Crime news: Child killed in husband-wife fight..!

Sad news: ಪತ್ನಿ ಅನುಮಾನಸ್ಪದ ಸಾವು.. ಪತಿ ಮನೆಗೆ ಬೆಂಕಿ ಹಚ್ಚಿದ ಹೆಂಡತಿ ಸಂಬಂಧಿಗಳು… ಆತ್ಮಹತ್ಯೆ ಮಾಡಿಕೊಂಡ ಗಂಡ!

Sad news: ಪತ್ನಿ ಅನುಮಾನಸ್ಪದ ಸಾವು.. ಪತಿ ಮನೆಗೆ ಬೆಂಕಿ ಹಚ್ಚಿದ ಹೆಂಡತಿ ಸಂಬಂಧಿಗಳು… ಆತ್ಮಹತ್ಯೆ ಮಾಡಿಕೊಂಡ ಗಂಡ!

ಮಂಡ್ಯ: ಮಂಡ್ಯದಲ್ಲಿ ಗೃಹಿಣಿ ಅನುಮಾಸ್ಪದ ಸಾವನ್ನಪ್ಪಿದ್ದು, ಸಿಟ್ಟಿಗೆದ್ದ ಸಂಬಂಧಿಕರು ಗಂಡನ ಮನೆಗೆ ಬೆಂಕಿ ಹಾಕಿರುವ ದುರ್ಘಟನೆ ಸಂಭವಿಸಿದೆ. (Sad news)

ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯ ಗದ್ದೆ ಹೊಸೂರಿನಲ್ಲಿ ಈ ಘಟನೆ ನಡೆದಿದೆ. ಸ್ವಾತಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಗೃಹಿಣಿ ಎಂದು ಗುರುತಿಸಲಾಗಿದೆ. ಈ ನಡುವೆ ಸ್ವಾತಿ ಮನೆಗೆ ಸಂಬಂಧಿಕರು ಬೆಂಕಿಗೆ ಇಡುತ್ತಿದ್ದ ಹಾಗೇ ಗಂಡ ಮೋಹನ್‌ ಕೂಡ ಕರೆಗೆ ಹಾರಿ ಆತ್ಮಹತ್ಯೆ (Sad news) ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

Join Our Telegram: https://t.me/dcgkannada

ಸದ್ಯ, ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.

ಯುವಕನ ಮರ್ಮಾಂಗವನ್ನೇ ಕತ್ತರಿಸಿದ ತೃತೀಯ ಲಿಂಗಿಗಳು!

ಬೆಂಗಳೂರು: ಯುವಕನೊಬ್ಬನನ್ನು ತೃತೀಯಲಿಂಗಿಯಾಗಿ ಪರಿವರ್ತನೆಯಾಗುವಂತೆ ಒತ್ತಾಯಿಸಿ ಬಲವಂತವಾಗಿ ಆತನ ಪ್ರಜ್ಞೆ ತಪ್ಪಿಸಿ ಮರ್ಮಾಂಗ ಕತ್ತರಿಸಿ ಹಿಂಸೆ ನೀಡಿದ ಆರೋಪದಲ್ಲಿ ಐವರು ತೃತೀಯ ಲಿಂಗಿಗಳ ವಿರುದ್ಧ ಪುಲಿಕೇಶಿನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಚಿತ್ರಾ, ಅಶ್ವಿನಿ, ಕಾಜಲ್, ಪ್ರೀತಿ ಹಾಗೂ ಮುಗಿಲ ಎಂಬ ತೃತೀಯ ಲಿಂಗಿಗಳ ವಿರುದ್ಧ ಪೊಲೀಸರು ಎಫ್‌ಐಆ‌ರ್ ದಾಖಲಿಸಿ ಬಲೆ ಬೀಸಿದ್ದಾರೆ.

ಏನಿದು ಪ್ರಕರಣ?:

ದೂರುದಾರ ಯುವಕ 3 ವರ್ಷದ ಹಿಂದೆ ಅಂಬೇಡ್ಕರ್ ಕಾಲೇಜು ಬಳಿ ಟೀ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಆರೋಪಿಗಳು ಟೀ ಕುಡಿಯಲು ಆಗಾಗ ಅಂಗಡಿಗೆ ಬರುತ್ತಿದ್ದರು. ಈ ವೇಳೆ ಯುವಕನನ್ನು ಪರಿಚಯಿಸಿ ಕೊಂಡು, ನೀನು ನಮ್ಮ ಜತೆ ಬಂದರೆ ಒಳ್ಳೆಯ ಮನೆ ಹೆಣ್ಣಾದರೆ ಹೆಚ್ಚು ದುಡಿಯುವೆ ಎಂದು ಯುವಕನಿಗೆ ಒತ್ತಾಯ ಅದಕ್ಕೆ ಇಂಜೆಕ್ಷನ್ ನೀಡಿ ಶಸ್ತ್ರಚಿಕಿತ್ಸೆಯಲ್ಲಿ ಇರಿಸಿ ಸಂಪಾದನೆಗೆ ದಾರಿ ಮಾಡಿಕೊಡುವು ದಾಗಿ ಪುಸಲಾಯಿಸಿದ್ದಾರೆ. ಯುವಕ ನಾನು ಬರು ವುದಿಲ್ಲ ಎಂದರೂ ಬಲವಂತವಾಗಿ ಟ್ಯಾನರಿ ರಸ್ತೆಯ ಮನೆಯೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ.

ಪೋಷಕರ ಕೊಲೆ ಮಾಡುವುದಾಗಿ ಬೆದರಿಕೆ:

ನೀನು ಭಿಕ್ಷಾಟನೆ ಮಾಡದಿದ್ದರೆ, ನಿನ್ನ ಮನೆಯವರನ್ನು ಕೊಲೆ ಮಾಡುವುದಾಗಿ ಯುವಕನನ್ನು ಬೆದರಿಸಿದ್ದಾರೆ. ಬಲವಂತವಾಗಿ 3 ವರ್ಷಗಳ ಕಾಲ ಯುವಕನಿಂದ ಭಿಕ್ಷಾಟನೆ ಮಾಡಿಸಿ ಹಣ ಪಡೆದಿದ್ದಾರೆ. ಕಳೆದ ಜು.17ರಂದು ನೀನು ಗಂಡಸಾಗಿ ರುವಾಗಲೇ ಪ್ರತಿ ದಿನ 2000 ರು. ದುಡಿದು ಕೊಡುತ್ತಿರುವೆ. ನೀನು ಹೆಣ್ಣಾದರೆ ಹೆಚ್ಚು ದುಡಿಯಬಹುದು ಎಂದಿದ್ದಾರೆ.

ಪ್ರಜ್ಞೆ ತಪ್ಪಿಸಿ ಮರ್ಮಾಂಗ ಕತ್ತರಿಸಿದರು: ಬಳಿಕ ಆರೋಪಿಗಳು ಗಾಂಜಾ, ಮದ್ಯ ಸೇವಿಸಿ ಮಹಿಳೆ ಯೊಬ್ಬಳನ್ನು ಮನೆಗೆ ಕರೆಸಿಕೊಂಡು ಬಲವಂತವಾಗಿ ಯುವಕನಿಗೆ ಇಂಜೆಕ್ಷನ್ ನೀಡಿ ಪ್ರಜ್ಞೆ ತಪ್ಪಿಸಿದ್ದಾರೆ. ನಂತರ ಆತನ ಮರ್ಮಾಂಗ ಕತ್ತರಿಸಿದ್ದಾರೆ. ಆತ ಎಚ್ಚರಗೊಂಡಾಗ ಮರ್ಮಾಂಗದ ಬಳಿ ರಕ್ತಗಾಯ ವಾಗಿದ್ದು, ಪೈಪ್‌ವೊಂದನ್ನು ಅಳವಡಿಸಿರುವುದು ಕಂಡು ಬಂದಿದೆ. ಬಳಿಕ ಆರೋಪಿಗಳು ಯುವಕನನ್ನು ಆ.3ರ ವರೆಗೂ ಆ ಮನೆಯಲ್ಲೇ ಕೂಡಿ ಹಾಕಿ ಬಳಿಕ ಬೇರೆಡೆ ಕರೆದೊಯು ಪೂಜೆ ಮಾಡಿಸಿದ್ದಾರೆ.

ಲೈಂಗಿಕ ಕಾರ್ಯಕರ್ತೆ ಕೆಲಸಕ್ಕೆ ಒತ್ತಾಯ:

ಇನ್ನು ಮುಂದೆ ನೀನು ಭಿಕ್ಷಾಟನೆ ಮಾಡುವುದರ ಜತೆಗೆ ಲೈಂಗಿಕ ಕಾರ್ಯಕರ್ತೆಯಾಗಿ ಕೆಲಸ ಮಾಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಯುವಕ ಒಪ್ಪದಿದ್ದಾಗ 5 ಲಕ್ಷ ರು. ಕೊಡುವಂತೆ ಒತ್ತಾಯಿಸಿದ್ದಾರೆ. ಆರೋಪಿ ಗಳ ಹಿಂಸೆ ತಾಳಲಾರದೆ ತಪ್ಪಿಸಿಕೊಂಡುದೂರು ನೀಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Crime: ಲವ್ ಮಾಡಲ್ಲ ಎಂದ ಅನ್ಯ ಕೋಮಿನ ಬಾಲಕಿ.. ಬೇಡಿನಿಂದ ಕೈ ಕೊಯ್ದ ಓಡಿದ ಭೂಪ..!

Latest News

ತಾಯಿ-ಮಗನನ್ನು ಮಧ್ಯರಾತ್ರಿ ಊರಿಗೆ ತಲುಪಿಸಿ ಮಾನವೀಯತೆ ಮೆರೆದ ‘112’ ಪೊಲೀಸರು..!

ತಾಯಿ-ಮಗನನ್ನು ಮಧ್ಯರಾತ್ರಿ ಊರಿಗೆ ತಲುಪಿಸಿ ಮಾನವೀಯತೆ ಮೆರೆದ ‘112’ ಪೊಲೀಸರು..!

ಮುದ್ದೇಬಿಹಾಳ : ತಮ್ಮೂರಿಗೆ ಹೋಗುವ ಬಸ್ ತಪ್ಪಿಸಿಕೊಂಡಿದ್ದ ಕನ್ನಡ ಅಸ್ಪಷ್ಟವಾಗಿ ಮಾತನಾಡುವ ತಾಯಿ ಹಾಗೂ

ಎ.ಎಸ್.ಎನ್ ಕಾನೂನು ಮಾಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ

ಎ.ಎಸ್.ಎನ್ ಕಾನೂನು ಮಾಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ

ನಾಲತವಾಡ : ನವೆಂಬರ್ 1ರಂದು ಎ.ಎಸ್.ಎನ್. ಕಾನೂನು ಮಾಹಾವಿದ್ಯಾಲಯ ನಾಲತವಾಡದಲ್ಲಿ 70ನೇ ಕನ್ನಡ ರಾಜ್ಯೋತ್ಸವ

ಮುದ್ದೇಬಿಹಾಳ ಬಂದ್ ಸಂಪೂರ್ಣ ಯಶಸ್ವಿ

ಮುದ್ದೇಬಿಹಾಳ ಬಂದ್ ಸಂಪೂರ್ಣ ಯಶಸ್ವಿ

ಮುದ್ದೇಬಿಹಾಳ : ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರಿಗೆ ಶೂ ಎಸೆತ ಪ್ರಕರಣ,

ಇಂಗಳಗೇರಿ ಗ್ರಾಪಂ ನೂತನ ಕಟ್ಟಡಕ್ಕೆ ಅನುದಾನ – ಶಾಸಕ ಸಿ.ಎಸ್.ನಾಡಗೌಡ

ಇಂಗಳಗೇರಿ ಗ್ರಾಪಂ ನೂತನ ಕಟ್ಟಡಕ್ಕೆ ಅನುದಾನ – ಶಾಸಕ ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಗ್ರಾಮ ಪಂಚಾಯಿತಿ ಚುನಾವಣೆಗಳು ಸ್ಥಳೀಯ ಮಟ್ಟದಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದು ಇದರಲ್ಲಿಪಕ್ಷದ ಪಾತ್ರ

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನಾ ವರದಿ ದಿಕ್ಸೂಚಿ ಆಗಿರಲಿ: ಸಚಿವ ಸಂತೋಷ್ ಲಾಡ್

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನಾ ವರದಿ ದಿಕ್ಸೂಚಿ ಆಗಿರಲಿ: ಸಚಿವ ಸಂತೋಷ್ ಲಾಡ್

ಧಾರವಾಡ ಅ.27: ಸುಮಾರು ವರ್ಷಗಳ ನಂತರ ಪ್ರಥಮ ಬಾರಿಗೆ ಜಿಲ್ಲಾ ಅಭಿವೃದ್ಧಿ ಯೋಜನೆ ರೂಪಿಸಲು ಸರಕಾರ ಅವಕಾಶ ನೀಡಿದ್ದು, ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ನಿಂದ ರಾಜ್ಯದಲ್ಲಿಯೇ ಮೊದಲನೇಯದಾಗಿ ಅಭಿವೃದ್ಧಿ ಯೋಜನಾ ವರದಿ ಕುರಿತ ಸಭೆ ಆಯೋಜಿಸಲಾಗಿದೆ. ಅಭಿವೃದ್ಧಿ ಯೋಜನಾ ವರದಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದಿಕ್ಸೂಚಿ ಆಗಿರಬೇಕು ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಎಸ್‌ ಲಾಡ್ ಅವರು ಹೇಳಿದರು. ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ

ಮುದ್ದೇಬಿಹಾಳ : TAPCMS  ಆಡಳಿತ ಮತ್ತೆ ಮನೋಹರ ಮೇಟಿ ‘ಕೈ’ಗೆ

ಮುದ್ದೇಬಿಹಾಳ : TAPCMS ಆಡಳಿತ ಮತ್ತೆ ಮನೋಹರ ಮೇಟಿ ‘ಕೈ’ಗೆ

ಮುದ್ದೇಬಿಹಾಳ : ಇಲ್ಲಿನ ಟಿ.ಎ.ಪಿ.ಸಿ.ಎಂ.ಎಸ್ ಆಡಳಿತ ಮತ್ತೆ ಎರಡನೇ ಬಾರಿಗೆ ಅಧ್ಯಕ್ಷರಾಗಿ ಮನೋಹರ ಮೇಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು ಟಿಎಪಿಸಿಎಂಎಸ್‌ನಲ್ಲಿ ತಮ್ಮ ಹಿಡಿತ ಸಡಿಲಗೊಂಡಿಲ್ಲ ಎಂಬ ಸಂದೇಶವನ್ನು ತಮ್ಮ ವಿರೋಧಿಗಳಿಗೆ ರವಾನಿಸಿದ್ದಾರೆ. ಪಟ್ಟಣದ ಏಪಿಎಂಸಿಯಲ್ಲಿರುವ ಸಂಘದ ಕಚೇರಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲಾಯಿತು.ಅಧ್ಯಕ್ಷ ಸ್ಥಾನಕ್ಕೆ ಮನೋಹರ ಎಸ್.ಮೇಟಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚಿದಾನಂದ ಎಂ.ಸೀತಿಮನಿ ಎರಡೂ ಸ್ಥಾನಗಳಿಗೆ ತಲಾ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಆರ್.ಎನ್.ಆಳೂರ ಅವಿರೋಧ