Sanju Samson: ಅಬ್ಬಾ..!! ಸಂಜು ಸ್ಯಾಮ್ಸನ್ ಸ್ಟ್ರೈಕ್​​ರೇಟ್​​ ಕುರಿತು ಯಾರೂ ಕೆಮ್ಮಂಗಿಲ್ಲ.. ಯಾಕೆ ಗೊತ್ತಾ?

Sanju Samson: ಅಬ್ಬಾ..!! ಸಂಜು ಸ್ಯಾಮ್ಸನ್ ಸ್ಟ್ರೈಕ್​​ರೇಟ್​​ ಕುರಿತು ಯಾರೂ ಕೆಮ್ಮಂಗಿಲ್ಲ.. ಯಾಕೆ ಗೊತ್ತಾ?

T20 Match India vs South Africa: ಸೌತ್​​ ಆಫ್ರಿಕಾದ ಡರ್ಬನ್​ನಲ್ಲಿ ಸಂಜು ಸ್ಯಾಮ್ಸನ್ (Sanju Samson) ಶೋ ಸಖತ್​​ ಆಗಿ ಮೂಡಿಬಂತ್ತು. ಹೌದು, ಸಂಜು ಸ್ಯಾಮ್ಸನ್​ ಸ್ಪೋಟಕ ಆಟಕ್ಕೆ ಸೌತ್​ ಆಫ್ರಿಕಾ ಬೌಲರ್​ಗಳು ಕಕ್ಕಾಬಿಕ್ಕಿಯಾದರು.

ಸಿಕ್ಸ್​​.. ಸಿಕ್ಸ್​​.. ಸಿಕ್ಸ್​.. ಡರ್ಬನ್​ನಲ್ಲಿ ನಿನ್ನೆ ಸಿಕ್ಸರ್​​ಗಳ ಸುರಿಮಳೆ ಸುರಿಯಿತು. ಒಂದಲ್ಲ.. ಎರಡಲ್ಲ.. ಬರೋಬ್ಬರಿ 10 ಸಿಕ್ಸರ್​ಗಳು! ಇಡೀ ತಂಡದ್ದಲ್ಲ.. ಒಬ್ಬನೇ ಒಬ್ಬ ಸಿಡಿಸಿದ ಸಿಕ್ಸರ್​ಗಳಿವು!

ನಿನ್ನೆ ನಡೆದ ಸೌತ್​ ಆಫ್ರಿಕಾ ವಿರುದ್ಧದ T20 Matchನಲ್ಲಿ ಟಾಸ್​​ ಸೋತು ಬ್ಯಾಟಿಂಗ್​ಗಿಳಿದ ಟೀಮ್​ ಇಂಡಿಯಾ ಆರಂಭದಲ್ಲೇ ವಿಕೆಟ್​ ಕಳೆದುಕೊಂಡಿತು. ಓಪನರ್​ ಅಭಿಶೇಕ್​ ಶರ್ಮಾ 7 ರನ್​ಗಳಿಸಿ ಔಟಾದರು. 3ನೇ ಕ್ರಮಾಂಕದಲ್ಲಿ ಕ್ರಿಸ್​ಗೆ ಬಂದ ಸೂರ್ಯಕುಮಾರ್​ ಯಾದವ್​ ಅಬ್ಬರಿಸಿ ಮರೆಯಾದರು. 1 ಸಿಕ್ಸರ್​​, 2 ಬೌಂಡರಿ ಸಿಡಿಸಿದ ಸೂರ್ಯ 21 ರನ್​ಗಳಿಸಿ ನಿರ್ಗಮಿಸಿದರು.

ಒಂದೆಡೆ ವಿಕೆಟ್​ ಉರುಳ್ತಾ ಇದ್ರೆ, ಇನ್ನೊಂದೆಡೆ ಸೈಲೆಂಟ್ ಸ್ಟಾರ್​​ ಸಂಜು (Sanju Samson) ಫುಲ್​ ವೈಲೆಂಟ್​ ಆಗಿದ್ದರು. ಸೌತ್​ ಆಫ್ರಿಕಾ ಬೌಲರ್​​ಗಳ ಬೆಂಡೆತ್ತಿದ ಸಂಜು, ಸಿಕ್ಸರ್​ಗಳ ಮಳೆ ಸುರಿಸಿದರು. ಸಂಜು ಸ್ಯಾಮ್ಸನ್​ ಆಟಕ್ಕೆ ಸೌತ್​ ಆಫ್ರಿಕಾ ಬೌಲರ್​ಗಳ ಬಳಿ ಆನ್ಸರೇ ಇರಲಿಲ್ಲ. ಕ್ಯಾಪ್ಟನ್​ ಮರ್ಕರಮ್​ಗೆ ಫೀಲ್ಡ್​ ಪ್ಲೇಸ್​ಮೆಂಟ್​ ಮಾಡೋ ಟೆನ್ಶನ್​​ ಅನ್ನೋದು ಬರೆಲೇ ಇಲ್ಲ. ಸಂಜು ಹೊಡೆದ ಶಾಟ್ಸ್​​ಗಳು ಎಲ್ಲಾ ಬೌಂಡರಿಯಾಚೆ ಹೋಗುತ್ತಿದ್ದವು.

ಡರ್ಬನ್​ನ T20 Matchನಲ್ಲಿ 10 ಸಿಕ್ಸರ್​ ಸಿಡಿಸಿ ಮಿಂಚಿದ ಸಂಜು (Sanju Samson) ಸ್ಯಾಮ್ಸನ್​ 7 ಕ್ಲಾಸಿಕ್​ ಬೌಂಡರಿಗಳನ್ನೂ ಚಚ್ಚಿದ್ರು. ಬರೋಬ್ಬರಿ 214ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್​ ಬೀಸಿದ ಸ್ಯಾಮ್ಸನ್​ 47 ಎಸೆತಗಳಲ್ಲೇ ಸೆಂಚುರಿ ಸಿಡಿಸಿ ಮಿಂಚಿದರು.

ಸಂಜು ಸ್ಯಾಮ್ಸನ್​ಗೆ ಸಾಥ್​ ಕೊಟ್ಟ ತಿಲಕ್​ ವರ್ಮಾ 18 ಎಸೆತಗಳಲ್ಲೇ 33 ರನ್​ ಚಚ್ಚಿದ್ರು. 3 ಬೌಂಡರಿ, 2 ಸಿಕ್ಸರ್​ಗಳನ್ನ ಬಾರಿಸಿದರು. 33 ರನ್​ಗಳಿಸಿ ತಿಲಕ್​ ವರ್ಮಾ ಔಟಾದರೆ ಶತಕದ ಬೆನ್ನಲ್ಲೇ ಸಂಜು ಸ್ಯಾಮ್ಸನ್​ ವಿಕೆಟ್​ ಒಪ್ಪಿಸಿದರು. ಇದ್ರೊಂದಿಗೆ ಟೀಮ್​ ಇಂಡಿಯಾ ಕುಸಿತ ಆರಂಭವಾಯ್ತು.

ಹಾರ್ದಿಕ್​ ಪಾಂಡ್ಯ, ರಿಂಕು ಸಿಂಗ್​, ಅಕ್ಷರ್​ ಪಟೇಲ್​ ಅಲ್ಪ ಮೊತ್ತಕ್ಕೆ ಔಟಾದರು. ಪರಿಣಾಮ ಟೀಮ್​ ಇಂಡಿಯಾ ಕೊನೆಯ 6 ಓವರ್​ಗಳಲ್ಲಿ ಕೇವಲ 40 ರನ್​ಗಳಿಸಿತು. ಅಂತಿಮವಾಗಿ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 202 ರನ್​ ಕಲೆ ಹಾಕಿತು.

Latest News

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ನವದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ 10 ಗ್ರಾಂ ಚಿನ್ನದ ಧಾರಣೆಯು ಮತ್ತೆ

Adhar Card Loan: 50 ಸಾವಿರ ರೂಪಾಯಿವರೆಗೆ ಯಾವುದೇ ಶ್ಯೂರಿಟಿ ಇಲ್ಲದೆ ಪಡೆಯಲು ಅವಕಾಶ!

Adhar Card Loan: 50 ಸಾವಿರ ರೂಪಾಯಿವರೆಗೆ ಯಾವುದೇ ಶ್ಯೂರಿಟಿ ಇಲ್ಲದೆ ಪಡೆಯಲು ಅವಕಾಶ!

Adhar Card Loan: ನಿಮಗೆ ತಕ್ಷಣ ಹಣದ ಅವಶ್ಯಕತೆ ಇದೆಯಾ? ಶ್ಯೂರಿಟಿ ಇಲ್ಲದೆ ಸಾಲ

ಸಿ.ಎಲ್.ಬಿರಾದಾರ ಅಧ್ಯಕ್ಷ, ಜಿ.ಬಿ.ಪಾಟೀಲ್ ಉಪಾಧ್ಯಕ್ಷ; ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್‌ಗೆ ಹೊಸಬರ ಆಯ್ಕೆ

ಸಿ.ಎಲ್.ಬಿರಾದಾರ ಅಧ್ಯಕ್ಷ, ಜಿ.ಬಿ.ಪಾಟೀಲ್ ಉಪಾಧ್ಯಕ್ಷ; ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್‌ಗೆ ಹೊಸಬರ ಆಯ್ಕೆ

ಮುದ್ದೇಬಿಹಾಳ : ಅನಿರೀಕ್ಷಿತ ಫಲಿತಾಂಶವನ್ನು ಇಲ್ಲಿನ ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್‌ನ ನೂತನ

ಯಾರಿಗೆ ಒಲಿಯಲಿದೆ ಅಧ್ಯಕ್ಷ ಪಟ್ಟ ?;                                                                           ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಹೊಸಬರ ಆಯ್ಕೆ..?

ಯಾರಿಗೆ ಒಲಿಯಲಿದೆ ಅಧ್ಯಕ್ಷ ಪಟ್ಟ ?; ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಹೊಸಬರ ಆಯ್ಕೆ..?

ಮುದ್ದೇಬಿಹಾಳ : ಪಟ್ಟಣದ ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ

Jio: ಕೇವಲ ₹601 ವರ್ಷಪೂರ್ತಿ free 5G ಯೋಜನೆ

Jio: ಕೇವಲ ₹601 ವರ್ಷಪೂರ್ತಿ free 5G ಯೋಜನೆ

Jio: ₹601 5G ರೀಚಾರ್ಜ್ ಯೋಜನೆಯು Jio ಬಳಕೆದಾರರಿಗೆ, ವಿಶೇಷವಾಗಿ ಇಡೀ ವರ್ಷಕ್ಕೆ ಅನಿಯಮಿತ 5G ಡೇಟಾವನ್ನು ಬಯಸುವವರಿಗೆ ಆಕರ್ಷಕ ಕೊಡುಗೆಯಾಗಿದೆ. Jio ₹601 5G ರೀಚಾರ್ಜ್ ಯೋಜನೆ ಮುಖ್ಯಾಂಶಗಳು ವೆಚ್ಚ : ಒಂದು ವರ್ಷಕ್ಕೆ ₹601.ಪ್ರಯೋಜನಗಳು : 12 ತಿಂಗಳವರೆಗೆ ಅನಿಯಮಿತ 5G ಡೇಟಾ.ಅರ್ಹತೆ : Jio 5G ಸಿಮ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ.ವಿನಾಯಿತಿಗಳು : 4G ಸಿಮ್ ಬಳಕೆದಾರರಿಗೆ ಅನ್ವಯಿಸುವುದಿಲ್ಲ. Join Our Telegram: https://t.me/dcgkannada ಈ

RRB GROUP D RECRUITMENT ರೈಲ್ವೆ ಇಲಾಖೆಯಲ್ಲಿ 32,000 ಹುದ್ದೆಗಳ ನೇಮಕಾತಿ

RRB GROUP D RECRUITMENT ರೈಲ್ವೆ ಇಲಾಖೆಯಲ್ಲಿ 32,000 ಹುದ್ದೆಗಳ ನೇಮಕಾತಿ

RRB GROUP D RECRUITMENT: ಭಾರತೀಯ ರೈಲ್ವೆ ಇಲಾಖೆಯು ಬರೋಬ್ಬರಿ 32 ಸಾವಿರ ಗ್ರೂಪ್ ಡಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ. ಈ ಕುರಿತು ಶಾರ್ಟ್ ನೋಟಿಫಿಕೇಶನ್ ಬಿಡುಗಡೆ ಮಾಡಿದ್ದು, ಈ ಹುದ್ದೆಗಳಿಗೆ SSLC ಪಾಸಾದ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು. Join Our Telegram: https://t.me/dcgkannada ಆರಂಭಿಕ ವೇತನವು 18000 ರೂ. ಇರುತ್ತದೆ. ಸದ್ಯದಲ್ಲಿಯೇ ಅರ್ಜಿ ಸ್ವೀಕೃತಿಯು ಆರಂಭವಾಗಲಿದೆ. ನಂತರ ಪರೀಕ್ಷೆ ದಿನಾಂಕವನ್ನು ಬಿಡುಗಡೆ ಮಾಡಲಾಗುತ್ತದೆ. 2024 ನೇ