಾರ್ಯ

MUDDEBIHAL : ಕಾಲುವೆಯಲ್ಲಿ ಜಾರಿ ಬಿದ್ದು ಮೂವರು ಕಣ್ಮರೆ : ಮುಂದುವರೆದ ಶೋಧ ಕಾರ್ಯ

ಮುದ್ದೇಬಿಹಾಳ ತಾಲ್ಲೂಕಿನ ಶಿರೋಳ ಗ್ರಾಮದ ಸಮೀಪದಲ್ಲಿ ಕಾಲುವೆಯಲ್ಲಿ ಕಾಲು ಜಾರಿ ಮೂವರು ಬಿದ್ದಿರುವ ಘಟನೆ ಮಂಗಳವಾರ ಮದ್ಯಾಹ್ನ ನಡೆದಿದೆ. ಈ ಘಟನೆ ಹಿನ್ನೆಲೆಯಲ್ಲಿ ಅಗ್ನಿಶಾಮಕ ಠಾಣೆ ಹಾಗೂ ಪೊಲೀಸ್ ಇಲಾಖೆಯಿಂದ ಶೋಧ ಕಾರ್ಯ ಮುಂದುವರೆದಿದೆ. ಮಹೆಬೂಬ ನಗರದ ಪಕ್ಕದಲ್ಲಿರುವ ಆಶ್ರಯ ಕಾಲನಿಯಲ್ಲಿ ವಾಸವಿದ್ದ ಸುಡಗಾಡ ಸಿದ್ಧ ಜನಾಂಗದ ಇಬ್ಬರು ಯುವಕರು, ಓರ್ವ ಯುವತಿ ಕಾಲುವೆಯಲ್ಲಿ ಮುಳುಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರಿಂದ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ. ಬಸಮ್ಮ ಚೆನ್ನಪ್ಪ ಕೊಣ್ಣೂರ(21),

ಐದು ದಿನಗಳ ಹೋರಾಟ ಅಂತ್ಯ :                                       ಟನ್ ಕಬ್ಬಿಗೆ 3264 – ಬಾಲಾಜಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ  ಅಧಿಕೃತ ಘೋಷಣೆ

ಐದು ದಿನಗಳ ಹೋರಾಟ ಅಂತ್ಯ : ಟನ್ ಕಬ್ಬಿಗೆ 3264 – ಬಾಲಾಜಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಅಧಿಕೃತ ಘೋಷಣೆ

ಮುದ್ದೇಬಿಹಾಳ : ಕಬ್ಬಿನ ರಿಕವರಿ ಆಧಾರದ ಮೇಲೆ ಟನ್ ಕಬ್ಬಿಗೆ 3264 ರೂ.ನೀಡುವುದಾಗಿ ತಾಲ್ಲೂಕಿನ ಯರಗಲ್ ಮದರಿ ಬಾಲಾಜಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಶನಿವಾರ ಅಧಿಕೃತ ಘೋಷಣೆ ಮಾಡಿದ್ದು ಕಳೆದ ಐದು ದಿನಗಳಿಂದ ತಾಲ್ಲೂಕಿನ ಅಮರಗೋಳ ಕ್ರಾಸ್ ಬಳಿ ನಡೆಯುತ್ತಿದ್ದ ರೈತರ ಹೋರಾಟ ಅಂತ್ಯಗೊAಡಿದೆ. ತಾಲ್ಲೂಕಿನ ಅಮರಗೋಳ ಕ್ರಾಸ್ ಬಳಿ ಕಬ್ಬಿನ ವಾಹನಗಳನ್ನು ತಡೆದು ನಿಲ್ಲಿಸಿ ಕರ್ನಾಟಕ ರೈತ ಸಂಘ ಹಾಗೂ ರೈತಪರ ಸಂಘಟನೆಯ ಮುಖಂಡರು ಹೋರಾಟ ಆರಂಭಿಸಿದ್ದರು.ಇಲ್ಲಿನ