Vachana darshana Minister MB Patil received request from Vijayapur Pragatipara organization

Vachana darshana: ‘ವಚನ ದರ್ಶನ’ ಬಿಡುಗಡೆ ಬಸವ ನಾಡಿನಲ್ಲಿ‌ ವಿರೋಧ

Vachana darshana: ‘ವಚನ ದರ್ಶನ’ ಬಿಡುಗಡೆ ಬಸವ ನಾಡಿನಲ್ಲಿ‌ ವಿರೋಧ

ವಿಜಯಪುರ :ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ವಿರೂಪಗೊಳಿಸಿ, ಶರಣ ಸಂಸ್ಕತಿಯನ್ನು ನಾಶಮಾಡುವ ದುರುದ್ದೇಶದಿಂದ ಪ್ರಕಟಗೊಂಡಿರುವ ಆರೆಸ್ಸೆಸ್ ಪ್ರಣೀತ ‘ವಚನ ದರ್ಶನ’ (Vachana darshana) ಪುಸ್ತಕ ಬಿಡುಗಡೆಗೆ ವಿಜಯಪುರದಲ್ಲಿ ತೀವ್ರ ಪ್ರತಿರೋಧ ವ್ಯಕ್ತವಾಗಿದೆ.

ಶರಣ ಸಂಸ್ಕೃತಿ ರಕ್ಷಣಾ ಸಮಿತಿಯ ಸದಸ್ಯರು ಜಿಲ್ಲಾ ಉಸ್ತವಾರಿ ಸಚಿವರಾದ ಡಾ. ಎಂ.ಬಿ. ಪಾಟೀಲರು ಹಾಗೂ ಜಿಲ್ಲಾ ಆಪ್ತ ಜಿಲ್ಲಾಧಿಕಾರಿಗಳಿಗೆ ಮನವಿಯೊಂದನ್ನು ನೀಡಿದ್ದು, ಈ ಪುಸ್ತಕ (Vachana darshana) ಬಿಡುಗಡೆ ಕಾರ್ಯಕ್ರಮಕ್ಕೆ ಅನುಮತಿ ಕೊಡಬಾರದು ಎಂದು ವಿಜಯಪುರದ ಪ್ರಗತಿಪರ ಒಕ್ಕೂಟವು ಆಗ್ರಹಿಸಿದ್ದಾರೆ.

Join Out Telegram: https://t.me/dcgkannada

ಈ ಪುಸ್ತಕವು ಬಸವಣ್ಣನವರ ಸಿದ್ಧಾಂತಕ್ಕೆ ವಿರುದ್ಧವಾಗಿದ್ದು, ಇದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವಂತಹ ಕೃತಿಯಾಗಿದೆ ಎಂದು ಹೇಳಿದ್ದಾರೆ.

ಮನವಿ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: BPL Card: ಬಿಪಿಎಲ್ ಕಾರ್ಡ್, ಗ್ಯಾರಂಟಿ ಯೋಜನೆ ರದ್ದು? ಸಚಿವ ಎಂ.ಬಿ.ಪಾಟೀಲ ಕ್ಲಾರಿಟಿ

ಶರಣ ಸಂಸ್ಕೃತಿ ರಕ್ಷಣಾ ಸಮಿತಿಯ ಸದಸ್ಯರಾದ ಕಲ್ಲಪ್ಪ ಕಡೆಚೂರ, ಹನಮಂತ ಚಿಂಚಿಲಿ, ಜಂಬುನಾಥ ಕಂಚಾಣಿ, ಬಸವರಾಜ ಕೊಂಡಗೊಳಿ, ಮಿಲಿಂದ ಚೆಂಚಲಕರ, ಚಂದ್ರಶೇಖರ ಘಂಟೆಪ್ಪಗೋಳ, ಡಾ. ರವಿ ಬಿರಾದಾರ, ಶಾಂತವೀರ ಥಾಲಬಾವಡಿ, ಮೋಹನ ಕಟ್ಟಿಮನಿ, ರಾಜೇಶ್ವರಿ ಯರನಾಳ, ರಾಜಶೇಖರ ಯರನಾಳ, ಅಕ್ಷಯಕುಮಾರ ಅಜಮನಿ, ಅನಿಲ ಹೊಸಮನಿ, ಪ್ರಭುಗೌಡ ಪಾಟೀಲ, ಚೆನ್ನು ಕಟ್ಟಿಮನಿ, ನಂದಕುಮಾರ ಗೊಬ್ಬೂರ, ದಾನೇಶ್ ಆವಟಿ, ಡಾ ಮಹಾಂತೇಶ್ ಮಡಿಕೇಶ್ವರ್ ,ಅಕ್ಷಯ ,ಈರಣ್ಣ ತೊಂಡೀಕಟ್ಟಿ , ಬಸವರಾಜ ಕಾರಕುರ ಮುಂತಾದವರು ಈ ಸಮಯದಲ್ಲಿ ಇದ್ದರು.

Muddebihal: ರೈತರ ಆರ್ಥಿಕ ಬಲವರ್ಧನೆಗೆ ಸಹಕಾರಿಗಳು ಶ್ರಮಿಸಲಿ: ಸ್ವಾಮೀಜಿ

ಮುದ್ದೇಬಿಹಾಳ : ಶರಣ ವೀರೇಶ್ವರರ ಹೆಸರಿನಲ್ಲಿ ಸ್ಥಾಪಿತವಾದ ಬ್ಯಾಂಕ್‌ನಿಂದ ರೈತರು, ವ್ಯಾಪಾರಿಗಳ ಆರ್ಥಿಕ ಚೈತನ್ಯಕ್ಕೆ ಸಹಕಾರ ನೀಡುವ ಕಾರ್ಯ ಮುಂದೆ ಸಾಗಲಿ ಎಂದು ಉಪ್ಪಿನಬೆಟಗೇರಿ ವಿರುಪಾಕ್ಷ ಸ್ವಾಮೀಜಿ ಹೇಳಿದರು.

ಪಟ್ಟಣದ ದಾನೇಶ್ವರಿ ಪೆಟ್ರೋಲ್ ಹಿಂಭಾಗದಲ್ಲಿ ಬುಧವಾರ ನಾಲತವಾಡದ ಶರಣ ವೀರೇಶ್ವರ ಬ್ಯಾಂಕ್ ನೂತನ ಶಾಖೆಯ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಿವಯೋಗಮಂದಿರದಲ್ಲಿ ಶರಣ ವೀರೇಶ್ವರರ ಪುತ್ಥಳಿ ಅವರ ಹೆಸರಿನ ಉದ್ಯಾನವನ ಇದೆ. ಅಲ್ಲಿ ಜಂಗಮ ವಟುಗಳಿಗೆ ಪಾಠ ಶಾಲೆಯಾಗಿದ್ದು ಶ್ರೇಷ್ಠ ಶರಣರ ಹೆಸರಿನಲ್ಲಿ ಬ್ಯಾಂಕು ಉತ್ತಮ ಅಭಿವೃದ್ಧಿ ಹೊಂದಿದೆ ಎಂದರು.

ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್ ಮಾತನಾಡಿ, ದಿ.ಬಿ.ಎಂ.ಅಂಗಡಿ ಅವರು ಹುಟ್ಟು ಹಾಕಿದ ಬ್ಯಾಂಕು ಇಂದು ಹೆಮ್ಮರವಾಗಿ ಬೆಳೆದಿದೆ.ಬ್ಯಾಂಕುಗಳ ಆರ್ಥಿಕ ಸದೃಢತೆಗೆ ಗ್ರಾಹಕರ ನಿಯಮಿತ ವ್ಯವಹಾರ ಆಧಾರವಾಗಿದೆ ಎಂದರು.

ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ,ಬ್ಯಾಂಕ್ ಅಧ್ಯಕ್ಷ ಮಹಾಂತಪ್ಪಗೌಡ ಪಾಟೀಲ್, ಗಣ್ಯ ವರ್ತಕ ಬಿ.ಸಿ.ಮೋಟಗಿ,ಸಲಹಾ ಸಮಿತಿ ಪ್ರಮುಖ ಶಾಂತಪ್ಪ ಕಮತ, ಯುವ ಉದ್ಯಮಿ ಭರತಗೌಡ ಪಾಟೀಲ ನಡಹಳ್ಳಿ, ಬ್ಯಾಂಕ ಪ್ರಧಾನ ವ್ಯವಸ್ಥಾಪಕ ನಾಗರಾಜ ಗಂಗನಗೌಡರ ಇದ್ದರು.ಡಿ.ಆರ್.ಮಳಖೇಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೀರೇಶ ಬಂಗಾರಗುಂಡ ವಚನಗೀತೆಗೆ ಭರತನಾಟ್ಯ ನೃತ್ಯಗೈದರು. ಸಂಗಮೇಶ ಶಿವಣಗಿ ಸಂಗಡಿಗರು ಪ್ರಾರ್ಥಿಸಿದರು. ರಾಜು ಹಾದಿಮನಿ ನಿರೂಪಿಸಿದರು.

Latest News

ಹಣ ಬೇಡಿಕೆ ಇಟ್ಟಿದ್ದು ಸಾಬೀತುಪಡಿಸದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುವೆ-ನಾಟೀಕಾರ

ಹಣ ಬೇಡಿಕೆ ಇಟ್ಟಿದ್ದು ಸಾಬೀತುಪಡಿಸದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುವೆ-ನಾಟೀಕಾರ

ಮುದ್ದೇಬಿಹಾಳ : ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ತಾವು ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ತಮ್ಮ

ದಸ್ತು ಬರಹಗಾರರ ಸಂಘಕ್ಕೆ ಆಯ್ಕೆ

ದಸ್ತು ಬರಹಗಾರರ ಸಂಘಕ್ಕೆ ಆಯ್ಕೆ

ಮುದ್ದೇಬಿಹಾಳ : ತಾಲೂಕಾ ದಸ್ತು ಬರಹಗಾರರ ಸಂಘದ ನೂತನ ಪದಾಧಿಕಾರಿಗಳನ್ನು ಈಚೇಗೆ ಆಯ್ಕೆ ಮಾಡಲಾಯಿತು.

ಹೋರಾಟಗಾರನಿಂದ ಹಣಕ್ಕೆ ಬೇಡಿಕೆ : ಪುರಸಭೆ ಅಧ್ಯಕ್ಷ ಗೊಳಸಂಗಿ ಆರೋಪ

ಹೋರಾಟಗಾರನಿಂದ ಹಣಕ್ಕೆ ಬೇಡಿಕೆ : ಪುರಸಭೆ ಅಧ್ಯಕ್ಷ ಗೊಳಸಂಗಿ ಆರೋಪ

ಮುದ್ದೇಬಿಹಾಳ : ತಾಲ್ಲೂಕು ಪಂಚಾಯಿತಿಗೆ ಸೇರಿದ ವಸತಿ ಗೃಹಗಳನ್ನು ನೆಲಸಮಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಪುರಸಭೆ

ತಾಪಂ ಕಚೇರಿ ಎದುರು ಧರಣಿ: ಪುರಸಭೆ ಮುಖ್ಯಾಧಿಕಾರಿಗೆ ನೋಟಿಸ್ ನೀಡಿದ ತಾಪಂ ಇಒ

ತಾಪಂ ಕಚೇರಿ ಎದುರು ಧರಣಿ: ಪುರಸಭೆ ಮುಖ್ಯಾಧಿಕಾರಿಗೆ ನೋಟಿಸ್ ನೀಡಿದ ತಾಪಂ ಇಒ

ಮುದ್ದೇಬಿಹಾಳ : ಗ್ರಾಮದ ದೇವತೆ ಜಾತ್ರೆಯ ಸಮಯದಲ್ಲಿ ಪಟ್ಟಣದ ಲಕ್ಷ್ಮಿ ಚಿತ್ರಮಂದಿರದ ಎದುರಿಗೆ ಇರುವ

ಆ.12 ರಂದು ಕಿಲ್ಲಾ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆ

ಆ.12 ರಂದು ಕಿಲ್ಲಾ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆ

ಮುದ್ದೇಬಿಹಾಳ : ಪಟ್ಟಣದ ಕಿಲ್ಲಾ ಗಲ್ಲಿಯಲ್ಲಿರುವ ಗುಗ್ಗಳ ಬಸವೇಶ್ವರ ಹಾಗೂ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಆ.12 ರಂದು ನಡೆಸಲು ಊರಿನ ದೈವದವರು ನಿರ್ಣಯ ಕೈಗೊಂಡಿದ್ದಾರೆ. ಪಟ್ಟಣದ ಕುಂಬಾರ ಓಣಿಯಲ್ಲಿರುವ ಗ್ರಾಮದೇವತೆ ದೇವಸ್ಥಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದ ಕುರಿತ ಪೂರ್ವಭಾವಿ ಸಭೆಯಲ್ಲಿ ಜಾತ್ರೆಯ ಕುರಿತು ಚರ್ಚೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಯಿತು. ವೇ.ಆಯ್.ಬಿ.ಹಿರೇಮಠ ಮಾತನಾಡಿ, ಆ.12 ರಂದು ದೇವರನ್ನು ಗಂಗಸ್ಥಳಕ್ಕೆ ಕರೆದೊಯ್ಯುವುದು,9ಕ್ಕೆ ಪಿಲೇಕೆಮ್ಮ ದೇವಸ್ಥಾನದಿಂದ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಿಟಿ ಬಸ್ ಆರಂಭ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಿಟಿ ಬಸ್ ಆರಂಭ

ಮುದ್ದೇಬಿಹಾಳ : ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಮಾದರಿ ಎಸ್.ಸಿ.ಎಸ್.ಟಿ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನಿತ್ಯವೂ ವಿದ್ಯಾರ್ಥಿಗಳ ಓಡಾಟಕ್ಕೆ ನಗರ ಸಾರಿಗೆ ಬಸ್‌ನ್ನು ಮಂಗಳವಾರದಿಂದ ಆರಂಭಿಸಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಎಸ್.ಎಲ್.ಪಾಟೀಲ್ ತಿಳಿಸಿದ್ದಾರೆ. ಪಟ್ಟಣದ ಬಸ್ ನಿಲ್ದಾಣದಿಂದ ಕಾಲೇಜಿಗೆ ಸುಮಾರು 1.50 ಕಿ.ಮೀ ದೂರವಿದ್ದು ವಿದ್ಯಾರ್ಥಿಗಳು, ಉಪನ್ಯಾಸಕರ ಓಡಾಟಕ್ಕೆ ಸಮಸ್ಯೆಯಾಗಿದ್ದನ್ನು ಸಾರಿಗೆ ಘಟಕದ ಅಧಿಕಾರಿಗಳ ಗಮನಕ್ಕೆ ತಂದಾಗ ಕೂಡಲೇ ನಗರ ಸಾರಿಗೆ ಬಸ್ ಆರಂಭಕ್ಕೆ ಕ್ರಮ ಕೈಗೊಂಡಿದ್ದಾರೆ ಎಂದು