ಕೊಚ್ಚಿ: ಸಂತಾನ ಪಡೆಯುವ ಮುನ್ನವೇ ಗಂಭೀರ ಆರೋಗ್ಯ ಸಮಸ್ಯೆಯಿಂದಾಗಿ ಹಾಸಿಗೆ ಹಿಡಿದಿರುವ ಪತಿಯ ವೀರ್ಯ (Sperm collection) ವನ್ನು ವೈದ್ಯಕೀಯ ವಿಧಾನದಲ್ಲಿ ಸಂಗ್ರಹಿಸಲು ಕೇರಳ ಹೈಕೋರ್ಟ್ ಅನುಮತಿಸಿದೆ.
ಕೃತಕ ಗರ್ಭ ಧಾರಣೆ ಉದ್ದೇಶಕ್ಕಾಗಿ ಅದನ್ನು ಸಂಗ್ರಹಿಸಿಡಲು ಅನುಮತಿ ನೀಡಬೇಕೆಂಬ ಪತ್ನಿಯ ಬೇಡಿಕೆಗೆ ಕೋರ್ಟ್ ಸಮ್ಮತಿಸಿದೆ. ತನ್ಮೂಲಕ ಮರಣ ಶಯ್ಕೆಯಲ್ಲಿರುವ ಪತಿಯಿಂದಲೇ ಸಂತಾನಭಾಗ್ಯ ಹೊಂದಲು ಬಯಸುತ್ತಿರುವ ಮಹಿಳೆಯ ನೆರವಿಗೆ ಮುಂದಾಗಿದೆ.
Join Our Telegram: https://t.me/dcgkannada
ಪತಿಯ ಸ್ಥಿತಿ ಗಂಭೀರವಾಗಿದ್ದು, ದಿನೇದಿನೇ ಸ್ಥಿತಿ ಬಿಗಡಾಯಿಸುತ್ತಿದೆ. ಹೀಗಾಗಿ, ಪತಿಯ ಅನುಮತಿ ಇಲ್ಲದೆಯೂ ವೀರ ಪಡೆಯಲು ಕೋರ್ಟ್ ಅನುಮತಿ ನೀಡಿದೆ. ನೆರವಿನಿಂದ ಕೂಡಿದ ಸಂತಾನಭಾಗ್ಯ ತಂತ್ರಜ್ಞಾನ ನಿಯಂತ್ರಣ ಕಾಯ್ದೆಯಡಿ ವೀರ್ಯ (Sperm collection) ಪಡೆಯಲು ಪತಿಯ ಒಪ್ಪಿಗೆ ಬೇಕು. ಆದರೆ, ಪತಿ ಒಪ್ಪಿಗೆ ನೀಡುವ ಸ್ಥಿತಿ ಇಲ್ಲ. ಈ ವಿಷಯದಲ್ಲಿ ವಿಳಂಬ ಮಾಡಿದಷ್ಟೂ ತೊಂದರೆಯಾಗುತ್ತದೆ ಎಂದು ಮಹಿಳೆಯ ಪರವಕೀಲರು
ವಾದಿಸಿದ್ದರು.
ಹೀಗಾಗಿ, ಮರಣಶಯ್ಯಯಲ್ಲಿರುವ ಪತಿಯ ದೇಹದಿಂದ ವೀರ್ಯ ಸಂಗ್ರಹಿಸಿ ಅದನ್ನು ಶೇಖರಿಸಿಡಲು ನ್ಯಾಯಾಲಯ ಒಪ್ಪಿಗೆ ನೀಡಿದೆ. ಆದರೆ, ಕೃತಕ ಗರ್ಭಧಾರಣೆ ಪ್ರಕ್ರಿಯೆಯಡಿ ಮುಂದಿನ ಯಾವುದೇ ಕ್ರಮವನ್ನು ತನ್ನ ಒಪ್ಪಿಗೆ ಇಲ್ಲದೆ ನಡೆಸಕೂಡದು ಎಂದಿದೆ.
ಇದನ್ನೂ ಓದಿ: Vijayawad blast: ಕಂಪನಿಯಲ್ಲಿ ಸ್ಫೋಟ.. 17 ಜನರ ದುರ್ಮರಣ ಸಾವು, 41 ಜನರಿಗೆ ಗಾಯ
ನ್ಯಾಯಾಲಯದ ಅನುಮತಿಯಿಂದಾಗಿ ಸಾವು-ಬದುಕಿನ ನಡುವೆ ಹೋರಾ ಡುತ್ತಿರುವ ಪತಿಯ ವೀರ್ಯ ಸಂಗ್ರಹಿಸಿ ಟ್ಟುಕೊಂಡು, ಭವಿಷ್ಯದಲ್ಲಿ ಕೋರ್ಟ್ ಅನುಮತಿ ಪಡೆದು ಮಗು ಪಡೆಯಲು ಮಹಿಳೆಗೆ ಅನುಕೂಲವಾಗಿದೆ.