ಮುದ್ದೇಬಿಹಾಳ : ಧರ್ಮಸ್ಥಳ ಸಂಸ್ಥೆಯ ಸಮಾಜಮುಖಿ ಕಾರ್ಯಗಳು ಶ್ಲಾಘನೀಯವಾಗಿದ್ದು ಇಂದಿನ ಜನಪ್ರತಿನಿಧಿಗಳು ಡಾ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆದರೆ ಉತ್ತಮ ಸಮಾಜ ಕಟ್ಟಬಹುದು ಎಂದು ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.
ತಾಲೂಕಿನ ಹುಲ್ಲೂರು ವಲಯದ ಹಡಲಗೇರಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ನ ಸಹಯೋಗದಲ್ಲಿ ನಿರ್ಮಿಸಿದ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯೋಜನಾಧಿಕಾರಿ ನಾಗೇಶ ಎನ್.ಪಿ ಮಾತನಾಡಿ, ತಾಲೂಕಿನಲ್ಲಿ 120 ಕುಟುಂಬಕ್ಕೆ ತಿಂಗಳು 1000 ಮಾಶಾಸನ ನೀಡಲಾಗುತ್ತಿದೆ.ಹಡಲಗೇರಿ ಗ್ರಾಮದ ನಿರ್ಗತಿಕ ಸದಸ್ಯರನ್ನು ಆಯ್ಕೆ ಮಾಡಿ ಅವರಿಗೆ ಅಗತ್ಯ ಇರುವ ಮೂಲಭೂತ ಪರಿಕರಗಳು ಹಾಗೂ ಮಾಶಾಸನ ಮತ್ತು ವಾಸಿಸಲು ಮನೆ ಇಲ್ಲದ ವ್ಯಕ್ತಿಗಳಿಗೆ ವಾತ್ಸಲ್ಯ ಮನೆ ಇದಾಗಿದೆ ಎಂದರು.
ಗ್ರಾಮದ ಕುಂಟಮ್ಮ ಎಂಬ ಅವರಿಗೆ ವಾಸಿಸಲು ಮನೆ ಇಲ್ಲದೆ ಇರುವ ಕಾರಣ ಅವರಿಗೆ ಧರ್ಮಸ್ಥಳ ಸಂಸ್ಥೆಯಿOದ ಮನೆ ಕಟ್ಟಿಸಿಕೊಡಲಾಗಿದೆ ಎಂದರು.ಮುಖAಡ ಶ್ರೀಶೈಲ ದೊಡಮನಿ, ಸಿದ್ದು ಹೆಬ್ಬಾಳ,ಗ್ರಾಪಂ ಅಧ್ಯಕ್ಷೆ ಲಕ್ಷಿ ಬಿರಾದಾರ,ನಾಗರಾಜ ಕುಲಕರ್ಣಿ,ಜಗದೀಶ ಹುಲ್ಲೂರು, ಸುಜಾತಾ, ಭೀಮಾಬಾಯಿ, ಹಾಗೂ ಹಡಲಗೇರಿ ಒಕ್ಕೂಟದ ಪದಾಧಿಕಾರಿಗಳು ಇದ್ದರು.