ಶಿವಮೊಗ್ಗ: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ (Suicide) ಶರಣಾಗಿರುವ ಆಘಾತಕಾರಿ ದುರ್ಘಟನೆಯು ಶಿವಮೊಗ್ಗ ನಗರದ ಕ್ಲಾರ್ಕ್ ಪೇಟೆಯಲ್ಲಿ ಬೆಳಕಿಗೆ ಬಂದಿದೆ.
ಭುವನೇಶ್ವರಿ (52), ಭುವನೇಶ್ವರಿ ಸಹೋದರ ಮಾರುತಿ (28), ಭುವನೇಶ್ವರಿ ಮಗ ದರ್ಶನ್ (22) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ.
Join Out Telegram: https://t.me/dcgkannada
ಭುವನೇಶ್ವರಿ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಅವರ ಸಹೋದರ ಮಾರುತಿ ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಎಂದಿನಂತೆ ಎಲ್ಲರೂ ಮನೆಗೆ ಬಂದಿದ್ದರು. ಆದ್ರೆ, ರಾತ್ರಿ ವೇಳೆ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ.
ಕುಟುಂಬಸ್ಥರು ಇವರಿಗೆ ಕರೆ ಮಾಡಿದಾಗ ಯಾರೂ ಕರೆ ಸ್ವೀಕರಿಸಿರಲಿಲ್ಲ. ಹೀಗಾಗಿ, ಬೆಳಗ್ಗೆ ಭುವನೇಶ್ವರಿ ಅವರ ಇನ್ನೊಬ್ಬ ಸಹೋದರ ಬಂದು ಬಾಗಿಲು ತೆರೆದು ನೋಡಿದಾಗ ಮೂವರೂ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ವಕೀಲ ಮೇಲಿನಕೇರಿ ಮರ್ಡರ್ ಕೇಸ್.. ನಾಲ್ಕೇ ದಿನದಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ ಖಾಕಿಪಡೆ..!
ಸಾವಿಗೆ ಶರಣಾಗಿರುವುದಕ್ಕೆ (Suicide) ನಿಖರವಾದ ಕಾರಣ ತಿಳಿದು ಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.