ಮುದ್ದೇಬಿಹಾಳ : ಇಲ್ಲಿಗೆ ಸಮೀಪದ ನಾಗರಬೆಟ್ಟದ ಗುಡ್ಡದ ಹತ್ತಿರ ಇರುವ ಆಕ್ಸ್ಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಆಕ್ಸ್ಫರ್ಡ್ ಪಾಟೀಲ್ಸ್ ಸೈನ್ಸ್ ಪಿಯು ಕಾಲೇಜು ವತಿಯಿಂದ ಫೆ.8ರಂದು ಮಧ್ಯಾಹ್ನ 12ಕ್ಕೆ
ಬಾಗಲಕೋಟೆ ನವನಗರದ ಕಾಳಿದಾಸ ವೃತ್ತದ ಹತ್ತಿರ ಇರುವ ಕಾಳಿದಾಸ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಮೊದಲ ಬಾರಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ‘ಆಕ್ಸ್ಫರ್ಡ್ ಪಾಟೀಲ್ಸ್ ಟ್ಯಾಲೆಂಟ್ ಸರ್ಚ್ ಎಕ್ಸಾಮ್-2026’ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಆಡಳಿತಾಧಿಕಾರಿ ಅಮಿತಗೌಡ ಎಂ.ಪಾಟೀಲ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಪಠ್ಯಕ್ರಮ,ಐಸಿಎಸ್‌ಇ, ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಓದುತ್ತಿರುವ ಕನ್ನಡ ಮತ್ತು ಆಂಗ್ಲ ಮಾಧ್ಯಮದವರಿಗೆ ಈ ಸ್ಪರ್ಧಾಪರೀಕ್ಷೆ ನಡೆಯುತ್ತದೆ. ವಿಜೇತರಿಗೆ ಪ್ರಥಮ 75,000 ರೂ., ದ್ವಿತೀಯ 50,000 ರೂ., ತೃತೀಯ 30,000 .ನಾಲ್ಕನೇ ಬಹುಮಾನ 15,000, ಐದನೇ ಬಹುಮಾನ 10,000 ,ಆರನೇ ಬಹುಮಾನ 5,000 ರೂ. ಬಹುಮಾನ ನೀಡಲಾಗುತ್ತದೆ. ಇದಲ್ಲದೆ 1-6 ಸ್ಥಾನಗಳ ನಂತರ ಹೆಚ್ಚು ಅಂಕ ಗಳಿಸುವ ಮೊದಲ 10 ವಿದ್ಯಾರ್ಥಿಗಳಿಗೆ ತಲಾ 1000 ರೂ. ಸಮಾಧಾನಕರ ಬಹುಮಾನ ನೀಡಲಾಗುತ್ತದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ತಮ್ಮ ಶಾಲೆಯ ಐಡಿ ಕಾರ್ಡ್ ಅಥವಾ ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು. ಆಸಕ್ತರು ತಮ್ಮ ಹೆಸರು ನೋಂದಾಯಿಸಲು ವಿದ್ಯಾರ್ಥಿ ಹೆಸರು- ತರಗತಿ-ಶಾಲೆ-ವಿಳಾಸ-ಮೊಬೈಲ್ ನಂಬರ್ ಮಾಹಿತಿ ಎಸ್‌ಎಂಎಸ್ ಸಂದೇಶದ ಮೂಲಕ ಮೊ.9380095756 , 7483147040, 8310035858, 8971769144 ಸಂಖ್ಯೆ ಸಂಪರ್ಕಿಸಬೇಕು ಎಂದು ಮಾಹಿತಿ ನೀಡಿದ್ದಾರೆ.
ಪರೀಕ್ಷೆ ದಿನದಂದೇ ವಿದ್ಯಾರ್ಥಿಗಳು ನೇರವಾಗಿ ಪರೀಕ್ಷಾ ಸ್ಥಳಕ್ಕೆ ಬಂದು ಹೆಸರು ನೋಂದಾಯಿಸಲು ಅವಕಾಶವಿದೆ. ಅಂದು ಬೆಳಗ್ಗೆ 10 ಗಂಟೆಗೂ ಮುನ್ನ ಪರೀಕ್ಷಾ ಸ್ಥಳಕ್ಕೆ ಆಗಮಿಸಬೇಕು ಎಂದು ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಸೈನ್ಸ್ ಕಾಲೇಜಿನ ಶಾಖೆ : ನಾಗರಬೆಟ್ಟ ಆಕ್ಸ್ಫರ್ಡ್ ಪಾಟೀಲ್ಸ್ ಪದವಿ ಪೂರ್ವ ವಿಜ್ಞಾನ ಕಾಲೇಜಿನ ನೂತನ ಶಾಖೆಯನ್ನು ಬಾಗಲಕೋಟೆ ನಗರದಲ್ಲಿ ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ್, ಆಡಳಿತಾಧಿಕಾರಿ ಅಮೀತಗೌಡ ಪಾಟೀಲ ತಿಳಿಸಿದ್ದಾರೆ.





