ಬೆಂಗಳೂರು: ದೊಡ್ಡಕಮ್ಮನಹಳ್ಳಿಯಲ್ಲಿ ಶೀಲ ಶಂಕಿಸಿ ಪತ್ನಿಯ ಕೊಂದು ಶುಕ್ರವಾರ ಪರಾರಿ ಆಗಿದ್ದ ಕಾರ್ಮಿಕ ಆತ್ಮಹತ್ಯೆಗೆ ಶರಣಾಗಿರುವ (Suicide case) ದುರ್ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ದೊಡ್ಡಕಮ್ಮನಹಳ್ಳಿ ನಿವಾಸಿ (40) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
Join Our Telegram: https://t.me/dcgkannada
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಪತ್ನಿ ಮೀನಾ (36) ಮೇಲೆ ಕಬ್ಬಿಣ ಸಲಾಕೆಯಿಂದ ಹಲ್ಲೆ ನಡೆಸಿ ಶುಕ್ರವಾರ ಮಧ್ಯಾಹ್ನ ಕೊಂದು ಮಹೇಶ್ ಪರಾರಿಯಾಗಿದ್ದ. ಈ ಕುಕೃತ್ಯದ ಬಳಿಕ ಮನೆ ಸಮೀಪ ನಿರ್ಜನ ಪ್ರದೇಶಕ್ಕೆ ತೆರಳಿ ತಾನೂ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
20 ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಮೀನಾ ಜತೆ ಮಹೇಶ್ 2ನೇ ವಿವಾಹವಾಗಿದ್ದ. ಇದಕ್ಕೂ ಮುನ್ನ ತನ್ನ ಮೊದಲ ಪತಿಯಿಂದ ಪ್ರತ್ಯೇಕವಾಗಿ ಇಬ್ಬರು ಮಕ್ಕಳ ಜತೆ ನಗರಕ್ಕೆ ಮೀನಾ ಬಂದಿದ್ದಳು. ಮೀನಾ ಮಕ್ಕಳ ಜತೆ ಮಹೇಶ್ ಅನ್ನೋನ್ಯವಾಗಿಯೇ ಇದ್ದ. ಆದರೆ, ಇತ್ತೀಚಿಗೆ ಪತ್ನಿ ನಡವಳಿಕೆ ಮೇಲೆ ಶಂಕೆಗೊಂಡಿದ್ದ ಆತ, ಸದಾ ಮೊಬೈಲ್‌ನಲ್ಲಿ ಮಾತುಕತೆಯಲ್ಲಿ ನಿರತಳಾಗಿದ್ದ ಮೀನಾ ವರ್ತನೆಗೆ ಆಕ್ಷೇಪಿಸಿದ್ದ ಎನ್ನಲಾಗಿದೆ.
ಇದನ್ನೂ ಓದಿ: Viral Video: ದೇವಾಲಯದೊಳಗೇ ಹಸ್ತಮೈಥುನ ಮಾಡಿಕೊಂಡ ಭೂಪ..! (ವೈರಲ್ ವಿಡಿಯೋ ನೋಡಿ)
ಇದೇ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಮನೆಯಲ್ಲಿ ಶುಕ್ರವಾರ ಮಧ್ಯಾಹ್ನ ಸತಿ-ಪತಿ ಮಧ್ಯೆ ಜಗಳವೂ ಆಗಿದೆ. ಆಗ ಪತ್ನಿಯನ್ನು ಹತ್ಯೆ ಮಾಡಿದ್ದ ಪತಿರಾಯ, ನಿರ್ಜನ ಪ್ರದೇಶದಲ್ಲಿ ಆತ್ಮಹತ್ಯೆಗೆ (Suicide case) ಶರಣಾಗಿದ್ದಾನೆ.