ಮುದ್ದೇಬಿಹಾಳ : ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸೇನೆಯಿಂದ ತುರ್ತು ಕರೆ ಬಂದ ಹಿನ್ನೆಲೆಯಲ್ಲಿ ತಾಲ್ಲೂಕಿನ ಹುಲ್ಲೂರ ತಾಂಡಾದ ಎಂಟು ಯೋಧರು ಶನಿವಾರ ಮರಳಿ ದೇಶ ಸೇವೆಗೆ ಮರಳಿದರು.
ರಜೆಯ ಮೇಲೆ ತಮ್ಮ ಊರುಗಳಿಗೆ ಬಂದಿದ್ದ ಯೋಧರನ್ನು ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು. ದೇಶಕ್ಕಿಂತ ದೊಡ್ಡದು ಯಾವುದು ಇಲ್ಲ. ದೇಶ ಉಳಿದರೆ ನಾವು, ನಮ್ಮ ಕುಟುಂಬ ಇರಲು ಸಾಧ್ಯ. ಹೀಗಾಗಿ ಸೇನೆಯ ಕರೆಗೆ ತಕ್ಷಣ ಸೇವೆಗೆ ತೆರಳುತ್ತಿದ್ದೇವೆ ಎಂದು ಯೋಧ ಮುತ್ತಣ್ಣ ಲಮಾಣಿ ತಿಳಿಸಿದರು.
ಯೋಧರಾದ ಆನಂದ ರಾಠೋಡ, ಸುನೀಲ ರಾಠೋಡ, ವಿಠ್ಠಲ ಚವ್ಹಾಣ, ಆನಂದ ಚವ್ಹಾಣ, ರಾಜು ರಾಠೋಡ ಅವರಿಗೆ ದೇವಸ್ಥಾನದ ಅರ್ಚಕ ಗುರುರಾಜ ಆಚಾರ್ಯ, ಗ್ರಾಪಂ ಸದಸ್ಯ ಶಿವಾನಂದ ಲಮಾಣಿ, ಯೋಧರ ಹಣೆಗಳಿಗೆ ಸಿಂಧೂರ (ತಿಲಕ) ಹಚ್ಚಿ ಪಾಕಿಗಳಿಗೆ ತಕ್ಕ ಪಾಠ ಕಲಿಸಿ ಬನ್ನಿ ಎಂದು ಶುಭ ಹಾರೈಸಿದರು.
ಗ್ರಾಮ ಪಂಚಾಯತ್ ಮಾಜಿ ಸದಸ್ಯ ಥಾವರಪ್ಪ ಜಾಧವ, ಮಾಜಿ ಸೈನಿಕ ನಾನಪ್ಪ ನಾಯಕ, ಥಾವರಪ್ಪ ರಾಠೋಡ, ಶೇಖರ ನಾಯಕ, ಸೋಮಸಿಂಗ ಲಮಾಣಿ, ಗುಂಡಪ್ಪ ಚವ್ಹಾಣ, ಚಂದ್ರಪ್ಪ ಚವ್ಹಾಣ, ಸೇವಾಲಾಲ ಚವ್ಹಾಣ, ಉಮೇಶ ರಾಠೋಡ, ನಾರಾಯಣ ನಾಯಕ ಮಲ್ಲು ಚವ್ಹಾಣ, ಮನೋಹರ ರಾಠೋಡ ಸೇರಿದಂತೆ ಅನೇಕರು ಇದ್ದರು.