ಬಿಹಾರ: ಇದೊಂದು ವಿಚಿತ್ರವಾದ ಅಪರೂಪ ಘಟನೆ. ಒಂದು ವರ್ಷದ ಮಗು ಒಂದು ಆಟವಾಡುತ್ತಿದ್ದಾಗ, ತನ್ನ ಬಾಯಲ್ಲಿ ಹಾವಿನ ಮರಿಯನ್ನು ಜಗಿದು ಕೊಂದಿದೆ! (Viral news)
ಹೌದು, ಹಾವಿನ ಮರಿಯನ್ನು ಮಗು ಜಗಿಯುತ್ತಿರುವುದನ್ನು ಕಂಡ ಮಗುವಿನ ತಾಯಿ ಕೂಡಲೇ ಮಗುವಿನ ಬಾಯಲ್ಲಿದ್ದ ಹಾವನ್ನು ಹೊರತೆಗೆದು ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಪಾಸಣೆ ನಡೆಸಿ ಭಯಪಡುವ ಅಗತ್ಯವಿಲ್ಲ, ಮಗು ಸಂಪೂರ್ಣ ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
Join Our Telegram: https://t.me/dcgkannada
ಅದನ್ನು ನಂಬಲು ಕುಟುಂಬದವರಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ, ಮಗುವನ್ನು ಪುನಃ ಪರೀಕ್ಷಿಸುವಂತೆ ವೈದ್ಯರಿಗೆ ಮತ್ತೆ ಕೇಳಿಕೊಂಡರು. ಗಾಯವನ್ನು ನೋಡಿದ ವೈದ್ಯರು, ಈ ಗಾಯವು ವಿಷಕಾರಿಯಲ್ಲ ಎಂದು ಹೇಳಿದ್ದಾರೆ.
ಈ ಘಟನೆಯು ಬಿಹಾರದ ಫತೇಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಜಮುಹರ್ ಗ್ರಾಮದಲ್ಲಿ ಮನೆಯ ಟೆರೇಸ್ ಮೇಲೆ ಸಂಭವಿಸಿದೆ. ಮನೆಯ ಟೆರೇಸ್ ಮೇಲೆ ಹಾವು ಹರಿದಾಡುತ್ತಾ, ಮಗು ಇದ್ದ ಕಡೆ ಬಂದಿದೆ. ಈ ವೇಳೆ ಮಗು ಮರಿ ಹಾವನ್ನು ಹಿಡಿದು ಅದರೊಂದಿಗೆ ಆಟವಾಡಲು ಆರಂಭಿಸಿದೆ. ಆಟವಾಡುತ್ತಲೇ ಹಾವಿನ ಮರಿಯನ್ನು ಬಾಯಲ್ಲಿ ಒತ್ತಿಕೊಂಡು ಜಗಿಯಲು ಆರಂಭಿಸಿದೆ. ಮಗು ಜಗಿದಿದ್ದರಿಂದ ಹಾವಿನ ಮರಿ ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದೆ. (Viral news)
ಇನ್ನು, ಹಾವನ್ನು ಕಚ್ಚಿದ ಬಾಲಕ ಫತೇಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಜಮುಹರ್ ಗ್ರಾಮದ ನಿವಾಸಿ ರಾಕೇಶ್ ಕುಮಾರ್ ಅವರ 1 ವರ್ಷದ ಮಗು ರಿಯಾನ್ಸ್ ಕುಮಾರ್ ಎಂದು ಗುರುತಿಸಲಾಗಿದೆ. ಈಗ ಮಗು ಸಂಪೂರ್ಣವಾಗಿ ಆರೋಗ್ಯವಾಗಿದೆ.
ಇದನ್ನು ಓದಿ: Sad news: ಪತ್ನಿ ಅನುಮಾನಸ್ಪದ ಸಾವು.. ಪತಿ ಮನೆಗೆ ಬೆಂಕಿ ಹಚ್ಚಿದ ಹೆಂಡತಿ ಸಂಬಂಧಿಗಳು… ಆತ್ಮಹತ್ಯೆ ಮಾಡಿಕೊಂಡ ಗಂಡ!