ಕುಷ್ಟಗಿ : ಗಣೇಶ ಮೂರ್ತಿ ವಿಸರ್ಜನೆ ಐದನೇ ದಿನವಾದ ಇಂದು ಪಟ್ಟಣದ ಮಾರುತಿ ನಗರದಲ್ಲಿ ಸಂಜೆ ಮೆರವಣಿಗೆಯಲ್ಲಿ ಡಿಜೆ ಯೊಂದಿಗೆ ಹೋಗುವ ಸಂದರ್ಭದಲ್ಲಿ ಕಲ್ಲೇಶ್ ಎನ್ನುವ ಯುವಕನ ಕಣ್ಣಿಗೆ ಪಟಾಕಿ ತಗುಲಿ ತೀರ್ವ ಗಾಯಗೊಂಡ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಪಟ್ಟಣದ ಮಾರುತಿ ನಗರದ ಗಣೇಶ ಮೂರ್ತಿ ವಿಸರ್ಜನೆಯ ಮೆರವಣಿಗೆ ಸಾಗುವಾಗ ಹಚ್ಚಿದ ಪಟಾಕಿ ನಿಂದ ಯುವಕನ ಮುಖದ ಎಡ ಕಣ್ಣು ಹಾಗೂ ಕಣ್ಣಿನ ಕೆಳಭಾಗ ಸಂಪೂರ್ಣ ಸುಟ್ಟು ಹೋಗಿದೆ.
ತಕ್ಷಣವೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
ಇದನ್ನೂ ಓದಿ: ಲಿಂಗಾಯತರು ನಾವು ಎಷ್ಟರ ಮಟ್ಟಿಗೆ ಧರ್ಮ ಪಾಲನೆ ಮಾಡುತ್ತಿದ್ದೇವೆ: ಶಾಸಕ ವಿಜಯಾನಂದ ಕಾಶಪ್ಪನವರ ಪ್ರಶ್ನೆ
ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.