ಮುದ್ದೇಬಿಹಾಳ : ಏಕಲವ್ಯ ರೋಲರ್ ಸ್ಕಟಿಂಗ್ ಅಕಾಡೆಮಿಯ ಮಕ್ಕಳು ಇಂದು ಧಾರವಾಡದಲ್ಲಿ ರಾಜ್ಯ ಮಟ್ಟದ ಸ್ಕೇಟಿಂಗ್ ಕಾಂಪಿಟೇಶನ್ ನಲ್ಲಿ ವಿದ್ಯಾರ್ಥಿಗಳು 2 ಬಂಗಾರ 3 ಬೆಳ್ಳಿ 5 ಕಂಚಿನ ಪದಕ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಧಾರವಾಡದ ಆರ್.ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ಅ.26,27 ಎರಡು ದಿನಗಳ ಕಾಲ ಜರುಗಿದ ರಾಜ್ಯ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಮುದ್ದೇಬಿಹಾಳ ಪಟ್ಟಣದ ಏಕಲವ್ಯ ರೋಲರ್ ಸ್ಕೇಟಿಂಗ್ ಅಕಾಡೆಮಿಯ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದ್ದಾರೆ.
ಇದರಲ್ಲಿ ಕೃತಿಕಾ ತುಪ್ಪದ 500 ಹಾಗೂ 1000 ಮೀ. ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ ಪಡೆದಿದ್ದರೆ ಬಾಲಕರಿಗಾಗಿ ನಡೆದ ಇದೇ ಸ್ಪರ್ಧೆಯಲ್ಲಿ ವಿಕ್ರಾಂತ ಶಾರದಳ್ಳಿ ಎರಡು ಬೆಳ್ಳಿ ಪದಕ ಪಡೆದಿದ್ದಾರೆ.ಅದಿತಿ ನಾಗೂರ ಬೆಳ್ಳಿ, ಶಕುಂತಲಾ ಶಾರದಳ್ಳಿ, ಸಾತ್ವಿ ನಾಗೂರ ಕಂಚಿನ ಪದಕ ಪಡೆದಿದ್ದಾರೆ.
ಬಂಗಾರ ಮತ್ತು ಬೆಳ್ಳಿ ಪದಕ ಪಡೆದ ವಿದ್ಯಾರ್ಥಿಗಳು ಮುಂಬರುವ ದಿನಗಳಲ್ಲಿ ದೆಹಲಿಯಲ್ಲಿ ಜರುಗುವ ರಾಷ್ಟ್ರಮಟ್ಟದ ಸ್ಕೆಟಿಂಗ್ ಟೂರ್ನಿಯಲ್ಲಿ ಕ್ರೀಡಾ ಪಟುಗಳು ಭಾಗವಹಿಸುತ್ತಾರೆ ಎಂದು ಏಕಲವ್ಯ ರೋಲರ್ ಸ್ಕೇಟಿಂಗ್ ಅಕಾಡೆಮಿಯ ಮುದ್ದೇಬಿಹಾಳ ಶಾಖೆಯ ತರಬೇತಿದಾರ ಶಿವಕುಮಾರ ಎಂ. ಶಾರದಳ್ಳಿ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಪಾಲಕರಾದ ಬಸವರಾಜ ನಾಗೂರ, ಶ್ವೇತಾ ನಾಗೂರ, ಉಮಾ ಶಾರದಳ್ಳಿ ಇದ್ದರು.