ಮುದ್ದೇಬಿಹಾಳ : ಪಟ್ಟಣದ ಹಳೆಯ ತಹಶೀಲ್ದಾರ ಕಚೇರಿ ಸಮೀಪದಲ್ಲಿರುವ ಏಳುಮಕ್ಕಳ ತಾಯಿಯ ಜಾತ್ರಾ ಮಹೋತ್ಸವ ಮೂರು ವರ್ಷಕ್ಕೊಮ್ಮೆ ಅದ್ದೂರಿಯಾಗಿ ಜರುಗುತ್ತಿದ್ದು ದೇವಿ ಚಿತ್ರದ ಮೆರವಣಿಗೆ ಸೋಮವಾರ ಅದ್ದೂರಿಯಾಗಿ ನಡೆಯಿತು.
ಪಟ್ಟಣದ ಕಿಲ್ಲಾದಲ್ಲಿರುವ ಹಳೆಯ ಬಾವಿಯಿಂದ ದೇವಿಯ ಚಿತ್ರದೊಂದಿಗೆ ದೇವಸ್ಥಾನದವರೆಗೆ 101 ಕುಂಭಗಳನ್ನು ಹೊತ್ತುಕೊಂಡ ಮಹಿಳೆಯರು ಮೆರವಣಿಗೆಯಲ್ಲಿ ಸಾಗಿದರು.
ಚಲವಾದಿ ಸಮಾಜದ ಮುಖಂಡರಾದ ರೇವಣಪ್ಪ ಹರಿಜನ, ಶಿವಪ್ಪ ಅಜಮನಿ, ಪುರಸಭೆ ಸದಸ್ಯ ಶಿವು ಶಿವಪೂರ, ಕೆಯುಸಿ ಬ್ಯಾಂಕನ ನಿರ್ದೇಶಕ ಶ್ರೀಕಾಂತ ಚಲವಾದಿ, ರವಿ ಚಲವಾದಿ, ಯಲ್ಲಪ್ಪ ಅಜಮನಿ, ಚನ್ನಪ್ಪ ಮೂಕಿಹಾಳ, ರಾಮು ಹಂಗರಗಿ, ಮಹಾಂತೇಶ ಚಲವಾದಿ, ಶಂಕರ ಅಜಮನಿ, ಪವಾಡೆಪ್ಪ ದೊಡ್ಡಮನಿ, ಸಿದ್ದಪ್ಪ ಚಲವಾದಿ ಸೇರಿದಂತೆ ಹಲವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮೇ.27 ರಂದು ವಾದಿ ಪ್ರತಿವಾದಿ ಗೀಗೀ ಪದಗಳ ಕಾರ್ಯಕ್ರಮ, ಸಾಯಂಕಾಲ 6ಕ್ಕೆ ಏಳುಮಕ್ಕಳ ತಾಯಿ ಜಾತ್ರಾ ಮಹೋತ್ಸವದ ಅಂಗವಾಗಿ ಧರ್ಮಸಭೆ ಹಾಗೂ ಪ್ರತಿಭಾ ಪುರಸ್ಕಾರ ನಡೆಯಲಿದೆ. ಕುಂಟೋಜಿ ಚೆನ್ನವೀರ ಶಿವಾಚಾರ್ಯರು ಸಾನಿಧ್ಯ ವಹಿಸಲಿದ್ದು ಶಾಸಕ ಸಿ. ಎಸ್. ನಾಡಗೌಡ ಅಧ್ಯಕ್ಷತೆ ವಹಿಸುವರು. ಹುಬ್ಬಳ್ಳಿ-ಧಾರವಾಡ ಶಾಸಕ ಪ್ರಸಾದ ಅಬ್ಬಯ, ಸಿದ್ದಣ್ಣ ಮೇಟಿ ಉದ್ಟಾಟಿಸುವರು. ಮಾಜಿ ಶಾಸಕ ಎ. ಎಸ್. ಪಾಟೀಲ್ ನಡಹಳ್ಳಿ, ಮಾಜಿ ಶಾಸಕ ರಾಜು ಆಲಗೂರ, ಪುರಸಭೆ ಅಧ್ಯಕ್ಷ್ಯ ಮಹಿಬೂಬ ಗೊಳಸಂಗಿ, ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಕಾಂಗ್ರೆಸ್ ಮುಖಂಡ ಸಿ. ಬಿ. ಅಸ್ಕಿ, ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ ಸೇರಿದಂತೆ ಅನೇಕರು ಆಗಮಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಂದು ರಾತ್ರಿ ರಸಮಂಜರಿ ಕಾರ್ಯಕ್ರಮ, ಮೇ. 28 ರಂದು ವಾದಿ ಪ್ರತಿವಾದಿ ಗೀ ಗೀ ಪದಗಳ ಕಾರ್ಯಕ್ರಮ, ಸಂಜೆ 6ಕ್ಕೆ ಕಲಶ ಶಿಖರಕ್ಕೇರಲಿದೆ ಎಂದು ಜಾತ್ರಾ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.