ಆನೇಕಲ್: ಪ್ರೇಯಸಿಯ ಜತೆ ಹೈಫೈ ಲೈಫ್ ಕಳೆಯಲು ಮನೆ ಕಳ್ಳತನಕ್ಕೆ ಇಳಿದಿದ್ದ ಪ್ರೇಮಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. (Theft Case)
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada
ಹೌದು, ಹಾಡುಹಗಲೇ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ.
ಆನೇಕಲ್ ತಾಲೂಕಿನ ವಾಬಸಂದ್ರದಲ್ಲಿ ಮನೆ ಕಳ್ಳತನವಾಗಿತ್ತು. ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು, ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಯನ್ನು ಹಿಡಿದಿದ್ದಾರೆ.
ಬಂಧಿತ ಆರೋಪಿಯಿಂದ 8 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಗಣಿ ಸಿ.ಪಿ.ಐ ಮಂಜುನಾಥ್ ನೇತೃತ್ವದಲ್ಲಿ ತಂಡ ರಚನೆ ಮಾಡಿ ಲಕ್ಷ್ಮಣ್ ಅಲಿಯಾಸ್ ಗುನ್ನಿ ಎಂಬಾತನನ್ನು ಬಂಧಿಸಿದೆ.
ಸರ್ಜಾಪುರ ಸಮೀಪದ ಚಿಕ್ಕದಾಸರಹಳ್ಳಿಯ ಲಕ್ಷ್ಮಣ್ ವಿರುದ್ಧ ಈಗಾಗಲೇ ಬನ್ನೇರುಘಟ್ಟ ,ಜಿಗಣಿ, ಸರ್ಜಾಪುರ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ. ಲಕ್ಷ್ಮಣನ್ನು ಬಂಧಿಸಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ಪ್ರೇಯಸಿ ಜತೆ ಲೈಫ್ ಎಂಜಾಯ್ ಮಾಡಲು ಕಳ್ಳತನ ಮಾಡುತ್ತಿದ್ದೆ ಎಂದು ಲಕ್ಷ್ಮಣ್ ಹೇಳಿಕೆ ನೀಡಿದ್ದಾನೆ. ಕದ್ದ ಚಿನ್ನ ಬೆಳ್ಳಿ ಮಾರಾಟ ಮಾಡಿ ಪ್ರೇಯಸಿಗೆ ಖರ್ಚು ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ: BREAKING : ವಿಶ್ವದ್ಯಾಂತ ‘X’ ಸರ್ವರ್ ಡೌನ್, ಬಳಕೆದಾರರ ಪರದಾಟ
ಸದ್ಯ, ಆರೋಪಿಯನ್ನು ಬಂಧಿಸಿ ಪೊಲೀಸರು ಜೈಲಿಗೆ ಅಟ್ಟಿದ್ದಾರೆ.