ಟ್ರ್ಯಾಕ್ಟರ್ ಪಲ್ಟಿ : ಕಟ್ಟೆಯೊಡೆದ ರೈತರ ಆಕ್ರೋಶ

ಟ್ರ್ಯಾಕ್ಟರ್ ಪಲ್ಟಿ : ಕಟ್ಟೆಯೊಡೆದ ರೈತರ ಆಕ್ರೋಶ

ಮುಧೋಳ : ಬಾಕಿ ನೀಡದೆ ಕಾರ್ಖಾನೆಗಳನ್ನು ಪ್ರಾರಂಭಿಸಬಾರದು ಎಂದು ಉಪವಿಭಾಗಾಧಿಕಾರಿಗೆ ಮನವಿ ಮಾಡಿಕೊಂಡಿದ್ದರೂ ಅವರ ಮಾತಿಗೆ ಮನ್ನಣೆ ನೀಡದೆ ಕಾರ್ಖಾನೆಗಳನ್ನು ಆರಂಭಿಸುತ್ತಿದ್ದಾರೆ ಎಂದು ಆಕ್ರೋಶಗೊಂಡ ರೈತರು ಸೋಮವಾರ ಕಾರ್ಖಾನೆಯೊಂದರ ಆವರಣಕ್ಕೆ ನುಗ್ಗಿದ ರೈತರು ಅಲ್ಲಿ ನಿಲ್ಲಿಸಿದ್ದ ಕಬ್ಬಿನ ಟ್ರ್ಯಾಕ್ಟರ್ ಟ್ರೇಲರ್ ಪಲ್ಟಿ‌ ಮಾಡಿ‌ ತಮ್ಮ ಆಕ್ರೋ‌ಶ ಹೊರಹಾಕಿದರು.

ಇದಕ್ಕೂ ಮುನ್ನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದ್ದ ರೈತರು ಬಾಕಿ ನೀಡದೆ ಕಾರ್ಖಾನೆ ಆರಂಭಿಸಿದ್ದರ ಕಾರ್ಖಾನೆ ಮಾಲೀಕರ ವಿರುದ್ದ ಹರಿಹಾಯ್ದಿದ್ದರು.

ರೈತ ಸಂಘಟನೆ ಅಧ್ಯಕ್ಷ ಬಸವಂತ ಕಾಂಬಳೆ ಮಾತನಾಡಿ, ಕಬ್ಬು ಬಾಕಿ ಹಣ ನೀಡದ ಹೊರತು ಕಾರ್ಖಾನೆಗಳನ್ನು ಆರಂಭಿಸಬಾರದು ಎಂದು ಮೊನ್ನೆ ನಡೆದ ಮಾತುಕಥೆಯಾಗಿತ್ತು. ಅಂದು ಜಿಲ್ಲಾಡಳಿತ 13-14ರ ವರೆಗೆ ಕಾಲಾವಕಾಶ ನೀಡಿತ್ತು. ಆದರೆ ಇದೀಗ ಅಂದಿನ ಮಾತುಕತೆ ಮೀರಿ ಕಾರ್ಖಾನೆಗಳು ಆರಂಭ ಮಾಡುತ್ತಿದ್ದಾರೆ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಜಿಲ್ಲಾಡೀತ ಮಾತ್ರ ಕೈ ಕಟ್ಟಿ ಕುಳಿತಿದೆ‌. ಬಾಕಿ ನೀಡದೆ ಕಾರ್ಖಾನೆ ಆರಂಭಿಸುವ ಕ್ರಮ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೋರಾಟಗಾರರ ದಿಕ್ಕುತಪ್ಪಿಸುವ ಸಲುವಾಗಿ ಸಕ್ಕರೆ ಸಚಿವರು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ‌
ಚುನಾವಣೆಯಲ್ಲಿರುವ ಜನಪ್ರತಿನಿಧಿಗಳು ರೈತರ ಹೆಸರಿನಲ್ಲಿ‌ ಪ್ರಚಾರ ಮಾಡುತ್ತಾರೆ ಇಲ್ಲಿ ರೈತರ ಬೆನ್ನುಲುಬು ಮುರಿಯುತ್ತಾರೆ ಎಂದು ಹೇಳಿದರು.

ಸುಭಾಸ ಶಿರಬೂರವರು ಮಾತನಾಡಿ, ಕಾರ್ಖಾನೆಗಳ ವಿರುದ್ಧ ಹೋರಾಡಲು‌ ನಮಗೆ ದಾಖಲೆಗಳ ಅಗತ್ಯತೆ ಇದೆ‌. ನಮ್ಮ ಬಳಿಯಿರುವ ದಾಖಲೆಯೊಂದಿಗೆ ಬಾಕಿ ನೀಡದ ಕಾರ್ಖಾನೆ ಮಾಲೀಕರ ವಿರುದ್ದ ಹೋರಾಡಿದಾಗ ಮಾತ್ರ ನಮ್ಮ ಬೇಡಿಕೆ ಈಡೇರಲು ಸಾಧ್ಯ‌. ಈ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಿ ಹೋರಾಟ ಮಾಡಬೇಕು ಎಂದರು.

ಉಪವಿಭಾಗಧಿಕಾರಿ ಬಂದು ಕಾರ್ಖಾನೆ ಪ್ರಾರಂಭಿಸಲು ಕಬ್ಬು ತುಂಬಿಕೊಂಡು ಬಂದಿರುವ ಟ್ರ್ಯಾಕ್ಟರಗಳನ್ನು ತೆರವುಗೊಳಿಸಬೇಕು ಇಲ್ಲವಾದಲ್ಲಿ ನಾವೆ ಹೋಗಿ ಅವುಗಳನ್ನು ತೆರಳುವಗೋಳಿಸುತ್ತೆವೆ ಅಂತಾ ರೈತರು ಪಟ್ಟು ಹಿಡಿದರು.

ಬಾರದ ಎಸಿ ಕಟ್ಟೆಯೊಡೆದ ಆಕ್ರೋಶ : ರೈತರು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸುತ್ತಿದ್ದರೂ ಸಹ ಸ್ಥಳಕ್ಕೆ ಉಪವಿಭಾಧಿಕಾರಿ ಬಾರದ ಕಾರಣ ರೈತರ ಆಕ್ರೋಶ‌ದ ಕಟ್ಟೆಯೊಡೆದು ಕಾರ್ಖಾನೆಯೊಂದಕ್ಕೆ‌ ನುಗ್ಗಿದರು. ಅಲ್ಲಿನ ಟ್ರ್ಯಾಕ್ಟರ್ ಗಳನ್ನು ಪಲ್ಟಿ ಮಾಡಿ ತಮ್ಮ ಆಕ್ರೋಶ ಹೊರಹಾಕಿದರು.

ಆಕ್ರೋಶಕ್ಕೆ ಕಾರಣವಾದ ಜಿಲ್ಲಾಡಳಿತ ನಡೆ : ಮೊನ್ನೆ ತಹಸೀಲ್ದಾರ್ ಕಚೇರಿಯಲ್ಲಿ ಅಹೋರಾತ್ರಿ ನಡೆದ ಪ್ರತಿಭಟನೆ ವೇಳೆ ತಡವಾಗಿ ರೈತರನ್ನು ಭೇಟಿಯಾಗಿದ್ದ ಜಮಖಂಡಿ ಉಪವಿಭಾಗಾಧಿಕಾರಿ 13-14ರಂದು ಸಚಿವರ ನೇತೃತ್ವದಲ್ಲಿ ಸಭೆ ನಡೆಸಲಾಗುವುದು ಅಲ್ಲಿಯವರೆಗೆ ಯಾವುದೇ ಕಾರಣಕ್ಕೂ ಕಾರ್ಖಾನೆಗಳನ್ನು ಆರಂಭಿಸಲು ಅನುಮತಿ ನೀಡುವುದಿಲ್ಲ ಎಂದು ರೈತರೆದುರು ವಾಗ್ದಾನ ಮಾಡಿದ್ದರು. ಆದರೆ ನಿನ್ನೆಯಿಂದ ತಾಲೂಕಿನಲ್ಲಿ ಕೆಲ ಕಾರ್ಖಾನೆಗಳು ಆರಂಭವಾಗಿರುವುದು ರೈತರನ್ನು ಕೆರಳುವಂತೆ ಮಾಡಿತ್ತು. ಇಂದು ರೈತರು ಪ್ರತಿಭಟನೆ ನಡೆಸುತ್ತಿದ್ದಾಗಳು ಜಿಲ್ಲಾಧಿಕಾರಿಯಾಗಲಿ ಅಥವಾ ಉಪವಿಭಾಗಾಧಿಕಾರಿಯಾಗಲಿ ರೈತರನ್ನು ಭೇಟಿ‌ ಮಾಡಿ ಮಾತುಕಥೆಗೆ ಮುಂದಾಗಲಿಲ್ಲ. ಜಿಲ್ಲಾಡಳಿತದ ನಿರ್ಲಕ್ಷ್ಯ ನಡೆಯೇ ರೈತರನ್ನು‌ ಕೆರಳುವಂತೆ ಮಾಡಿತು ಎಂಬ ಮಾತುಗಳು ಹೋರಾಟಗಾರರ ಸ್ಥಳದಿಂದ ಕೇಳಿಬಂದವು.

ದುಂಡಪ್ಪ ಯರಗಟ್ಟಿ, ಮುತ್ತಪ್ಪ ಕೋಮಾರ, ಯಂಕಣ್ಣ ಮಳಲಿ, ಹನಮಂತ ನಬಾಬ, ಹನಮಂತಗೌಡ ಪಾಟೀಲ ಮಹೇಶಗೌಡ ಪಾಟೀಲ, ನಾಗೇಶ ಗೋಲಶೆಟ್ಟಿ ಸೇರಿದಂತೆ ಇತರರು ಇದ್ದರು.

Latest News

BREAKING: ಭೀಕರ ಅಪಘಾತ.. ಐವರು ಸಾವು

BREAKING: ಭೀಕರ ಅಪಘಾತ.. ಐವರು ಸಾವು

ಯಾದಗಿರಿ: ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಬೈಕ್‌'ಗೆ ಸಾರಿಗೆ ಬಸ್‌ ಡಿಕ್ಕಿಯಾಗಿ ಐವರು

Budget Breaking : ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೇಂದ್ರ ಸರ್ಕಾರ

Budget Breaking : ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೇಂದ್ರ ಸರ್ಕಾರ

ದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ

Gruhalakshmi Yojane: ಸಂಕ್ರಾಂತಿಗೆ ಸರ್ಕಾರದಿಂದ ಬಂಪರ್ ಆಫರ್

Gruhalakshmi Yojane: ಸಂಕ್ರಾಂತಿಗೆ ಸರ್ಕಾರದಿಂದ ಬಂಪರ್ ಆಫರ್

ಗೃಹಲಕ್ಷ್ಮಿ ಯೋಜನೆಯ (Gruhalakshmi Yojane) 16ನೇ ಕಂತಿನ ಹಣದ ಕುರಿತು ಮಾಹಿತಿ ಇಲ್ಲಿದೆ. ಪ್ರತಿ

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ನವದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ 10 ಗ್ರಾಂ ಚಿನ್ನದ ಧಾರಣೆಯು ಮತ್ತೆ

Adhaar Card New Rules: 5 ಹೊಸ ನಿಮಯ ಜಾರಿ.. ದಂಡ ಫಿಕ್ಸ್.!

Adhaar Card New Rules: 5 ಹೊಸ ನಿಮಯ ಜಾರಿ.. ದಂಡ ಫಿಕ್ಸ್.!

Adhaar Card New Rules: ಸರ್ಕಾರದಿಂದ ಆಧಾರ್ ಕಾರ್ಡ್ ಹೊಂದಿದವರಿಗೆ 5 ಹೊಸ ರೂಲ್ಸ್ ಜಾರಿ ಮಾಡಿದೆ. ಈ ಐದೂ ನಿಮಯ ಪಾಲಿಸದಿದ್ದರೆ ದಂಡ ಗ್ಯಾರಂಟಿ! ಆಧಾರ್ ಕಾರ್ಡ್ ಅನ್ನು ಪ್ರತಿಯೊಬ್ಬ ನಾಗರಿಕನ ಅಗತ್ಯ ದಾಖಲೆಯಾಗಿ ಗುರುತಿಸಲಾಗಿದೆ. ಇದು ನಮ್ಮ ಗುರುತಿನ ಕಡ್ಡಾಯ ದಾಖಲೆಯಾಗಿದೆ. ಎಲ್ಲಾ ಸರ್ಕಾರಿ ಯೋಜನೆಗಳು ಮತ್ತು ಹಣಕಾಸು ಸೇವೆಗಳು ನಮ್ಮನ್ನು ತಲುಪಲು ಆಧಾರ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಅಗತ್ಯವಿರುತ್ತದೆ. Join Our Telegram: https://t.me/dcgkannada

Virat Kohli Retirement Plan: ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಕ್ಲಾರಿಟಿ

Virat Kohli Retirement Plan: ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಕ್ಲಾರಿಟಿ

Virat Kohli Retirement Plan ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ವಿರಾಟ್ ಕಳಪೆ ಫಾರ್ಮ್ ನಿಂದ ನಿವೃತ್ತಿ ಕುರಿತು ಚರ್ಚೆ ಶುರುವಾಗಿದೆ. ಈ ಸರಣಿಯಲ್ಲಿ 9 ಇನಿಂಗ್ಸ್ ಆಡಿದ್ದ ವಿರಾಟ್ ಕೊಹ್ಲಿ 23.75 ರ ಕಳಪೆ ಸರಾಸರಿಯೊಂದಿಗೆ 190 ರನ್ ಮಾತ್ರ ಕಲೆಹಾಕಿದ್ದಾರೆ. ಈ ಕಳಪೆ ಪ್ರದರ್ಶನದ ಬೆನ್ನಲ್ಲೇ ಕೊಹ್ಲಿ ನಿವೃತ್ತರಾಗುವುದು ಉತ್ತಮ ಎಂಬ ಕೂಗುಗಳು ಕೇಳಿಬಂದಿದ್ದವು. ಆದರೀಗ ವಿರಾಟ್ ಕೊಹ್ಲಿ ತಾವು ಯಾವಾಗ ನಿವೃತ್ತಿ ಆಗುತ್ತೇನೆ ಎಂಬುದರ