ಕೊಪ್ಪಳ: ತುಂಗಭದ್ರಾ ಡ್ಯಾಂನ (Tungabhadra dam) 19ನೇ ಗೇಟ್ ಚೈನ್ ಲಿಂಕ್ ಕಟ್ ಆಗಿ ನೀರಿನಲ್ಲಿ ಕೊಚ್ಚಿ ಹೋಗಿರುವ ಹಿನ್ನೆಲೆಯಲ್ಲಿ ಗೇಟ್ ಅಳವಡಿಕೆ ಕಾರ್ಯ ನಡೆದಿದ್ದು, ಅಚಾರ್ತುವೊಂದು ಸಂಭವಿಸಿದೆ.
Join Our Telegram: https://t.me/dcgkannada
ಹೌದು, ಕೊಪ್ಪಳ ಜಿಲ್ಲೆಯ ಮುನಿರಾಬಾದ್ ತುಂಗಭದ್ರಾ ಡ್ಯಾಂ (Tungabhadra dam) ಬಳಿ ಗೇಟ್ ಅಳವಡಿಕೆ ನಡೆಸಲಾಗುತ್ತಿದೆ. ತಜ್ಞರು ಹಾಗೂ ಸಿಬ್ಬಂದಿ ಟ್ರಕ್ ಮೂಲಕವಾಗಿ ಟಿಬಿ ಡ್ಯಾಂ ಬಳಿ ಬೃಹತ್ ಗೇಟ್ ಸಾಗಿಸುವಾಗ ಅವಘಡ ಸಂಭವಿಸಿದೆ.
ಟ್ರಕ್ ನಿಂದ ಗೇಟ್ ಇಳಿಸುತ್ತಿದ್ದ ವೇಳೆ ಏಕಾಏಕಿ ಬ್ಯಾಲೆನ್ಸ್ ತಪ್ಪಿದೆ. ಗೇಟ್ ಅನ್ನು ಡ್ಯಾಂನ ಮೇಲ್ಭಾಗಕ್ಕೆ ಬೆಲ್ಟ್ ಕಟ್ಟಿ ಎತ್ತುವಾಗ ಒಮ್ಮೆಲೆ ಬ್ಯಾಲೆನ್ಸ್ ತಪ್ಪಿದೆ. ಬಳಿಕ ಸಿಬ್ಬಂದಿ ನಿಧಾನವಾಗಿ ಗೇಟ್ ಇಳಿಸಿದ್ದಾರೆ. ಯಾವುದೇ ಅಪಾಯ ಸಂಭವಿಸಿಲ್ಲ.
ಇದನ್ನೂ ಓದಿ: ಇದಕ್ಕೆ ಬರೀ PDO ಮಾತ್ರವಲ್ಲ.. ಗ್ರಾಪಂ ಅಧ್ಯಕ್ಷರೂ ಹೊಣೆ!
ಟಿಬಿ ಡ್ಯಾಂಗೆ ಗೇಟ್ ಅಳವಡಿಸುವುದೇ ಒಂದು ದೊಡ್ಡ ಚಾಲೇಂಜ್. ಇನ್ನು, ಮೂರು ದಿನಗಳಲ್ಲಿ ಶುಭ ಸುದ್ದಿ ಕೊಡುತ್ತೇವೆ ಎಂದು ತಜ್ಞರು ತಿಳಿಸಿದ್ದಾರೆ ಎಂದು ವರದಿಯಾಗಿದೆ.