ಬೆಂಗಳೂರು: ಪ್ರಯಾಣಿಕರ ದಟ್ಟಣೆ ನಿವಾರಣೆಗೆ ನೈಋತ್ಯ ರೈಲ್ವೆಯು ಯಶವಂತಪುರ-ಬೆಳಗಾವಿ ಮತ್ತು ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್- ವಿಜಯಪುರ ನಿಲ್ದಾಣ ನಡುವೆ ರೈಲುಗಳು (Train transport) ಸಂಚರಿಸುತ್ತಿದೆ.
Join Our Telegram: https://t.me/dcgkannada
ಯಶವಂತಪುರ-ಬೆಳಗಾವಿ -ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು (06555) ಸೆ.5ರಂದು ಯಶವಂತಪುರದಿಂದ ಸಂಜೆ 7.30ಕ್ಕೆ ಹೊರಟು, ಮರುದಿನ ಬೆಳಗ್ಗೆ 7.15ಕ್ಕೆ ಬೆಳಗಾವಿ ತಲುಪಲಿದೆ. ಹಿಂದಿರುಗುವ ರೈಲು (06556) ಸೆ.6ರಂದು ಬೆಳಗಾವಿಯಿಂದ ಬೆಳಗ್ಗೆ 8.45ಕ್ಕೆ ಹೊರಟು, ರಾತ್ರಿ 8ಕ್ಕೆ ಯಶವಂತಪುರ ತಲುಪಲಿದೆ.
ಯಶವಂತಪುರ-ಬೆಳಗಾವಿ-ಯಶವಂತಪುರ ವಿಶೇಷ ಎಕ್ಸ್ ಪ್ರೆಸ್ (06557) ಸೆ.6ರಂದು ಯಶವಂತಪುರದಿಂದ ರಾತ್ರಿ 10.15ಕ್ಕೆ ಹೊರಟು, ಮರುದಿನ ಬೆಳಗ್ಗೆ 10.15ಕ್ಕೆ ಬೆಳಗಾವಿ ತಲುಪಲಿದೆ. ಸೆ.8ರಂದು (06558) ರೈಲು ಬೆಳಗಾವಿಯಿಂದ ಸಂಜೆ 5.30ಕ್ಕೆ ಹೊರಟು, ಮರುದಿನ ಬೆಳಗ್ಗೆ 4.30ಕ್ಕೆ ಯಶವಂತಪುರ ತಲುಪಲಿದೆ.
ಇದನ್ನೂ ಓದಿ: Suicide case: ಪತ್ನಿ ಕೊಂದು ಪರಾರಿ ಆಗಿದ್ದ ಪತಿರಾಯ.. ನೇಣು ಬಿಗಿದು ಆತ್ಮಹತ್ಯೆ
ಎಸ್‌ಎಂವಿಟಿ ಬೆಂಗಳೂರು-ವಿಜಯ ಪುರ-ಎಸ್‌ಎಂವಿಟಿ ಬೆಂಗಳೂರು ವಿಶೇಷ ಎಕ್ ಪ್ರೆಸ್ ರೈಲು ಸೆಪ್ಟೆಂಬರ್ 5, 7ರಂದು ಎಸ್‌ಎಂವಿಟಿ ಬೆಂಗಳೂರಿನಿಂದ (06577) ರಾತ್ರಿ 9ಕ್ಕೆ ಹೊರಟು, ಮರುದಿನ ಮಧ್ಯಾಹ್ನ 2.5ಕ್ಕೆ ವಿಜಯಪುರ ತಲುಪಲಿದೆ. (Train transport)
ಹಿಂದಿರುಗುವಾಗ ರೈಲು (06578) ಸೆ. 6, 8 ವಿಜಯಪುರದಿಂದ ಸಂಜೆ 7ಕ್ಕೆ ಹೊರಟು, ಮರುದಿನ ಬೆಳಗ್ಗೆ 11.15ಕ್ಕೆ ಎಸ್‌ಎಂವಿಟಿ ತಲುಪಲಿದೆ. ಇನ್ನು, ಪ್ರಾಯೋಗಿಕವಾಗಿ ಮಲ್ಲೇಶ್ವರ ನಿಲ್ದಾಣದಲ್ಲಿ ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ರೈಲಿಗೆ (16228) ಮೂರು ತಿಂಗಳು ಅಕ್ಟೋಬರ್ 22ರಿಂದ ಜನವರಿ 2025 ರವರೆಗೆ 1 ನಿಮಿಷ ತಾತ್ಕಾಲಿಕ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.