ಪಾಕಿಸ್ತಾನ: ಪಾಕ್ ಭಯೋತ್ಪಾದನೆ ಮತ್ತು ಕೆಲವೊಮ್ಮೆ ಆರ್ಥಿಕ ಪ್ರಕ್ಷುಬ್ಧತೆಯಿಂದಾಗಿ ಸುದ್ದಿಯಾಗುವುದು ಸಹಜ. ಆದರೆ ಈ ಬಾರಿ ಬೇರೆಯದೇ ಕಾರಣಕ್ಕೆ ಸದ್ದು ಮಾಡುತ್ತಿದೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada
ಈಗ ವಿಚಿತ್ರ ವೀಡಿಯೊ ಒಂದು ಹರಿದಾಡುತ್ತಿದೆ. ಆ ಕಾರಣಕ್ಕೆ ಸುದ್ದಿಯಾಗಿದೆ. ಇದರಲ್ಲಿ, ಪಾಕಿಸ್ತಾನದ ಹುಡುಗಿಯೊಬ್ಬಳು ತನ್ನ ತಲೆಯ ಮೇಲೆ ಸಿಸಿಟಿವಿ ಕ್ಯಾಮೆರಾವನ್ನು ಧರಿಸಿದ್ದಾಳೆ!
ಜೊತೆಗೆ ಆಕೆ ಹೇಳಿದ ಮಾತುಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. “ಪಾಕಿಸ್ತಾನದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ತನ್ನ ಕುಟುಂಬವು ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ಯಾಮೆರಾವನ್ನು ಸ್ಥಾಪಿಸಿದೆ ಎಂದು ಹೇಳುತ್ತಿದ್ದಾಳೆ”.
ಘರ್ ಕೆ ಕಾಲೇಶ್ ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಕುಟುಂಬವು ಹುಡುಗಿಯ ಸುರಕ್ಷತೆಯ ಬಗ್ಗೆ ತುಂಬಾ ಕಾಳಜಿ ವಹಿಸುತ್ತದೆ. ಆದ್ದರಿಂದ ಅವಳು ಎಲ್ಲಿಗೆ ಹೋದರೂ ಅವಳು ಯಾರನ್ನು ಭೇಟಿಯಾದರೂ ಅವಳ ಕುಟುಂಬಕ್ಕೆ ಅದರ ಬಗ್ಗೆ ತಿಳಿಯುತ್ತದೆ.
ಪಾಕಿಸ್ತಾನಿ ಹುಡುಗಿಯ ಈ ವೀಡಿಯೊ ಜನರನ್ನು ಆಶ್ಚರ್ಯಗೊಳಿಸಿದೆ. ಈ ವಿಡಿಯೋವನ್ನು ಸೆಪ್ಟೆಂಬರ್ 6 ರಂದು ಅಪ್ಲೋಡ್ ಮಾಡಲಾಗಿದೆ. ಇದುವರೆಗೆ ಸಾವಿರಾರು ವೀಕ್ಷಣೆಗಳು ಬಂದಿವೆ. ಒಬ್ಬ ಬಳಕೆದಾರರು ಇದನ್ನು ಟ್ರೋಲ್ ಮಾಡಿದ್ದಾರೆ. ಚಲಿಸುವ ಕ್ಯಾಮೆರಾಮನ್ ಎಂದು ಕರೆದಿದ್ದಾರೆ.
ಇದನ್ನೂ ಓದಿ: Babar Azam: ಮದುವೆಯಾದ್ರೆ ಫಾರ್ಮ್ಗೆ ಬರ್ತಿಯಾ! ಬಾಬರ್ ಆಝಂಗೆ ಮಾಜಿ ಆಟಗಾರನ ಸಲಹೆ
ಇದು ಪಾಕಿಸ್ತಾನದಲ್ಲಿ ಮಾತ್ರ ಸಂಭವಿಸಬಹುದು ಎಂದು ಕೆಲವರು ಕುಹಕವಾಡಿತ್ತಿದ್ದಾರೆ.
Pakistan🫡😭
— Ghar Ke Kalesh (@gharkekalesh) September 6, 2024
pic.twitter.com/Hdql8R2ejt