HEBBAL PUBLICITY
ಮುದ್ದೇಬಿಹಾಳ : ಪ್ರತಿಷ್ಠಿತ ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಚುನಾವಣೆಯಲ್ಲಿ ಮತ್ತೆ ಹಳೆಯ ಪೆನಲ್‌ಗೆ ಭರ್ಜರಿ ಗೆಲುವು ದೊರಕಿದ್ದು ಬ್ಯಾಂಕಿನ ಮತದಾರರು ಓಲ್ಡ್ ಈಸ್ ಗೋಲ್ಡ್ ಪೆನಲ್‌ಗೆ ಶೇಂಗಾ ಹೋಳಿಗೆಯ ಸಿಹಿ ನೀಡಿದ್ದಾರೆ.
ಪಟ್ಟಣದ ಹೇಮರಡ್ಡಿ ಮಲ್ಲಮ್ಮ ಶಾಲೆಯಲ್ಲಿ ರವಿವಾರ ನಡೆದ ಮತದಾನ ಪ್ರಕ್ರಿಯೆ ತೀವ್ರ ಪೊಲೀಸ್ ಭದ್ರತೆಯಲ್ಲಿ ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ನಡೆಯಿತು.ಸಂಜೆ ಮತ ಎಣಿಕೆ ಆರಂಭಗೊAಡಾಗ ನಿರೀಕ್ಷಿತ ಗೆಲುವಿನ ಆತ್ಮವಿಶ್ವಾಸದಲ್ಲಿದ್ದ ಅಭ್ಯರ್ಥಿಗಳ ಚಿತ್ತ ಫಲಿತಾಂಶದತ್ತ ನೆಟ್ಟಿತ್ತು.
ಒಟ್ಟು ಬ್ಯಾಂಕಿನ 4115 ಮತದಾರರಲ್ಲಿ 2391 ಜನ ತಮ್ಮ ಹಕ್ಕು ಚಲಾಯಿಸಿದ್ದು ಅದರಲ್ಲಿ ಸಾಮಾನ್ಯ ವರ್ಗದ ಏಳು ಸ್ಥಾನಗಳಿಗೆ ಒಂಭತ್ತು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಹಳೆಯ ಪೆನಲ್‌ದಿಂದ ಕಣಕ್ಕಿಳಿದಿದ್ದ ಸಾಮಾನ್ಯ ವರ್ಗದಿಂದ ಪ್ರಭುರಾಜ ಕಲ್ಬುರ್ಗಿ 1333, ಸತೀಶಕುಮಾರ ಓಸ್ವಾಲ್ 1274, ನಿಂಗಪ್ಪ ಚಟ್ಟೇರ 1268, ರಾಜಶೇಖರ ಕರಡ್ಡಿ 1265, ಅಜೀತ ನಾಗಠಾಣ 1113, ಸಂಗನಗೌಡ ಬಿರಾದಾರ 1092, ಚಂದ್ರಶೇಖರ ಸಜ್ಜನ 998 ಅತೀ ಹೆಚ್ಚು ಮತಗಳನ್ನು ಪಡೆದುಕೊಂಡು ಆಯ್ಕೆಯಾದರೆ, ವೆಂಕನಗೌಡ ಪಾಟೀಲ್ 741 , ಸಂಗಪ್ಪ ನಾಶಿ 644, ಮಹಾಂತಗೌಡ ಪಾಟೀಲ್ 344, ಭೀಮನಗೌಡ ಪಾಟೀಲ 341 ಮತಗಳನ್ನು ಪಡೆದುಕೊಂಡು ಸೋಲನುಭವಿಸಿದರು.
ಹಿಂದುಳಿದ ಅ ವರ್ಗದಿಂದ ಚೆನ್ನಪ್ಪಗೌಡ ಬಿರಾದಾರ 1087 ಮತಗಳನ್ನು ಪಡೆದು ಆಯ್ಕೆಯಾದರೆ ರವೀಂದ್ರ ಬಿರಾದಾರ 350, ಪ್ರದೀಪ ಹೂಗಾರ 175, ವಿಜಯಕುಮಾರ ಬಡಿಗೇರ 68 ಮತಗಳನ್ನು ಪಡೆದು ಸೋಲನುಭವಿಸಿದರು. ಹಿಂದುಳಿದ ಬ ವರ್ಗದಿಂದ ಸ್ಪರ್ಧಿಸಿದ್ದ ಗುರುಲಿಂಗಪ್ಪಗೌಡ ಪಾಟೀಲ್ 948 ಮತಗಳನ್ನು ಪಡೆದು ಆಯ್ಕೆಯಾದರೆ ಅವರ ಪ್ರತಿಸ್ಪರ್ಧಿ 820 ಮತಗಳನ್ನು ಪಡೆದು ಸೋಲು ಅನುಭವಿಸಿದರು.
ಒಂದು ಹಂತದಲ್ಲಿ ಈ ವರ್ಗದ ಫಲಿತಾಂಶ ವಿಳಂಬವಾದಾಗ ಹಳೆಯ ಹಾಗೂ ಹೊಸದಾಗಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಲ್ಲಿ ಚಡಪಡಿಕೆ ಕಂಡು ಬಂದಿತು. ನಾಮಪತ್ರ ಹಿಂದಕ್ಕೆ ಪಡೆಯುವ ದಿನದಂದು ಒಟ್ಟು ನಾಲ್ವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಅದರಲ್ಲಿ ಮಹಿಳಾ ವರ್ಗದಿಂದ Vijayalaxmi Budihalamath , ರಕ್ಷಿತಾ ಬಿದರಕುಂದಿ, ಪರಿಶಿಷ್ಟ ಜಾತಿ ವರ್ಗದಿಂದ ಶ್ರೀಕಾಂತ ಚಲವಾದಿ, ಪರಿಶಿಷ್ಟ ಪಂಗಡ ಸ್ಥಾನದಿಂದ ಶ್ರೀಶೈಲ ಪೂಜಾರಿ ಆಯ್ಕೆಯಾಗಿದ್ದರು.
ಚುನಾವಣಾಧಿಕಾರಿ ವಿಜಯಕುಮಾರ ಉತ್ನಾಳ, ಸಹಾಯಕ ಚುನಾವಣಾಧಿಕಾರಿ ಎಸ್.ಜಿ.ಕೂಡಗಿ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿದರಕುಂದಿ, ಸಹಾಯಕ ವ್ಯವಸ್ಥಾಪಕಿ ಸುಮಾ ನಾಗಠಾಣ ಕಾರ್ಯನಿರ್ವಹಿಸಿದರು.
ವಿಜಯೋತ್ಸವ :
ಹಳೆಯ ಪೆನಲ್‌ಗೆ ಭರ್ಜರಿ ಗೆಲುವು ಪಕ್ಕಾ ಆಗುತ್ತಿದ್ದಂತೆ ಹರ್ಷಗೊಂಡ ನೂತನ ಸದಸ್ಯರೆಲ್ಲರೂ ವಿಜಯೋತ್ಸವ ಆಚರಿಸಿದರು.ಪರಸ್ಪರ ಗುಲಾಲು ಎರಚಾಡಿಕೊಂಡು ಒಬ್ಬರನ್ನೊಬ್ಬರು ಎತ್ತಿಕೊಂಡು ಖುಷಿ ಹಂಚಿಕೊAಡರು.ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬ್ಯಾಂಕಿನ ನೂತನ ನಿರ್ದೇಶಕ ಸತೀಶಕುಮಾರ ಓಸ್ವಾಲ್ ಮಾತನಾಡಿ, ಇದು ನಮ್ಮ ಗೆಲುವು ಅಲ್ಲ.ಊರಿನ ಹಿರಿಯರ ಗೆಲುವು.ಅವರ ಆಶೀರ್ವಾದದಿಂದ ಮತ್ತೆ ಬ್ಯಾಂಕಿನ ಚುಕ್ಕಾಣಿ ಹಳೆಯ ಪೆನಲ್‌ಗೆ ಬರುವಂತಾಗಿದೆ.ನಮ್ಮ ಪೆನಲ್‌ದ ಎಲ್ಲ ಅಭ್ಯರ್ಥಿಗಳು ಜಯಭೇರಿ ಸಾಧಿಸಿರುವುದರ ಹಿಂದೆ ಕೆಲಸ ಮಾಡಿರುವ ಎಲ್ಲರಿಗೂ ಅಭಿನಂದಿಸುವುದಾಗಿ ಹೇಳಿದರು.
ಮುಖಂಡ ಎಂ.ಬಿ.ನಾವದಗಿ ಮಾತನಾಡಿ, ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್‌ನ ಚುನಾವಣೆಯಲ್ಲಿ ಆಯ್ಕೆಯಾಗಿರುವ ಎಲ್ಲ ನೂತನ ನಿರ್ದೇಶಕರುಗಳಿಗೆ ಅಭಿನಂದಿಸುತ್ತಾ ಬ್ಯಾಂಕು ಇನ್ನಷ್ಟು ಪ್ರಗತಿಯತ್ತ ಸಾಗುವಂತಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗಣ್ಯರಾದ ಎ.ಗಣೇಶ ನಾರಾಯಣಸ್ವಾಮಿ, ದಾನಪ್ಪ ನಾಗಠಾಣ, ಶರಣು ಸಜ್ಜನ, ಸಿಕಂದರ್ ಜಾನ್ವೇಕರ,ಸುರೇಶಗೌಡ ಪಾಟೀಲ್, ಮಹಾಂತೇಶ ಬೂದಿಹಾಳಮಠ,ಅಶೋಕ ಚಟ್ಟೇರ,ಸತೀಶ ಕುಲಕರ್ಣಿ,ಮುತ್ತಣ್ಣ ಕಡಿ ಹಾಗೂ ನೂತನವಾಗಿ ಆಯ್ಕೆಯಾದ ನಿರ್ದೇಶಕರುಗಳು, ಅವರ ಬೆಂಬಲಿಗರು ಇದ್ದರು.
ಭಾರೀ ಪೊಲೀಸ್ ಭದ್ರತೆ: ಬ್ಯಾಂಕಿನ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಚುನಾವಣೆಗಾಗಿ ಅತೀ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು.ಮತದಾನದ ವೇಳೆ ಪಿಎಸ್‌ಐ ಸಂಜಯ ತಿಪರೆಡ್ಡಿ, ತಾಳಿಕೋಟಿ ಪಿಎಸ್‌ಐ ರಾಮನಗೌಡ ಸಂಕನಾಳ,25ಕ್ಕೂ ಹೆಚ್ಚು ಪೊಲೀಸರು ಭದ್ರತೆ ಉಸ್ತುವಾರಿ ವಹಿಸಿದ್ದರು.
ಕೋರ್ಟ್ ಆದೇಶಕ್ಕೆ ಬದ್ಧರಾಗಿ ಮತಗಳನ್ನು ಅನುಮತಿಪಡೆದುಕೊಂಡು ಬಂದಿದ್ದ 1713 ಮತಗಳ ಫಲಿತಾಂಶವನ್ನು ನ್ಯಾಯಾಲಯದ ಆದೇಶಕ್ಕೆ ಒಳಪಟ್ಟು ಫಲಿತಾಂಶ ಪ್ರಕಟಿಸದೇ ಗೌಪ್ಯವಾಗಿಡಲಾಗಿದೆ ಎಂದು ಚುನಾವಣಾಧಿಕಾರಿ ವಿಜಯಕುಮಾರ ಉತ್ನಾಳ ತಿಳಿಸಿದರು.
ಮತ ಹಾಕುವಲ್ಲಿ ಎಡವಿದ ಗ್ರಾಹಕರು : ಸಾಮಾನ್ಯ ವರ್ಗದಿಂದ 86, ಹಿಂದುಳಿದ ಅ ವರ್ಗದಲ್ಲಿ 274, ಹಿಂದುಳಿದ ಬ ವರ್ಗದಿಂದ 224 ಮತಗಳು ತಿರಸ್ಕೃತಗೊಂಡಿದ್ದು ನೋಡಿದರೆ ಮತ ಚಲಾಯಿಸುವಲ್ಲಿ ಗ್ರಾಹಕರು ಗೊಂದಲಕ್ಕೆ ಒಳಗಾದವರಂತೆ ಕಂಡು ಬಂದಿತು.