ಮುದ್ದೇಬಿಹಾಳ : ತಾಲ್ಲೂಕಿನ ಯರಝರಿಯಲ್ಲಿ ನಡೆದ ಹುಲ್ಲೂರು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಖೋ ಖೋ ಪಂದ್ಯಾವಳಿಯಲ್ಲಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ವಿರುದ್ಧ ಪ್ರೌಢಶಾಲೆ ವಿದ್ಯಾರ್ಥಿಗಳನ್ನು ಆಟವಾಡಿಸಿ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ತಾಲ್ಲೂಕಿನ ಬಸರಕೋಡದ ಯುವಕರು, ವಿದ್ಯಾರ್ಥಿಗಳು ಗುರುವಾರ ಬಿಇಒ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಚೇರಿ ವ್ಯವಸ್ಥಾಪಕ ಬಿ.ಎಸ್.ಪಾಟೀಲ್, ಬಿಆರ್‌ಪಿ ಪಿ.ಎ.ಬಾಳಿಕಾಯಿ ಅವರು ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಂದ ಮನವಿ ಪತ್ರ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಬಸರಕೋಡದ ಯುವ ಮುಖಂಡ ಬಸವರಾಜ ಬಿರಾದಾರ, ಸಂಗಮೇಶ ಕಠಾರೆ, ಯರಝರಿಯಲ್ಲಿ ಹುಲ್ಲೂರು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ದೈಹಿಕ ಶಿಕ್ಷಣಾಧಿಕಾರಿ ಬಿ.ವಾಯ್.ಕವಡಿ, ಬಿ.ಆರ್.ಪಿ ರಾಜು ಕೋನರೆಡ್ಡಿ, ಸ್ಥಳೀಯ ಶಾಲೆಯ ಮುಖ್ಯಗುರುಗಳು, ನಿರ್ಣಾಯಕರು ಖೋ ಖೋ ಆಟದಲ್ಲಿ ಬಸರಕೋಡದ ಮಾತೋಶ್ರೀ ಶಿವಲಿಂಗಮ್ಮ ನಾಡಗೌಡರ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುವಂತ ನಿರ್ಧಾರಗಳನ್ನು ಕೈಗೊಂಡಿದ್ದಾರೆ.ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಆಡಿಸಿದ್ದಲ್ಲದೇ ತಂಡವನ್ನು ಅನರ್ಹಗೊಳಿಸುವ ಬೆದರಿಕೆ ಒಡ್ಡಿದ್ದಾರೆ. ಇದರಿಂದ ಬಸರಕೋಡದ ವಿದ್ಯಾರ್ಥಿಗಳ ಮಾನಸಿಕ ಸ್ಕೈರ್ಯ ಕುಸಿಯುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಪ್ರೌಢಶಾಲೆ ವಿದ್ಯಾರ್ಥಿಗಳನ್ನು ಆಡಿ ಸೋಮು ವಡ್ಡರ, ಬಸವರಾಜ ಮಂಕಣಿ, ಸಂತೋಷ ವಡ್ಡರ, ಮುದಕಪ್ಪ ಮಾದರ, ಶ್ರೀಶೈಲ ಚಲವಾದಿ, ಬಸವರಾಜ ವಡ್ಡೋಡಗಿ ಮೊದಲಾದವರು ಇದ್ದರು.
ವಿದ್ಯಾರ್ಥಿಗಳ ಸಮೇತ ಗ್ರಾಮಸ್ಥರು ನಾಲ್ಕು ತಾಸು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರೂ ಸಮೀಪದಲ್ಲಿಯೇ ಇದ್ದ ಬಿಇಒ ಬಿ.ಎಸ್.ಸಾವಳಗಿ ಸ್ಥಳಕ್ಕೆ ಬಂದು ಪ್ರತಿಭಟನಾ ನಿರತರ ಮನವಿ ಆಲಿಸಲಿಲ್ಲ ಎಂದು ಮುಖಂಡ ಬಸವರಾಜ ಬಿರಾದಾರ ದೂರಿದರು.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ಪ್ಯಾಲಿಸ್ಟೈನ್ ಧ್ವಜ ಹಾರಾಟ, ಪ್ರಕರಣ ದಾಖಲು: ಎಸ್ಪಿ ಅಮರನಾಥ ರೆಡ್ಡಿ (ವಿಡಿಯೋ ನೋಡಿ)
ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಯರಝರಿ ಶಾಲೆಯ ವಿದ್ಯಾರ್ಥಿಗಳಲ್ಲಿ ಇಬ್ಬರ ದಾಖಲೆಗಳು ಸರಿಯಾಗಿ ಇಲ್ಲದ ಕಾರಣ ಅವರನ್ನು ಫೈನಲ್ ಪಂದ್ಯದಿಂದ ಅಮಾನತುಗೊಳಿಸಲಾಗಿದೆ. ಬಸರಕೋಡ ಶಾಲೆಯ ವಿದ್ಯಾರ್ಥಿಗಳು ವಿಜೇತರು ಎಂದು ಘೋಷಿಸಿ ಅವರಿಗೆ ತಾಲ್ಲೂಕು ಮಟ್ಟದಲ್ಲಿ ಆಡುವುದಕ್ಕೆ ಅನುಮತಿ ಕಲ್ಪಿಸಲಾಗಿದೆ ಎಂದು ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ವಾಯ್.ಕವಡಿ ಪತ್ರಿಕೆಗೆ ಹೇಳಿದರು.