ಕೊಪ್ಪಳ: ತುಂಗಭದ್ರಾ ಜಲಾಶಯದ (Tungabhadra dam) 19ನೇ ಕ್ರಸ್ಟ್ ಗೇಟ್ ನೀರಿನಲ್ಲಿ ಕೊಚ್ಚಿ ಹೋದ ಹಲವು ದಿನಗಳ ಬಳಿಕ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯಕ್ಕೆ ಮೊದಲ ಹಂತದ ಯಶಸ್ಸು ಸಿಕ್ಕಿದೆ.
ಹೌದು, ಗೇಟ್ ಡಿಸೈನ್ ತಜ್ಞ ಕನ್ಹಯ್ಯ ನಾಯ್ಡು ನೇತೃತ್ವದಲ್ಲಿ ಆಪರೇಷನ್ ತುಂಗಭದ್ರಾ ಡ್ಯಾಂನ ಒಂದನೇ ಸ್ಟಾಪ್ ಲಾಗ್ ಗೇಟ್ ಎಲಿಮೆಂಟ್ ಅಳವಡಿಕೆ ಕಾರ್ಯ ಯಶಸ್ವಿಯಾಗಿದೆ.
Join Our Telegram: https://t.me/dcgkannada
ಕನ್ಹಯ್ಯ ನಾಯ್ಡು ನೇತೃತ್ವದಲ್ಲಿ ಸ್ಟಾಪ್ ಲಾಗ್ ಗೇಟ್ ಅಳವಡಿಸಲಾಗಿದೆ. ಒಂದನೇ ಗೇಟ್ ಅಳವಡಿಕೆ ಯಶಸ್ವಿಯಾಗಿದ್ದು, ಮತ್ತೊಂದು ಸ್ಟಾಪ್ ಲಾಗ್ ಗೇಟ್ ಅಳವಡಿಸಲು ಕ್ರಮ ವಹಿಸಲಾಗಿದೆ ಎಂದು ತಿಲಿದು ಬಂದಿದೆ.
ಎರಡು ದಿನಗಳ ಶ್ರಮದಿಂದ ಮೊದಲ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಯಶಸ್ವಿಯಾದ ಹಿನ್ನೆಲೆ ತುಂಗಭದ್ರಾ ಜಲಾಶಯದ ಮೇಲೆ ಸಂಭ್ರಮಾಚರಣೆ ನಡೆಸಲಾಗಿದೆ. ಈ ವೇಳೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ್ ಮೊದಲಾದವರಿದ್ದರು. ಉಳಿದ ಎಲಿಮೆಂಟ್ ಗಳನ್ನು ಅಳವಡಿಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ವಿದ್ಯುತ್ ಪ್ರವಹಿಸಿ ಹೊಲದಲ್ಲಿ ದಂಪತಿಗಳ ದಾರುಣ ಸಾವು!
Tungabhadra dam: ಕಟ್ ಆದ ಗೇಟ್ ಚೈನ್ ಅಳವಡಿಸುವಾಗ ಅವಘಡ!
ಕೊಪ್ಪಳ: ತುಂಗಭದ್ರಾ ಡ್ಯಾಂನ 19ನೇ ಗೇಟ್ ಚೈನ್ ಲಿಂಕ್ ಕಟ್ ಆಗಿ ನೀರಿನಲ್ಲಿ ಕೊಚ್ಚಿ ಹೋಗಿರುವ ಹಿನ್ನೆಲೆಯಲ್ಲಿ ಗೇಟ್ ಅಳವಡಿಕೆ ಕಾರ್ಯ ನಡೆದಿದ್ದು, ಅಚಾರ್ತುವೊಂದು ಸಂಭವಿಸಿತ್ತು.
ಹೌದು, ಕೊಪ್ಪಳ ಜಿಲ್ಲೆಯ ಮುನಿರಾಬಾದ್ ತುಂಗಭದ್ರಾ ಡ್ಯಾಂ ಬಳಿ ಗೇಟ್ ಅಳವಡಿಕೆ ನಡೆಸಲಾಗುತ್ತಿದೆ. ತಜ್ಞರು ಹಾಗೂ ಸಿಬ್ಬಂದಿ ಟ್ರಕ್ ಮೂಲಕವಾಗಿ ಟಿಬಿ ಡ್ಯಾಂ ಬಳಿ ಬೃಹತ್ ಗೇಟ್ ಸಾಗಿಸುವಾಗ ಅವಘಡ ಸಂಭವಿಸಿತ್ತು.
ಟ್ರಕ್ ನಿಂದ ಗೇಟ್ ಇಳಿಸುತ್ತಿದ್ದ ವೇಳೆ ಏಕಾಏಕಿ ಬ್ಯಾಲೆನ್ಸ್ ತಪ್ಪಿದೆ. ಗೇಟ್ ಅನ್ನು ಡ್ಯಾಂನ ಮೇಲ್ಭಾಗಕ್ಕೆ ಬೆಲ್ಟ್ ಕಟ್ಟಿ ಎತ್ತುವಾಗ ಒಮ್ಮೆಲೆ ಬ್ಯಾಲೆನ್ಸ್ ತಪ್ಪಿದೆ. ಬಳಿಕ ಸಿಬ್ಬಂದಿ ನಿಧಾನವಾಗಿ ಗೇಟ್ ಇಳಿಸಿದ್ದಾರೆ. ಯಾವುದೇ ಅಪಾಯ ಸಂಭವಿಸಿಲ್ಲ.
ಟಿಬಿ ಡ್ಯಾಂಗೆ ಗೇಟ್ ಅಳವಡಿಸುವುದೇ ಒಂದು ದೊಡ್ಡ ಚಾಲೇಂಜ್. ಇನ್ನು, ಮೂರು ದಿನಗಳಲ್ಲಿ ಶುಭ ಸುದ್ದಿ ಕೊಡುತ್ತೇವೆ ಎಂದು ತಜ್ಞರು ತಿಳಿಸಿದ್ದರು. ಈಗ ಮೊದಲು ಗೇಟ್ ಅಳವಡಿಸಿದ್ದು, ಶೀರ್ಘದಲ್ಲಿಯೇ ಪೂರ್ಣ ಪ್ರಮಾಣದಲ್ಲ ಕಾಮಗಾರಿ ನಡೆಸಲಾಗುವುದು ಎಂದು ವರದಿಯಾಗಿದೆ.